ಕಾಯಕಯೋಗಿ ಬಸವಣ್ಣ…

12ನೆಯ ಶತಮಾನದ ಸಮಾಜ ಸುಧಾರಕ
ಬಿಜ್ಜಳನ ಆಳ್ವಿಕೆಯಲ್ಲಿ ಮೆಚ್ಚುವಂತ ಕಾಯಕ
ತತ್ವಜ್ಞಾನಿಯಾಗಿ ಲಿಂಗಾಯತ ಧರ್ಮದ ಸ್ಥಾಪಕ
ಜಾತಿ,ಮೇಲು-ಕೀಳುಗಳನ್ನು ಕಿತ್ತೆಸೆದ ಕನಕ.
ಬಸವನ ಬಾಗೇವಾಡಿಯ ಹೆಮ್ಮೆಯ ಕುವರ
ಮಾದರಸ ಮಾದಲಾಂಬಿಕೆಗೆ ಭಗವಂತ ನೀಡಿದ ವರ
ಕೂಡಲಸಂಗಮದೇವ ಅಂಕಿತದಿ ಬಾಳಿದ ವಚನಕಾರ
ಸಮಾಜದ ಉದ್ದಾರಕ್ಕಾಗಿ ಬಾಳಿದ ಬಸವಣ್ಣ ಅಜರಾಮರ.
ಕಾಯಕವೇ ಕೈಲಾಸ ಅಂದರೂ ಬಸವ
ದಯವೇ ಧರ್ಮದ ಮೂಲವೆಂದರೂ ಬಸವ
ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದರು ಬಸವ
ಅನ್ಯರಿಗೆ ಅಸಹ್ಯ ಪಡಬೇಡ ಎಂದರು ಬಸವ.
ಸಾಮಾಜಿಕ ಧಾರ್ಮಿಕ ