ಕರುಣಾಮಯಿ ಸೇವಾ ಟ್ರಸ್ಟ್ ಉತ್ತಮ ಸಮಾಜ ಸೇವೆ ಮಾಡುತ್ತಿದೆ……

ತರೀಕೆರೆ(ಮಾ,7) :

ಹೆಸರಿನಲ್ಲಿಯೇ ಕರುಣೆ ಎಂಬುದು ಇರುವ ಕರುಣಾಮಯಿ ಸೇವಾ ಟ್ರಸ್ಟ್ ಉತ್ತಮ ಸಮಾಜ ಸೇವೆ ಮಾಡುತ್ತಿದೆ ಎಂದು ಶಾಸಕ ಡಿ ಎಸ್ ಸುರೇಶ್ ರವರು ಲಕ್ಕವಳ್ಳಿಯಲ್ಲಿ ಕರುಣಾಮಯಿ ಸೇವಾ ಟ್ರಸ್ಟ್ ನ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಸಮಸ್ತ ಉಚಿತ ಸೇವೆ ಮಾಡುತ್ತಿದೆ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ಸರ್ಕಾರದ ಅನುದಾನ ಇಲ್ಲದಿದ್ದರೂ ಸಹ ನಾನು ಸ್ವಂತವಾಗಿ ಸಹಾಯ ಮಾಡುತ್ತೇನೆ. ಲಕ್ಕವಳ್ಳಿಯಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸಿ 6.5 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಮುಂದಿನ ವಾರ ಶಂಕುಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ನಿರ್ದೇಶಕರಾದ ಆರ್ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 5 ವರ್ಷಗಳಲ್ಲಿ ಸಾವಿರದ ನಾನೂರು ಶಬ್ದಗಳಿಗೆ ಫ್ರೀಜರ್ ಬಾಕ್ಸ್ ಬಳಸಲಾಗಿದೆ ಇದರಲ್ಲಿ ಸುಮಾರು 400 ಶವಗಳಿಗೆ ಉಚಿತವಾಗಿ ನೀಡಲಾಗಿದೆ. ಮುಕ್ತಿ ವಾಹಿನಿಯನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದು ಹೇಳಿದರು. ಲಕ್ಕವಳ್ಳಿಯ 14 ಜನ ಸ್ನೇಹಿತರು ಸೇರಿ ಸಂಘಟಿತರಾಗಿ ಕರುಣಾಮಯಿ ಸೇವಾ ಟ್ರಸ್ಟ್ ನ್ನು 2018 ರಲ್ಲಿ ಸ್ಥಾಪಿಸಲಾಯಿತು. ಶಾಸಕರು ಹಾಗೂ ದಾನಿಗಳ ಸಹಕಾರದಿಂದ ಸಂಸ್ಥೆ ಸಮಾಜ ಸೇವೆಯಲ್ಲಿ ತೊಡಗಿದೆ, ಕಟ್ಟಡ ನಿರ್ಮಾಣ ಮಾಡಲು ಶಾಸಕರು 5 ಲಕ್ಷ ರೂಗಳನ್ನು ಕೊಟ್ಟಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸೇವಾ ಅಭಿವೃದ್ಧಿ ಸಂಘದಿಂದ 2 ಲಕ್ಷ ರೂಗಳನ್ನು ಕೊಟ್ಟಿರುತ್ತಾರೆ. ಹಾಗೂ ದಾನಿಗಳು ತುಂಬಾ ಹೃದಯದಿಂದ ಸಹಕಾರ ಮಾಡಿದ್ದಾರೆ ಎಂದು ಹೇಳಿದರು. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಪದ್ಮಾವತಿ ಸಂಜೀವ್ ಕುಮಾರ್ ಅವರು ಮಾತನಾಡಿ ಹಿಂದೂ ಕರುಣಾಮಯಿ ಸೇವಾ ಸಂಸ್ಥೆಯ ಕಟ್ಟಡ ಉ ದ್ಘಾಟನೆಯ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಅತ್ಯವಶ್ಯಕವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಮಾಡುತ್ತಿದೆ. ಅನಾಥ ಶಬ್ದಗಳಿಂದ ಹಿಡಿದು ಎಲ್ಲರಿಗೂ ಇವರ ಸೇವೆ ಅಗತ್ಯವಾಗಿದೆ ಎಂದು ಹೇಳಿದರು. ಪ್ರಶ್ನ ಗೌರವಾಧ್ಯಕ್ಷರಾದ ಬಿ ಓ ಹರಿಕೃಷ್ಣ ಮಾತನಾಡಿ 14 ಜನ ಸ್ನೇಹಿತರು ಸಹ ಒಂದೇ ಎಂಬ ಭಾವನೆಯಿಂದ ಕೂಡಿದ್ದೇವೆ. ಶಾಸಕರು ಮತ್ತು ಧಾನಿಗಳ ಸಹಾಯ ಸಹಕಾರದಿಂದ ಟ್ರಸ್ಟ್ ನ ನೂತನ ಕಟ್ಟಡವನ್ನು ನಿರ್ಮಾಣ ಮಾಡಿದ್ದೇವೆ ಈ ಕಟ್ಟಡ ಮತ್ತು ಸಂಸ್ಥೆ ಸಾರ್ವಜನಿಕರ ಆಸ್ತಿಯಾಗಿ ರೂಪಗೊಂಡಿದೆ. ಎಂದು ಹೇಳಿದರು. ಮಾಜಿ ಶಾಸಕರಾದ ಜಿಎಸ್ ಶ್ರೀನಿವಾಸ್ ಮಾತನಾಡಿ ಸಾರ್ವಜನಿಕರ ಸಮಾಜದ ಸೇವೆ ಮಾಡುವುದು ಕಷ್ಟದ ಕೆಲಸ ಲಕ್ಷಾಂತರ ರೂಗಳ ವೆಚ್ಚದಲ್ಲಿ ನೂತನ ಕಟ್ಟಡ ಕಟ್ಟಿಸಿರುವುದು ಟ್ರಸ್ಟ್ ನ ಸಾಧನೆಯಾಗಿದೆ. ಸಂಸ್ಥೆಯ ಖರ್ಚು ವೆಚ್ಚಗಳಿಗೆ ಮಳಿಗೆಗಳನ್ನು ಬಾಡಿಗೆಗೆ ಕೊಟ್ಟು ಆ ಬಾಡಿಗೆ ಹಣದಲ್ಲಿ ನಿರ್ವಹಣೆ ಮಾಡಬೇಕು ಎಂದು ಹೇಳಿದರು. ನನಗೆ ಅವಕಾಶ ಸಿಕ್ಕರೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಕೊಡಿಸುತ್ತೇನೆ, ನಾನು ಸಹ ಸ್ವಯಂ ಸಹಾಯ ಮಾಡುತ್ತೇನೆ ಎಂದು ಹೇಳಿದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ ಪಿ ಕುಮಾರ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಲ್ ಎ ಅನ್ಬು, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀರಾಮ್, ಸಮಾಜ ಸೇವಕ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಯಾದ ಎಚ್ ಎಂ ಗೋಪಿಕೃಷ್ಣ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ರವರು ಮಾತನಾಡಿ ಲಕ್ಕವಳ್ಳಿಯಲ್ಲಿ 10 ಹಲವಾರು ಸಮಸ್ಯೆಗಳಿವೆ ಎಲ್ಲರೂ ಕೈ ಜೋಡಿಸಿದರೆ ಎಲ್ಲಾ ಸಮಸ್ಯೆಗಳನ್ನು ಸಹ ಬಗೆಹರಿಸಬಹುದು, ಈಗ ಪ್ರಸಕ್ತ ಸಾಲಿನಲ್ಲಿ ಉನ್ನತ ವ್ಯಾಸಂಗ ಕೊಡಿಸಲು 25 ಜನ ಮಕ್ಕಳನ್ನು ಆಯ್ಕೆ ಮಾಡಲು ಸಂಸ್ಥೆ ತೀರ್ಮಾನಿಸಿದೆ ಎಂದು ಹೇಳಿದರು.

