ತರೀಕೆರೆ ಪುರಸಭೆಗೆ 10 ಕೋಟಿ ಅನುದಾನ ಬಿಡುಗಡೆ…….
ತರೀಕೆರೆ (ಮಾರ್ಚ್ 9) :
ಮುಖ್ಯಮಂತ್ರಿಗಳ ಅಮೃತ ನಗರ ಯೋಜನೆ ಅಡಿ ತರೀಕೆರೆ ಪುರಸಭೆಗೆ 10 ಕೋಟಿ ರೂ ಅನುದಾನವನ್ನು ಸರ್ಕಾರ ಕೊಟ್ಟಿದೆ ಎಂದು ಶಾಸಕ ಡಿ ಎಸ್ ಸುರೇಶ್ ರವರು ಪಟ್ಟಣದ ವಾರ್ಡ್ ನಂಬರ್ 21 ರಾಮಚಂದ್ರಪ್ಪ ಬಡಾವಣೆ, ಹಾಗೂ ವಾರ್ಡ್ ನಂಬರ್ 14ರ ಚೌಡೇಶ್ವರಿ ಕಾಲೋನಿಯಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ನಾಲ್ಕನೇ ಹಂತದ ದಲ್ಲಿ ನಾಲ್ಕು ಕೋಟಿ 13 ಲಕ್ಷದ 80000 ಗಳ ಅನುದಾನದಲ್ಲಿ, ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ತರೀಕೆರೆ ಪಟ್ಟಣದ 23 ವಾರ್ಡುಗಳಿಗೂ ಸಹ ಸರಿ ಸಮಾನವಾಗಿ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ ಉಪಾಧ್ಯಕ್ಷರಾದ ರಿಹಾನ ಪರ್ವೀನ್, ನಾಮಿನಿ ಸದಸ್ಯರಾದ ಅರುಂಧತಿ ಜಿ ಹೆಗಡೆ, ಪರಮೇಶ್ವರಯ್ಯ, ಶಿವಮೂರ್ತಿ, ಶ್ರೇಯಸ್, ಹಾಗೂ ಸದಸ್ಯರಾದ ಆಶಾ ಅರುಣ್ ಕುಮಾರ್, ವಸಂತ ರಮೇಶ್, ಅನುಸೂಯಮ್ಮ, ಪಾರ್ವತಮ್ಮ,, ಟಿಜಿ ಶಶಾಂಕ್ , ದಾದಾಪೀರ್, ಕಾಂಗ್ರೆಸ್ ನಗರ ಅಧ್ಯಕ್ಷರಾದ ಟಿಎಸ್ ರಮೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಟಿಎಲ್ ರಮೇಶ್, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಮಹಾಂತೇಶ್, ಇಂಜಿನಿಯರ್ ಬಿಂದು, ಮುಂತಾದವರು ಉಪಸ್ಥಿತರಿದ್ದರು.
ವರದಿಗಾರರು : ತರೀಕೆರೆ N. ವೆಂಕಟೇಶ್…