ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಕುಸಿತ ; ಹೇಗಿದೆ ಈಗಿನ ರೇಟ್….!

ಎರಡು ದಿನಗಳಿಂದ ಸತತವಾಗಿ ಏರುತ್ತಿದ್ದ ಚಿನ್ನದ ಬೆಲೆ ಇಂದು ದಿಢೀರ್ ಅಂತ ಮತ್ತೆ ಕುಸಿದಿದ್ದು ನಿನ್ನೆಗೆ ಹೋಲಿಸಿದರೆ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ ಇಂದು 20 ರೂ.ಗಳ ಕುಸಿತವಾಗಿದೆ. ಅಷ್ಟಕ್ಕೂ ಕಳೆದ ಎರಡು ವಾರಗಳ ಹಿಂದಿದ್ದ ಚಿನ್ನದ ಬೆಲೆಯನ್ನು ನೋಡಿದರೆ ಸದ್ಯ ಚಿನ್ನ ತುಟ್ಟಿಯಾಗಿರುವುದಂತೂ ನಿಜ.

ನಿನ್ನೆ ಪ್ರತಿ ಗ್ರಾಂಗೆ ರೂ. 5,220 ಕ್ಕೆ ಹೋಗಿ ತಲುಪಿದ್ದ ಆಭರಣ ಚಿನ್ನದ ಬೆಲೆ ಇಂದು ಮತ್ತೆ ಹತ್ತು ಗ್ರಾಂಗೆ ರೂ. 5,200ಕ್ಕೆ ಇಳಿದಿದೆ. ಮಿಕ್ಕಂತೆ ದೇಶದ ಇತರೆ ನಗರಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿರುವುದನ್ನು ಗಮನಿಸಬಹುದು.

ಭಾರತ ಸೇರಿದಂತೆ ಜಗತ್ತಿನಾದ್ಯಂತ ಚಿನ್ನದ ಮೇಲಿನ ಹೂಡಿಕೆಯು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಆಗಿರುವುದರಿಂದ ನಿತ್ಯ ಚಿನ್ನದ ವಹಿವಾಟು ನಡೆಯುತ್ತಿರುತ್ತದೆ. ಹಾಗಾಗಿ ಹೂಡಿಕೆದಾರರ ಮತ್ತು ಗ್ರಾಹಕರ ದೃಷ್ಟಿಯಿಂದ ಪ್ರತಿನಿತ್ಯ ಬೆಲೆಗಳ ಅಪ್ಡೇಟ್ ಸಾಕಷ್ಟು ಸಹಕಾರಿಯಾಗಲಿದೆ.

ಇಂದು ಚಿನ್ನ ಒಂದು ರೀತಿಯ ಭದ್ರತಾ ಠೇವಣಿ ಅಂದರೆ ಸೇಫ್ ಡಿಪಾಸಿಟ್ ಇದ್ದ ಹಾಗೆ. ಭವಿಷ್ಯದ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಜನರು ಅದನ್ನು ಕೊಳ್ಳುತ್ತಾರೆ. ಅಲ್ಲದೆ ಯಾವುದೇ ಮನುಷ್ಯನಿಗೆ ಆರ್ಥಿಕ ಕಷ್ಟ ತಲೆದೋರಿದಾಗ ಚಿನ್ನವೇ ಮೊದಲು ನೆರವಾಗುತ್ತದೆ. ಆದ್ದರಿಂದಲೇ ಭಾರತದಲ್ಲಿ ಬಹುತೇಕ ಎಲ್ಲ ರೀತಿಯ ಜನರು ಚಿನ್ನವನ್ನು ಕೊಳ್ಳಲು ಸದಾ ಸಿದ್ಧರಿರುತ್ತಾರೆ.ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ ಯಲ್ಲಿ ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಂ 22 ಕಾರಟ್ ಚಿನ್ನದ ದರ ರೂ. 52,050 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,950, ರೂ. 52,000, ರೂ. 52,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,150 ರೂ. ಆಗಿದೆ.

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,200 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,673 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 41,600 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 45,384 ಆಗಿದೆ.

ಇತ್ತ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 52,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 56,730 ಆಗಿದೆ. ಅಲ್ಲದೇ ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,20,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,67,300 ಆಗಿದೆ.

