ಕೂಡ್ಲಿಗಿ ಪಟ್ಟಣದ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾಲೂಕಾ ಕಾರ್ವಿಕರ ನಿರೀಕ್ಷಕರ ಅಧಿಕಾರಿಗಳ ಕಚೇರಿ ಎದುರು ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್-ಸಿಐಟಿಯು ತಾಲೂಕ ಸಮಿತಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಮನವಿ
ಕೂಡ್ಲಿಗಿ ಮಾರ್ಚ್:29
ಕೂಡ್ಲಿಗಿ ಪಟ್ಟಣದ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಾರ್ಮಿಕರ ನಿರೀಕ್ಷಕರ ಅಧಿಕಾರಿಗಳ ಕಚೇರಿ ಎದುರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್- ಸಿಐಟಿಯು ತಾಲೂಕ್ ಸಮಿತಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಮನವಿ ಸಲ್ಲಿಸಿದರು. ಕಾರ್ಮಿಕರ ನಿರೀಕ್ಷಕರು ಕಾರ್ಮಿಕರಿಗೆ ಫೋನ್ ಕರೆ ಮಾಡಿ, ಕಿಟ್ ಕೊಡುತ್ತೇವೆ, ಎಷ್ಟು ಕಿಟ್ ಬೇಕು ಎಂದು ಕೇಳುತ್ತಿದ್ದಾರೆ.

ಬಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ಹಣವನ್ನು ಈ ಪರಿ ದುರ್ಬಳಕೆ ಮಾಡುತ್ತಿರುವ ಸರ್ಕಾರ ಈ ಎಲ್ಲ ಖರೀದಿ ವ್ಯವಹಾರಗಳ ಬಗ್ಗೆ ಮುಂದಿನ ದಿನಗಳಲ್ಲಿ ಲೆಕ್ಕ ಕೊಡಬೇಕು, ವಸ್ತುಗಳ ರೂಪದಲ್ಲಿ ಸೌಲಭ್ಯಗಳನ್ನು ನೀಡುವುದು ಕೂಡಲೇ ನಿಲ್ಲಿಸಬೇಕು. ಈ ಹಿನ್ನಲೆಯಲ್ಲಿ ಶೈಕ್ಷಣಿಕ ಅರ್ಜಿ ಸಲ್ಲಿಸಲು ಆಗುತ್ತಿರುವ ತೊಂದರೆ ಕುರಿತು, ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ ಹಣ ವರ್ಗಾವಣೆ ಆಗಬೇಕು, ಆರೋಗ್ಯ ಸಂಜೀವಿನಿ ಜಾರಿಗೆ ತರಬೇಕು, ಹೊಸ ತಂತ್ರಾಂಶ ಕುರಿತು ತರಬೇತಿ ಕೊಡಬೇಕು, ಕಲ್ಯಾಣ ಮಂಡಳಿಯಿಂದ ಶಿಶು ವಿಹಾರಗಳ ಆರಂಭ ಬೇಡ, ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಬೇಕು, ಮನೆ ನಿರ್ಮಾಣಕ್ಕೆ 5 ಲಕ್ಷ ಸಹಾಯಧನ ಜಾರಿ ಮಾಡಬೇಕು, ಎಲ್ಲಾ ಖರೀದಿಗಳನ್ನು ನಿಲ್ಲಿಸಬೇಕು ನೇರ ವರ್ಗಾವಣೆ ಮಾಡಬೇಕು ಎಂದು ಈ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗುನ್ನಳ್ಳಿ ರಾಘವೇಂದ್ರ, ಚೌಡಪ್ಪ ಮಲ್ಲಿಕಾರ್ಜುನ ಕೆ, ವೆಂಕಟೇಶ್, ಮಹೇಶ್, ಈರಣ್ಣ, ಸುರೇಶ್, ನಾಗರಾಜ್, ರಾಮಪ್ಪ ಸೇರಿದಂತೆ ಅನೇಕ ಕಟ್ಟಡ ಕಾರ್ಮಿಕರು ಇದ್ದರತಾಲೂಕ ವರದಿಗಾರರು ರಾಘವೇಂದ್ರ ಸಾಲುಮನೆ ಕೂಡ್ಲಿಗಿ