ಕಲಬುರ್ಗಿಯಲ್ಲಿ ಮೋದಿ; ನಗಾರಿ ಬಾರಿಸುವ ಮೂಲಕ ಭಾಷಣ ಆರಂಭ, ಬಂಜಾರಿಗರ ಮನಗೆದ್ದ ಮೋದಿ…!
ಕಲಬುರಗಿ :
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸದ್ಯ ಕರ್ನಾಟಕ ಪ್ರವಾಸದಲ್ಲಿರುವರು, ಅವರು ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂತ ಸೇವಾಲಾಲ್ ಮಹಾರಾಜರು ಮತ್ತು ಗಾಣಗಾಪುರದ ಗುರು ದತ್ತಾತ್ರೇಯರಿಗೆ ನಮಿಸಿ ಬಂಜಾರ ಭಾಷೆಯಲ್ಲೇ ಮಾತು ಆರಂಭಿಸಿದರು.
ಈ ವೇಳೆ ಕರ್ನಾಟಕ ಸರ್ಕಾರದ ಸಾಧನೆಯನ್ನು ಕೊಂಡಾಡಿದ ಮೋದಿ, ಜನರಿಗೆ ಸಾಮಾಜಿಕ ನ್ಯಾಯ ನೀಡಲು ಕರ್ನಾಟಕ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದ್ದು, ಕರ್ನಾಟಕದ ಲಕ್ಷಾಂತರ ಬಂಜಾರ ಸಮುದಾಯದ ಜನರಿಗೆ ಇಂದು ಅಪರೂಪದ ದಿನವಾಗಿದೆ ಎಂದು ಹೇಳಿದರು. ಸರಿ ಸುಮಾರು 51 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
“ಇಂದು ನಿಮ್ಮೆಲ್ಲರಿಗೂ ಹಕ್ಕು ಪತ್ರ ಸಿಕ್ಕಿದೆ. ಇದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ಅಭಿವೃದ್ಧಿಗೆ ಬೊಮ್ಮಾಯಿ ಸರ್ಕಾರ ಧೃಡ ಹೆಜ್ಜೆ ಇಟ್ಟಿದೆ ” ಪ್ರಧಾನಿ ಅವರು ನೆರೆದಿದ್ದ ಜನರ ಕುರಿತು ಮಾತನಾಡಿ ಗಮನ ಸೆಳೆದರು ಎಂದು ಹೇಳಿದರು.