“ಶಿಕ್ಷಕ-ರಕ್ಷಕ”…..

ಬ್ರಹ್ಮಾಂಡವನೆ ತೆರೆದು

ವಿಶಿಷ್ಟ ವೈಖರಿಗಳ

ಅರಹುತ್ತಾ ವೈಚಾರಿಕತೆಯ

ಮೆಟ್ಟಿಲುಗಳ ಏರಿಸಲು

ಕೈಹಿಡಿದು ನಡೆಸುವ

ದಿವ್ಯ ಪುರುಷನೇ ಗುರು।।

ಅಜ್ಞಾನದ ಹೊಸ್ತಿಲ

ದಾಟಿಸಲು ಹರಸಾಹಸ

ಮಾಡುತ್ತಾ ಸುಜ್ಞಾನದ

ದಾರಿದೀಪವಾಗಲು

ಮುನ್ನೆಚ್ಚರಿಕೆಯ ಗಂಟೆ

ಬಾರಿಸುವವನೆ ಗುರು।।

ಮೇಲು ಕೀಳುಗಳಿಲ್ಲದ

ಭರವಸೆಯ ಸೋಪಾನ

ಹಾಕುತ್ತಾ ಮೈದಡವಿ

ಸಂತೈಸಿ ಕಣ್ತಪ್ಪಿ

ಬೀಳದಂತೆ ಎತ್ತಿ ಹಿಡಿವ

ದೈವ ಸ್ವರೂಪಿಯೇ ಗುರು।।

ಸಮುದ್ರ ಮಂಥನದಂತೆ

ಎಲ್ಲ ದುರ್ಗಣಗಳ

ಹಾಲಹಲವನೆಲ್ಲ

ತೊಳೆದು ಸುಜ್ಞಾನದ

ಅಮೃತವ ಉಣ ಬಡಿಸುವ

ಮಮತಾ ಮೂರ್ತಿಯೇ ಗುರು।।

ಭದ್ರ ಸುಭದ್ರ ಜಾಡಿನಲಿ

ಪೊಳ್ಳುಗಳ ತುಳಿದು

ಅವಿವೇಕದ ಪೊರೆಯ

ಕಳಚಿ ದಿವ್ಯತೆಯ

ಹಣತೆಯನು ಹಚ್ಚುತ್ತಾ

ದಾರಿ ದೀಪವಾಗುವವನೆ ಗುರು ।।

ನಿಸ್ವಾರ್ಥದಲಿ ಉಣ

ಬಡಿಸೋ ಕಾಮಧೇನುವಾಗಿ

ದೀದೀಪ್ತಿಯಾಗಿ ರವಿಯಂತೆ

ಜಗದ ರಕ್ಷಕ ನೀನಾಗಲು

ಮತ್ತೇನ ಬಯಸದವನೆ

ಸೃಷ್ಠಿಕರ್ತನಿಗಿಂತ ಮಿಗಿಲು ಗುರು।।

-ಕೆ.ಎಸ್ ತಿಪ್ಪಮ್ಮನಾಗರಾಜ್

ಚಿತ್ರದುರ್ಗ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button