ಮುಖ್ಯಮಂತ್ರಿ ಭೇಟಿಯಾದ ಕೂಡ್ಲಿಗಿ ಕಾಂಗ್ರೇಸ್ ಧುರೀಣರು, ಎನ್.ವೈ ಗೋಪಾಲಕೃಷ್ಣರನ್ನು ಸಚಿವರನ್ನಾಗಿಸಿ – ಶಾಸಕರ ನೇತೃತ್ವದಲ್ಲಿ ಮುಖಂಡರ ಮನವಿ.

ಮೊಳಕಾಲ್ಮುರು ಜೂ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮಾಜಿ ಉಪ ಸಭಾಪತಿಗಳು, ಹಾಗೂ ಏಳನೇ ಭಾರಿಗೆ ಶಾಸಕರಾಗಿರುವ ಹಿರಿಯ ರಾಜಕಾರಣಿ. ಮೊಳಕಾಲ್ಮೂರು ಶಾಸಕರಾದ ಎನ್.ವೈ ಗೋಪಾಲಕೃಷ್ಣರವರನ್ನು ಸಚಿವರನ್ನಾಗಿಸ ಬೇಕೆಂದು ಕೂಡ್ಲಿಗಿ ಶಾಸಕರಾದ ಎನ್.ಟಿ ಶ್ರೀನಿವಾಸರವರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ ರವರ ನೇತೃತ್ವದಲ್ಲಿ. ಕೂಡ್ಲಿಗಿ ಹಾಗೂ ಮೊಳಕಾಲ್ಮೂರು ಭಾಗದ ಕಾಂಗ್ರೇಸ್ ಧುರೀಣರು, ಇತ್ತೀಚಿಗೆ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರವರನ್ನು. ಬೆಂಗಳೂರಿನ ಮುಖ್ಯ ಮಂತ್ರಿರವರ ಕಾವೇರಿ ನಿವಾಸದಲ್ಲಿ ಅವರನ್ನು ಭೇಟಿಯಾಗಿ, ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಪಂಗಡ ಸಮುದಾಯದ. ರಾಜ್ಯದ ಅತ್ಯಂತ ಅನುಭವಿ ಹಿರಿಯ ಶಾಸಕರಾದ, ಎನ್.ವೈ ಗೋಪಾಲಕೃಷ್ಣ ರವರಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕೆಂದು ಮನವಿ ಮಾಡಿದ್ದಾರೆ.

ಗುಂಡುಮುಣುಗು ತಿಪ್ಪೇಸ್ವಾಮಿರವರು ಮುಖ್ಯ ಮಂತ್ರಿಯವರಲ್ಲಿ ಮಾತನಾಡಿ, ಎನ್.ವೈ ಗೋಪಾಲಕೃಷ್ಣ ರವರು ಪರಿಶಿಷ್ಟ ಪಂಗಡ ಸಮುದಾಯದ ಕ್ರಿಯಾಶೀಲ ಹಿರಿಯ ಶಾಸಕರಾಗಿದ್ದಾರೆ. ಮಾತ್ರವಲ್ಲ ಅವರು ಸರ್ವ ಜನಾಂಗಗಳ ಜನಾನುರಾಗಿದ್ದಾರೆ, ಏಳು ಭಾರೀ ಶಾಸಕರಾಗುವ ಮೂಲಕ ರಾಜ್ಯ ಕಂಡ ಅತ್ಯಂತ ಅನುಭವಿ ಶಾಸಕರಾಗಿದ್ದಾರೆ.

