ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ – ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ.

ಚಳ್ಳಕೆರೆ ಜು.31

ನಗರದ ಹೊರ ವಲಯದ ಅಜ್ಜನಗುಡಿ ಸಮೀಪದ ನನ್ನಿವಾಳದ ಕಟ್ಟೆಮನೆಯ ಮುತ್ಯಾಗಾರ ದೇವರ ಎತ್ತುಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ವತಿಯಿಂದ ಗೋಪೂಜೆ, ಬಾಳೆಹಣ್ಣು,ರಾಗಿಹುಲ್ಲು ವಿತರಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವರ ಎತ್ತುಗಳ ಸಂರಕ್ಷಕರಾದ ಪೂಜಾರಿ ಓಬಯ್ಯ, ಪಾಲಯ್ಯ, ಸಿದ್ದೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ, ವಿದ್ಯಾ, ಖಜಾಂಚಿ ಕವಿತಾ ನಾಗೇಶ್, ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಮೀರಾ ರಮೇಶ್, ಸುಮಾ, ನಾಗಶ್ರೀ, ಹೀನಾ ಸೇರಿದಂತೆ ದೇವರ ಎತ್ತುಗಳ ಕಿಲಾರಿಗಳು ಮತ್ತು ಆರಾಧಕರು ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button