ಡಾ. ಶ್ರೀನಿವಾಸ ಎನ್. ಟಿರವರು ಅಪಾರ ಜನಬೆಂಬಲ ಹಾಗೂ ಕಾಂಗ್ರೆಸ್ ಅಭಿಮಾನಿಗಳು ಮತ್ತು ಕಾರ್ಯಕರ್ತರು ಇವರುಗಳ ಬೆಂಬಲದೊಂದಿಗೆ ಚುನಾವಣಾ ನಾಮಪತ್ರವನ್ನು ಸಲ್ಲಿಸಿದರು
ಕೂಡ್ಲಿಗಿ ಏ.17.

ವಿಜಯ ನಗರ ಜಿಲ್ಲೆ ಕೂಡ್ಲಿಗಿ-96 ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇಂದು ರಾಷ್ಟೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಡಾ.ಶ್ರೀನಿವಾಸ್ ಎನ್.ಟಿ.ಇವರು ಚುನಾವಣಾ ನಾಮಪತ್ರವನ್ನು ಸಲ್ಲಿಸುವ ಕುರಿತು ಅಪಾರ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಇವರಗಳ ಬೆಂಬಲದೊಂದಿಗೆ ಹೋಸಪೇಟೆ ರಸ್ತೆಯಲ್ಲಿ ಬರುವ ವಾಸವಿ ಕಲ್ಯಾಣ ಮಂಟಪದ ಮುಂಬಾಗದಿಂದ ಕೂಡ್ಲಿಗಿ ತಾಲೂಕು ಆಡಳಿತ ಸೌಧದವರೆಗೆ ಕಾಂಗ್ರೇಸ್ ಕಾರ್ಯಕರ್ತರು ಅಪಾರ ಅಭಿಮಾನಿಗಳು ಕೂಡ್ಲಿಗಿಯ ಪಟ್ಟಣದಲ್ಲಿ ಎಲ್ಲಿ ನೋಡಿದರು ಅಲ್ಲಿ ಕಾಂಗ್ರೇಸ್ ಭಾವುಟಗಳ ಹಾರಾಟ ಬಲು ಜೋರಾಗಿ ಜನಸಾಗರವೇ ಕೂಡ್ಲಿಗಿ ಪಟ್ಟಣದ ಕಾಂಗ್ರೆಸ್ ಬಾವುಟಗಳ ರಾರಾಜಿಸುತ್ತಿದ್ದವು ಹಾಗೆ ಡಾ.ಶ್ರೀನಿವಾಸ್ ಎನ್.ಟಿ.ಇವರ ಅಭಿಮಾನಿಗಳು ಜಯಕಾರದ ಘೋಷಣೆ ಮೊಳಗಿತ್ತು.

ಇಂದು ಸರಿಯಾಗಿ ಬೆಳಿಗ್ಗೆ 11:30ಕ್ಕೆ ಡಾಕ್ಟರ್ ಶ್ರೀನಿವಾಸ ತಮ್ಮ ಪತ್ನಿ ಡಾ. ಪುಷ್ಪ ಶ್ರೀನಿವಾಸ್ ಮತ್ತು ಸೂಚಕರೊಂದಿಗೆ ಆಡಳಿತ ಸೌಧಕ್ಕೆ ಆಗಮಿಸಿ ಚುನಾವಣೆ ಅಧಿಕಾರಿಗಳಾದ ಈರಣ್ಣ ಬಿರಾದರ್ ಇವರು ನಾಮಪತ್ರವನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಟಿ ಜಗದೀಶ್ ತಹಶೀಲ್ದಾರ್ ಸಹಾಯಕ ಚುನಾವಣೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಇದ್ದರು ಹಾಗೆ ನಾಮ ಸೂಚಕರಾಗಿ ಬಡೆಲಡಕು ಬಸವರಾಜ್, ಕಾನಮಡಗು ಶಶಿಧರ್ ನಿವೃತ್ತ ಮುಖ್ಯೋಪಾಧ್ಯಾಯ ಸಿದ್ದಪ್ಪ ಇದ್ದರು ನಂತರ ತೆರೆದ ವಾಹನದ ಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಡಳಿತ ಸೌಧದ ವರೆಗೂಸಾಗಿತು ಈ ಸಂದರ್ಭದಲ್ಲಿ ಜನಸಾಗರದಂತೆ ಎಲ್ಲಿ ನೋಡಿದರಲ್ಲಿ ಜನರೇ ಕಾಣುತ್ತಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನಿ.ಕೂಡ್ಲಿಗಿ