  • JOIN OUR INSTAGRAM COMMUNITY
  • JOIN OUR WHATSAPP COMMUNITY
  • JOIN OUR TWITTER COMMUNITY 

ಕಾರ್ಯಕ್ರಮದಲ್ಲಿ ಬಸವೇಶ್ವರ ಆಸ್ಪತ್ರೆಯ ವೈದ್ಯರಾದ ಡಾ. ಟಿಬಿ ಪ್ರಸಾದ್ , ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಯಾದ ಮಮತಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಚ್ ಎಲ್ ನಾಗರತ್ನ ಧನಪಾಲ್ , ಉಪಾಧ್ಯಕ್ಷರಾದ ಕುಪ್ಪನ್ , ಪಿಡಿಒ ಪಾಂಡುರಂಗ, ಮತ್ತು ಎಲ್, ಆರ್ ಸತೀಶ್, ಉಪಸ್ಥಿತರಿದ್ದರು, ಭಾಗ್ಯ ಪ್ರಾರ್ಥಿಸಿ ಪ್ರಮೋದ್ ಸ್ವಾಗತಿಸಿ, ಸೌಜನ್ಯ ಅಶೋಕ್ ನಿರೂಪಣೆ ಮಾಡಿದರು.

ವರದಿಗಾರರು : ತರೀಕೆರೆ N. ವೆಂಕಟೇಶ್ 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button