ಕ್ಷಯ ಮುಕ್ತ ಕರ್ನಾಟಕ ಗುರಿ…!

ಇಂಡಿ ಮಾರ್ಚ್:29

ಇಂಡಿ : ಮನೆಯ ಸುತ್ತಮುತ್ತಲಿನ ಪರಿಸರ ಅಚ್ಚುಕಟ್ಟಾಗಿ, ಸುವ್ಯವಸ್ಥಿತವಾಗಿ, ಸುರಕ್ಷಿತವಾಗಿ ಇಟ್ಟು ಕೊಳ್ಳದಿದ್ದರೆ ಹಲವಾರು ರೀತಿಯ ರೋಗಗಳು ಹರಡುತ್ತವೆ. ಮೊದಲು ಸುರಕ್ಷತೆ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಪತ್ರಕರ್ತ ಫಯಾಜ ಅಹ್ಮದ ಬಾಗವಾನ ಹೇಳಿದರು.

ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಹಾಗೂ ಆಂಗ್ಲ ಮಾದ್ಯಮ ಎಕ್ಸಲೆಂಟ್ ಪ್ರಾಥಮಿಕ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಕ್ಷಯರೋಗ ಜಾಗೃತಿ ಕಾರ್ಯಕ್ರಮವನ್ನು ಪತ್ರಕರ್ತ ಫಯಾಜ ಅಹ್ಮದ ಬಾಗವಾನ ಉದ್ಘಾಟಿಸಿ ಮಾತಾನಾಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ವಾಯ್ ಎಮ್ ಪೂಜಾರ ಮಾತಾನಾಡಿದ ಅವರು, ಕ್ಷಯರೋಗಕ್ಕೆ ಭಯ ಪಡುವ ಅವಶ್ಯಕತೆ ಇಲ್ಲ, ಬದಲಿಗೆ ಎಚ್ಚರ ವಹಿಸಿದ್ರೆ ಸಾಕು.6 ತಿಂಗಳು ನಿರಂತರ ತಪಾಸಣೆಯಿಂದ ರೋಗವನ್ನು ಗುಣಪಡಿಸಬಹುದು ಎಂದು ಹೇಳಿದರು.ಕ್ಷಯ ರೋಗ ಬ್ಯಾಕ್ಟೀರಿಯಾದಿಂದ ಬರುವ ಒಂದು ಸಾಂಕ್ರಾಮಿಕ ರೋಗ, ಈ ರೋಗವನ್ನು ಕೆಮ್ಮುವಾಗ ಮುಖ್ಯವಾಗಿ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಶ್ವಾಸಕೋಶದ ಕ್ಷಯ ಮತ್ತು ಶ್ವಾಸಕೋಶತೇರ ಕ್ಷಯ ಎಂದು ರೋಗ ಎರಡು ವಿಧಗಳಿವೆ. ಇನ್ನೂ ಕ್ಷಯರೋಗದ ಸಾಮನ್ಯ ಲಕ್ಷಣಗಳು ಸುಸ್ತು, ರಾತ್ರಿ ಬೆವರು, ಕಫದಲ್ಲಿ ರಕ್ತ, ತೂಕ ಇಳಿಕೆ, ನಿರಂತರ ಕೆಮ್ಮು, ಜ್ವರ ಹಸಿವಾಗದಿರುವುದು ಅಂತಹ ಲಕ್ಷಣಗಳನ್ನು ಕಾಣುತ್ತವೆ.ಕ್ಷಯ ರೋಗದಿಂದ ಬಳಲುವ ವ್ಯಕ್ತಿಗಳು ಬಾಯಿ ಮತ್ತು ಮೂಗನ್ನು ಬಟ್ಟೆ ಅಥವಾ ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಇಲ್ಲವಾದರೆ ಕ್ಷಯರೋಗವು ರೋಗ ನಿರೋಧಕ ಶಕ್ತಿ ಕಡಿಮೆ ಇರವವರನ್ನು ಭಾದಿಸುವದರಿಂದ ಸಮಸ್ಯೆ ಯಾಗುವ ಸಾಧ್ಯತೆ ಇರುತ್ತದೆ.

ಜೊತೆಯಲ್ಲಿ ಕ್ಷಯರೋಗದ ರೋಗಿಗಳು ಹೆಚ್ಚು ಹೆಚ್ಚು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಆದರೆ ಯಾವುದೇ ರೀತಿಯ ಆಹಾರ ನಿರ್ಬಂಧಗಳು ಇರುವುದಿಲ್ಲ. ತಂಬಾಕು ಸೇವನೆ ಮದ್ಯಪಾನ ಸೇವನೆಯಿಂದ ಶ್ವಾಸಕೋಶಗಳು ದುರ್ಬಲವಾಗಿರುತ್ತವೆ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಸಂತೋಷ ಕೆಂಬೊಗಿ ಮಾತಾನಾಡಿ, ಮನುಷ್ಯ ಎಲ್ಲಾವೂ ಸಂಪಾದನೆ ಮಾಡಲು ಬೇಕಾಗಿದ್ದು ಆರೋಗ್ಯ, ಒಂದು ವೇಳೆ ಆರೋಗ್ಯ ಸರಿ ಇರದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಅರ್ಥಮಾಡಿಕೊಳ್ಳಿ. ಆರೋಗ್ಯದಲ್ಲಿ ಏರುಪೇರುವಾಗಲೂ ಕಾರಣ ತಾವು ಎಲ್ಲಾ ತಿಳಿದುಕೊಂಡಿದ್ದಿರಿ. ಕ್ಷಯರೋಗ ಜೊತೆಗೆ ಹಲವಾರು ರೋಗಗಳು ಉಂಟಾಗಲು ಅದರಿಂದಾಗುವ ಹಾನಿಗಳ ಬಗ್ಗೆ ಜನರಿಗೆ ಜಾಗೃತಿ ಮೂಡಬೇಕು.

ಒಂದು ವೇಳೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದರೆ ದೊಡ್ಡ ಹಾನಿಯಾಗಬಹುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯರು ಸೌಮ್ಯ ರೂಗಿ, ಆರೋಗ್ಯ ಇಲಾಖೆಯ ಅಮೃತ ಚವ್ಹಾಣ, ಇಮಾಮಸಾಬ್ ಕಲ್ಬುರ್ಗಿ, ಪ್ರದೀಪ, ಎಸ್ ಎ ಕಲಿಲ, ಶಿವಾನಂದ,ಪಿ ಎ ಬೂದಿಹಾಳ, ಎಸ್ ಎಸ್ ರಾಠೋಡ ಹಾಗೂ ಉಪನ್ಯಾಸಕ ಎಮ್ ಎಸ್ ಪಾಟೀಲ, ಪುಷ್ಪಾ ಪದ್ದಾರ, ಶ್ರೀ ಶೈಲ ಹೂಗಾರ, ಗಣಪತಿ ಹೂಗಾರ, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button