ಕರವೇ ಕಾವಲು ಪಡೆಯಿಂದ ಯುಗಾದಿ ಹಬ್ಬದ ಪ್ರಯುಕ್ತ ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕಬ್ಬಡಿ ಟೂರ್ನಿಮೆಂಟ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ದಿನಾಂಕ 22 ಮತ್ತು 23 ನೇ ತಾರೀಖಿನಂದು ಬೆಳಗ್ಗೆ 9:30 ರಿಂದ ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕಬ್ಬಡಿ ಟೂರ್ನಿಮೆಂಟ್ ನಡೆಸಲಾಯಿತು.



ಈ ಒಂದು ಟೂರ್ನಮೆಂಟ್ ಪಂದ್ಯಾವಳಿಗೆ ಜಿಲ್ಲಾಧ್ಯಂತ ಸುಮಾರು 15 ಟೀಮ್ ಗಳು ಬೇರೆ ಬೇರೆ ತಾಲೂಕು ಗಳಿಂದ ಆಗಮಿಸಿದ್ದು ಕಬ್ಬಡ್ಡಿ ಪ್ರೇಮಿಗಳಿಗೆ ಯುಗಾದಿ ಹಬ್ಬದ ಪ್ರಯುಕ್ತವಾಗಿ ರಸದೌತಣ ಕೊಡುವಂತಹ ಕಬ್ಬಡ್ಡಿ ಆಟಗಳನ್ನು ನೋಡಿ ಯುವಕ ಆಟಗಾರರು ಸಂತೋಷ ಪಡುವುದರೊಂದಿಗೆ ಯಶಸ್ವಿಯಾಗಿ ಒನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಕೂಡ್ಲಿಗಿ ತಾಲೂಕಿನ ಪ್ರಮುಖ ಮುಖಂಡರುಗಳು ಭಾಗವಹಿಸಿ, ಆಟಗಾರರಿಗೆ ಶುಭಾಶಯ ಕೋರಿದರು ಈ ಸಂದರ್ಭದಲ್ಲಿ ಕರವೇ ಕಾವಲು ಪಡೆ ಕಾರ್ಯಕರ್ತರು ವಿಶೇಷವಾಗಿ ಕೂಡ್ಲಿಗಿ ಪಟ್ಟಣದ ಮಾಜಿ ಸೈನಿಕರಿಗೆ ಕರವೇ ಸಂಘಟನೆಯಿಂದ ಗೌರವಾನ್ವಿತವಾಗಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು .ಈ 15 ಪಂದ್ಯಗಳಲ್ಲಿ ಆಗಮಿಸಿದಂತಹ ಟೀಂನ ಆಟಗಾರರು ಕಬ್ಬಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಓಂ ತಂಡ ಯಶವಂತ್ ನಗರ ಆಟಗಾರರು ಪಡೆದುಕೊಂಡಿದ್ದಾರೆ. ಹಾಗೂ ದ್ವಿತೀಯ ಸ್ಥಾನವನ್ನು ಬಡಲಡುಕು ಹೊಯ್ಸಳ ತಂಡದ ಆಟಗಾರರು ಪಡೆದುಕೊಂಡೆದ್ದಾರೆ. ಎಂದು ಕರವೇ ತಾಲೂಕು ಅಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ ಇವರು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯದ್ಯಕ್ಷರಾದ ಸುರೇಶ್ ಹಾಗೂ ರಾಜ್ಯ ಸಂಚಾಲಕರು ಮಹಮ್ಮದ್ ರಫೀಕ್ , ಸಂಡೂರು ತಾಲೂಕು ಅಧ್ಯಕ್ಷರು ಮತ್ತು ಕೂಡ್ಲಿಗಿ ತಾಲೂಕು ಉಪಾಧ್ಯಕ್ಷರಾದ ಕಟ್ಟಿಗೆ ನಾಗರಾಜ್, ಗೌರವ ಅಧ್ಯಕ್ಷರಾದ ಕಾಟೇರ್ ರಮೇಶ್, ಪ್ರಧಾನ ಕಾರ್ಯದರ್ಶಿ ನರಸಿಂಹ ಕಾರ್ಯದರ್ಶಿ ಅಜಯ್ ಕುಮಾರ್ ,ಯುವ ತಾಲೂಕು ಘಟಕದ ಅಧ್ಯಕ್ಷರು ಕಾಟ್ಟೆರ್ ಲಂಕೇಶ್ ,ಉಪಾಧ್ಯಕ್ಷರು ಹನುಮೇಶ್ ,ವಿದ್ಯಾರ್ಥಿ ಘಟಕದ ತಾಲೂಕು ಅಧ್ಯಕ್ಷರು ಮಲ್ಲಾಪುರದ ಭರತ್, ಕಾರ್ಯದರ್ಶಿ ಖಾನಾವಳಿ ಸಂದೀಪ್ ,ಸಹ ಕಾರ್ಯದರ್ಶಿ ಸುದೀಪ್ ,ಗುನ್ನಳ್ಳಿ ಅನಿಲ್, ಮಹೇಶ್ ,ಶ್ರೀನಿವಾಸ್, ಶಿವು ಹಾಗೂ ಎಲ್ಲಾ ಸರ್ವ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