ಆಲಮೇಲ ತಾಲೂಕಿನ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ.
ಆಲಮೇಲ ಏ.18-04-2023.
ವಿಜಯಪೂರ ಜಿಲ್ಲೆಯ ಆಲಮೇಲ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಪದಾಧಿಕಾರಿಗಳ ಆಯ್ಕೆ ಹಾಗೂ ತಾಲೂಕು ಘಟಕದ ರಚನೆಯನ್ನು ಶ್ರೀ ಗುರು ಸಂಸ್ಥಾನ ಹಿರೇಮಠ ಆಲಮೇಲದಲ್ಲಿ ಜರುಗಿತು ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಅತಿಥಿ ಶಿಕ್ಷಕರ ಅಧ್ಯಕ್ಷರಾದ ದಾನೇಶ ಕಲಕೇರಿ ಅತಿಥಿ ಶಿಕ್ಷಕರೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ರಾಜ್ಯ ಸಂಘದ ರೂಪುರೇಷೆಗಳಿಗೆ ಅಣಿಯಾಗೋಣ ಹೋರಾಟಗಾರರ ಇತಿಹಾಸ ಓದಿದ ನಾವು ಹೋರಾಟಕ್ಕೆ ಬೆನ್ನು ತೋರಿಸುವ ಬದಲು ಎದೆ ಉಬ್ಬಿಸಿ ಮುಂದೆ ಹೆಜ್ಜೆ ಇಡೋಣ ಅಂತಾ ಮಾತನಾಡಿದರು.ಆಲಮೇಲ ತಾಲೂಕಾ ನೂತನ ಅಧ್ಯಕ್ಷರಾದ ಶರಣಗೌಡ ಬಿರಾದಾರ.

ಗೌರವ ಅಧ್ಯಕ್ಷರಾಗಿ ಶಿವಾನಂದ ಬಾಸಗಿ.ಉಪಾಧ್ಯಕ್ಷರಾಗಿ ಬಸವರಾಜ ಜೇರಟಗಿ.ಪ್ರಧಾನ ಕಾರ್ಯದರ್ಶಿರಾಗಿ ಚೆನ್ನಪ್ಪ ಜೇರಟಗಿ.ಖಜಾಂಚಿಯಾಗಿ ರಾಜಕುಮಾರ ಜೇರಟಗಿ . ಸಂಘಟನಾ ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ ಪೂಜಾರಿ.ಸಂಚಾಲಕರಾಗಿ ಶಿವರಾಯ ಶಾವಳ.ನಿರ್ದೇಶಕರಾಗಿ ಶ್ರೀಮತಿ ಶೋಭಾ ಮರಬದ. ನಾಗೇಶ ವಡ್ಡರ. ರುದ್ರಣ್ಣ ಯಳಮೇಲಿ ಮಲಕಪ್ಪ ನಡುವಿನಮನಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಪ್ರದೀಪ್ ದೊಡಮನಿ ಶ್ರೀಮತಿ ಅಶ್ವಿನಿ ಶಾವಳ ಶ್ರೀ ದವಲಪ್ಪ ಯತ್ನಾಳ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್. ವಿಜಯಪೂರ