ಆಗಬೇಡ ಹುಚ್ಚುಕೋಡಿ
ನಿ ಕೋಡಿ
ನಾ ಕೋಡಿ
ಜಗಳವಾಡಿ
ಆಗಬೇಡ
ಹುಚ್ಚ ಕೋಡಿ
ಚುಚ್ಚಿ ಮಾತನಾಡಿ
ಮನಸ್ಸು ಮಾಡಬೇಡ
ಹೊಲಸು ರಾಡಿ
ಎಲ್ಲರೊಂದಿಗೆ
ಇರಬೇಕು ಕೂಡಿ
ಕಾಯಕ ಮಾಡು
ದಿನ ವಿಡಿ
ದೇವರು ಕೊಡ್ತಾನ
ಫಲ ಹಿಡಿ ಹಿಡಿ
ಮಾಡಬೇಡ ಮಡಿ
ಎಲ್ಲರು ಒಂದೆಯಂದು ನಡಿ
ಮನದಾಗ ಇದೆ
ಭಗವಂತನ ಆತ್ಮದ ಗುಡಿ
ನಾ ಹೆಚ್ಚು ನೀ ಹೆಚ್ಚೆಂದು
ಏನು ವಯುದೈತಿ
ಬೈದು ಬಡಿದಾಡಿ ಸರಿ
ದಾರಿ ನಡೆದು ದೇವರ
ವಿಶ್ವಾಸ ಪಡಿ ಸಿಗ್ತಾದ ಮುಕ್ತಿ

ರಚನೆ:ಸಂಗನಗೌಡ ಹಚಡದ
ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು. ನಾದ