ಜಿಲ್ಲಾ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟವನ್ನು ಶಾಲೆಯ ಚೇರಮನರಾದ ದಾನಪ್ಪ ಸುರಗೊಂಡ ರವರು – ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ವಿಜಯಪುರ ಜು.31

ಜಿಲ್ಲಾ ಮಟ್ಟದ ಸೂರ್ಯ ನಮಸ್ಕಾರ ಸಸಿಗೆ ನೀರೆರೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ದಿನಾಂಕ 29,07,2026 ರಂದು ವಿಜಯಪುರ ನಗರದ ಡಾಲರ್ಸ್ ಕಾಲೋನಿಯ ಲೋಕ ಕಲ್ಯಾಣ ಆಂಗ್ಲ ಮತ್ತು ಕನ್ನಡ ಶಾಲೆಯ ಸಭಾ ಭವನದಲ್ಲಿ ಪ್ರಥಮ ವಿಜಯಪುರ ಜಿಲ್ಲಾ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟವನ್ನು ಶಾಲೆಯ ಚೇರ್ಮನರಾದ ದಾನಪ್ಪ ಸುರಗೊಂಡ ರವರು ಸಸಿಗೆ ನೀರೆರೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ದಯಾಸಾಗರ ಸುರಗೊಂಡರವರು, ಆಡಳಿತ ಅಧಿಕಾರಿಗಳಾದ ಪ್ರಭು ಕೋಟ್ಯಾಳ ರವರು ಅಖಿಲ ಕರ್ನಾಟಕ ಸೂರ್ಯ ನಮಸ್ಕಾರ ಸಂಸ್ಥೆಯ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳ ರವರು ರಾಜ್ಯ ಅಧ್ಯಕ್ಷರಾದ ಡಾ, ಮಂಜೇಗೌಡ ರವರು, ಹಾಗು ಜಿಲ್ಲೆಯ ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಮತ್ತು ಶಿಕ್ಷಕಿಯರು ಮತ್ತು ಗೋಪಾಲ್ ಹಡಲಗೇರಿ, ನೇತ್ರಾವತಿ ಪುಟ್ಟಿ ಕಲ್ಪನಾ ಬಾಗೇವಾಡಿ, ಕಾರ್ಯಕ್ರಮವನ್ನು ನಿರೂಪಿಸಿದರು ಸ್ವಾಗತಿಸಿದರು ವಂದಿಸಿದರು ಎಂದು ಸಂಪತ ಸುರಗೊಂಡವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