ಪ್ರತಿಭಾರಿ ಗೆದ್ದಾಗಲೂ ಅವರು ಕ್ಷೇತ್ರ ಅಭಿವೃದ್ಧಿಗೆ, ಸಾವಿರಾರು ಕೋಟಿ ಅನುಧಾನ ತಂದು ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಮತ್ತು ಜನಾನುರಾಗಿದ್ದಾರೆ. ಕಾರಣ ಅವರನ್ನು ಸಚಿವರನ್ನಾಗಿ ನೇಮಿಸಿದ್ದಲ್ಲಿ, ವಿಜಯನಗರ ಹಾಗೂ ಬಳ್ಳಾರಿ ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಸಾಧ್ಯ. ಮತ್ತು ಕಲ್ಯಾಣ ಕರ್ನಾಟಕವನ್ನು ಕಾಂಗ್ರೆಸ್‌ ಭದ್ರಕೋಟೆ ಯನ್ನಾಗಿಸುವುದರಲ್ಲಿ ಸಂಧೇಹವಿಲ್ಲ. ಕಾರಣ ಎನ್.ವೈ ಗೋಪಾಲಕೃಷ್ಣರವರನ್ನು ಸಚಿವರನ್ನಾಗಿಸಿ ಎಂದು ಮುಖ್ಯಮಂತ್ರಿಗಳಾದ ಡಿ.ಕ ಶಿವಕುಮಾರವರಲ್ಲಿ ಗುಂಡುಮುಣುಗು ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು ಮಾತನಾಡಿ, ಸರಳ ಸಜ್ಜನಿಕೆಯ ರಾಜ್ಯದ ಹಿರಿಯ ಶಾಸಕರಾದ ಎನ್.ವೈ ಗೋಪಾಲಕೃಷ್ಣ ರವರು. ಮಾಜಿ ಉಪ ಸಭಾಪತಿಗಳಾಗಿದ್ದು, ಏಳು ಬಾರಿ ಶಾಸಕರಾಗಿರುವ ಅನುಭವಿ ರಾಜಕಾರಣಿಗಳಾಗಿದ್ದಾರೆ. ಅವರನ್ನು ಸಚಿವರನ್ನಾಗಿ ನೇಮಿಸಿದ್ದಲ್ಲಿ, ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಸಾಧ್ಯ ಹಾಗೂ ಪಕ್ಷದ ಏಳ್ಗೆಗೂ ಅನುಕೂಲ ವಾಗಲಿದೆ ಎಂದು ಮುಖ್ಯಮಂತ್ರಿಗಳಲ್ಲಿ ಕೋರಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಸಹ ಭೇಟಿ ಮಾಡಿ, ಅವರಲ್ಲಿಯೂ ಕೂಡ ಎನ್ ವೈ ಗೋಪಾಲಕೃಷ್ಣ ರವರನ್ನು ಸಚಿವರನ್ನಾಗಿ ಮಾಡುವಂತೆ ಕಾಂಗ್ರೆಸ್‌ ಧುರೀಣರು ಕೋರಿದ್ದಾರೆ.

ಈ ಸಂದರ್ಭದಲ್ಲಿ ಅನೇಕ ಸಚಿವರು, ಹಾಗೂ ಶಾಸಕರು ಕೆಲ ಸಂಸದರು ಇದ್ದರು. ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡರಾದ ಎಪಿಎಮ್ಸಿ ಅಧ್ಯಕ್ಷ ಬೋಸಯ್ಯ, ನಿವೃತ್ತ ಶಿಕ್ಷಕರಾದ ತಳವಾರ ಶರಣಪ್ಪ, ನಿಂಬಳಗೇರೆ ಕಲ್ಲೇಶಪ್ಪ, ಗಾಣಗಟ್ಟೆ ಮಹಂತೇಶ, ಪ‍ಾಪಾನಾಯ್ಕ, ಬೊಮ್ಮಣ್ಣ, ಸಕಲಾಪುರದ ಹಟ್ಟಿಹರೀಶ, ಪಾಲಯ್ಯನಕೋಟೆ ಕಲ್ಲೇಶ, ಕುಪ್ಪನಕೇರಿ ಸಿದ್ದೇಶ, ಇಂಜಿನಿಯರ್ ಶರಣಪ್ಪ, ಯಂಬಳಿ ಮಂಜುನಾಥ್ ಹಾಗೂ ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು. ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button