ಸತತವಾಗಿ ಎರಡು ದಿನಗಳಿಂದ ಏರುತ್ತಿದ್ದ ಚಿನ್ನದ ಬೆಲೆ ನಿನ್ನೆಗೆ ತಟಸ್ಥವಾಗಿದ್ದರೆ ಇಂದು ಇಳಿಕೆಯಾಗಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲೂ ಅಲ್ಪ ಇಳಿಕೆ ಕಂಡುಬಂದಿದೆ ಎನ್ನಬಹುದು. ಒಟ್ಟಾರೆ ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ದರ ರೂ. 72,200 ಆಗಿದೆ. ಚಿನ್ನದಂತೆ ಬೆಳ್ಳಿಯೂ ಸಹ ಹೂಡಿಕೆಯ ಸಾಧನವಾಗಿದ್ದು ಬಹಳಷ್ಟು ಜನರು ಬೆಳ್ಳಿಯ ಮೇಲೆಯೂ ಹೂಡಿಕೆ ಮಾಡುತ್ತಿರುತ್ತಾರೆ.

ಹಾಗೆ ನೋಡಿದರೆ ಬಂಗಾರದೊಂದಿಗೆ ಹೋಲಿಸಿದರೆ ಬೆಳ್ಳಿ ಅಷ್ಟೊಂದು ತುಟ್ಟಿಯಲ್ಲ. ಏಕೆಂದರೆ, ಬಂಗಾರ ಎಂಬುದು ಒಂದು ಅಪರೂಪದ ಲೋಹವಾಗಿದ್ದರೆ ಬೆಳ್ಳಿ ಅಪರೂಪ ಎಂದೇನಿಲ್ಲ. ಅಲ್ಲದೆ ಜಾಗತಿಕವಾಗಿಯೂ ಬಂಗಾರಕ್ಕೆ ಹೋಲಿಸಿದರೆ ಬೆಳ್ಳಿಗೆ ಬೇಡಿಕೆ ಸ್ವಲ್ಪ ಕಡಿಮೆ.

ಆದರೆ, ಬೆಳ್ಳಿಯು ಕೇವಲ ಆಭರಣಗಳ ತಯಾರಿಕೆ ಮಾತ್ರವಲ್ಲದೆ ಹಲವು ಕ್ಷೇತ್ರಗಳಲ್ಲಿ ಯಥೇಚ್ಛವಾಗಿ ಬಳಸಲ್ಪಡುತ್ತದೆ. ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ಬೆಳ್ಳಿಯನ್ನು ಉಪಯೋಗಿಸಲಾಗುತ್ತದೆ. ವೈಜ್ಞಾಅನಿಕವಾಗಿ ಬೆಳ್ಳಿ ಉತ್ತಮವಾದ ಉಷ್ಣವಾಹಕಗಳಾಗಿದ್ದು ಕೆಲವು ಉಪಯುಕ್ತವಾದ ಗುಣಲಕ್ಷಣಗಳನ್ನು ಹೊಂದಿವೆ.

ಚಿನ್ನದಂತೆ ಬೆಳ್ಳಿಯೂ ಸಹ ಹೂಡಿಕೆ, ಡಾಲರ್ ವಿರುದ್ಧ ರೂಪಾಯಿಯ ಪೈಪೋಟಿ, ಹಣದುಬ್ಬರದಂತಹ ವಿಷಯಗಳಲ್ಲಿ ತನ್ನದೆ ಆದ ಪ್ರಭಾವ ಬೀರುತ್ತದೆ. ಹಾಗಾಗಿ ಚಿನ್ನ-ಬೆಳ್ಳಿಗಳ ಬೆಲೆಗಳು ಸಾಮಾನ್ಯವಾಗಿ ಯುಎಸ್ ಡಾಲರ್ ಹಾಗೂ ರೂಪಾಯಿ ಮಧ್ಯದ ಏಳು-ಬೀಳುಗಳ ಮೇಲೆಯೂ ಅವಲಂಬಿತವಾಗಿರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 748, ರೂ. 7,480 ಹಾಗೂ ರೂ. 74,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,800 ಆಗಿದ್ದರೆ, ದೆಹಲಿಯಲ್ಲಿ ರೂ. 72,200, ಮುಂಬೈನಲ್ಲಿ ರೂ. 72,200 ಹಾಗೂ ಕೊಲ್ಕತ್ತದಲ್ಲೂ ರೂ. 72,200 ಗಳಾಗಿದೆ.

ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button