ಸುಸಜ್ಜಿತ ಆಸ್ಪತ್ರೆ. ಗುಣಮಟ್ಟದ ಶಿಕ್ಷಣಕ್ಕೆ.ಜೆಡಿಎಸ್ ಆದ್ಯತೆ
ಇಂಡಿ ಏ.12
ಇಂಡಿ.ನಗರದ ವಾರ್ಡ್ ನಂಬರ್ 17.16 ರಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ ಬಸವರಾಜ ಪಾಟೀಲ ರವರು ಮನೆ ಮನೆಗೆ ತೆರಳಿ ಪಂಚರತ್ನ ಯೋಜನೆಯ ಮಹತ್ವದ ಗುರಿಯಾದ ಗುಣಮಟ್ಟದ ಶಿಕ್ಷಣ, ಸುಸಜ್ಜಿತ ಆರೋಗ್ಯ ವ್ಯವಸ್ಥೆಯನ್ನು ಇಂಡಿ ನಗರದ ಸರ್ವರಿಗೂ ಲಭಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದು,

ಇವುಗಳನ್ನು ಸಾಕಾರಗೋಳಲ್ಲು ಇಂಡಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರಿಗೆ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಎಂದು ಮನೆ ಮನೆಗೂ ತೆರಳಿ ಹಿರಿಯರು,ಯುವಕರು,ಮಹಿಳೆಯರಿಗೆ ಮನವಿ ಮಾಡಿದರು,ಇದೆ ಸಂದರ್ಭದಲ್ಲಿ ಶ್ರೀ ಶೈಲಗೌಡ ಪಾಟೀಲ ಸಿದ್ದು ಡಂಗಾ ಮಹಿಬೂಬ ಬೇವನೂರ, ಬಸವರಾಜ ಹಂಜಗಿ, ಶ್ರೀಶೈಲ ಪೂಜಾರಿ, ಗಿರಿಜಾ ಹಂಜಗಿ,ಅಶ್ವಿನಿ ಕಾರಬಾರಿ ಸಿದ್ದವ್ವ ಗಡತಿ ರೋಶನಬಿ ಕರೋಶಿ ರಮ್ಜಾನ್ನಬಿ ಸೈಯದ್ ಜ್ಯೋತಿ ತಾಂಬೆ ಯಲ್ಲವ್ವ ಶಿರಶ್ಯಾಡ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್.ವಿಜಯಪುರ