‘ಧ್ರುವ ನಕ್ಷತ್ರ’ ಚಿತ್ರದ – ಚಿತ್ರೀಕರಣ ಮುಕ್ತಾಯ.
ಹನೂರು ಜು.31

ಬಿ.ವಿ ಕಂಬೈನ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ವಾಗುತ್ತಿರುವ ಬಹು ನಿರೀಕ್ಷಿತ ಕನ್ನಡ ಚಿತ್ರ ‘ಧ್ರುವ ನಕ್ಷತ್ರ’ದ ಚಿತ್ರೀಕರಣ ಯಶಸ್ವಿಯಾಗಿ ಸಂಪೂರ್ಣ ಗೊಂಡಿದೆ.
ಚಿತ್ರೀಕರಣ ಮುಕ್ತಾಯ ಗೊಂಡ ಹಿನ್ನೆಲೆಯಲ್ಲಿ ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಚಿತ್ರ ತಂಡ ಸಂಪ್ರದಾಯದಂತೆ ಕುಂಬಳಕಾಯಿ ಒಡೆಯುವ ಮೂಲಕ ಸಂಭ್ರಮಿಸಿತು.
ನಿಗದಿತ 50 ದಿನಗಳ ಕಾಲ ನಡೆದ ಚಿತ್ರೀಕರಣವು ಮೈಸೂರು, ಮದ್ದೂರು, ಹೊಸಕೋಟೆ, ಹನೂರು ಹಾಗೂ ಒಡೆಯರಾಪಾಳ್ಯ ಸುತ್ತಮುತ್ತ ಸತತ ಚಿತ್ರೀಕರಣ ನಡೆಸಲಾಯಿತು.
ವಿಶೇಷವೆಂದರೆ ಈ ಚಿತ್ರೀಕರಣದಲ್ಲಿ ಸ್ಥಳೀಯ ಪ್ರತಿಭೆಗಳು ಕೂಡ ಭಾಗಿಯಾಗಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಕಥೆ-ಚಿತ್ರಕಥೆ- ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಬಿ. ಕೃಷ್ಣ ಮಳವಳ್ಳಿ ಅವರು ನಮ್ಮ ಚಿತ್ರ ಹಳ್ಳಿ ಸೊಗಡಿನ ಪ್ರೇಮ ಕಥೆಯಾಗಿದೆ. ಮನೆ ಮಂದಿಯೆಲ್ಲ ಕುಟುಂಬ ಸಹಿತ ನೋಡಬಹುದಾದ ಚಿತ್ರ ಇದಾಗಿದೆ.
ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಈಗ ಡಬ್ಬಿಂಗ್ ಕಾರ್ಯ ಮುಗಿಸಿ ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಉದ್ದೇಶವಿದೆ.

ಕನ್ನಡ ಸಿನಿ ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ಚಿತ್ರ ಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು ಎಂದರು.
ತಾರಾಂಗಣದಲ್ಲಿ ನಾಯಕ ನಟ ಮನ್ವಿತ್, ನಾಯಕಿ ಮೇಘನಾ ಎಸ್, ಗಣೇಶ್, ಪಲ್ಲವಿ, ಚಂದ್ರಪ್ರಭ, ಸಿಲ್ಲಿಲಲ್ಲಿ ಆನಂದ್, ಹಳ್ಳಿ ಮೇಷ್ಟ್ರು ಖ್ಯಾತಿಯ ಕಪ್ಪೆರಾಯ, ಸೈಲೆಸ್ ವೆಂಕಟ್, ಪಂಚಮುಖಿ ಚಂದ್ರು, ಚೆನ್ನಬಸಪ್ಪ, ಮಾಣಿಕ್ಯ ರಾಜ್, ಎಂ ಮಾದೇಶ್ ಭೈರನತ್ತ, ಜಿಲ್ಲಾ ಪತ್ರ ಬರಹಗಾರರಾದ ಎಸ್ ಪುಟ್ಟಸ್ವಾಮಿ, ಹನೂರು ಎಂ ಸತ್ಯಸುಂದರ್, ಎಲ್ಲಿಮಾಳ ಭುವನೇಶ್, ಜೂನಿಯರ್ ಜಗ್ಗೇಶ್ ನಾಗಿ ಬೈರನತ್ತ ಎಂ, ಆಕಾಶ್ ಸ್ವಾಮಿ, ಕೆ.ಸಿ ಸಿಂಗ್, ಸ್ಯಾಮ್, ಅಶ್ವಿನಿ, ನಿವೇದಿತಾ, ಪ್ರಿಯ, ಸತ್ಯ ಸುಂದರ್, ಬೇಬಿ ದವನಿ, ಮಾಸ್ಟರ್ ಅಶ್ವಥ್, ಸಾಯಿ ರಾಮ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ರವಿ ಸುವರ್ಣ, ಸತ್ಯಸುಂದರ್, ಕೃಷ್ಣಕುಮಾರ್, ಸಂಕಲನ ಅರವಿಂದ ರಾಜ್, ಸಂಗೀತ ಆರ್.ಎಸ್. ಗಣೇಶ್ ನಾರಾಯಣ್, ಸಾಹಸ ಡ್ರ್ಯಾಗನ್ ಅಭಿ, ಮೇಕಪ್ ಈಶ್ವರ್, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ, ಸಹ ನಿರ್ದೇಶನ ಎಂ.ನಾಸಿರ್ ಅವರದಿದೆ.
ಸದ್ಯದಲ್ಲಿಯೇ ಡಬ್ಬಿಂಗ ಕಾರ್ಯ ಕೈಗೊಂಡು ಶೀಘ್ರವೇ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಿರ್ಮಾಪಕರದ್ದಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಡಾ, ಪ್ರಭು ಗಂಜಿಹಾಳ ಗದಗ
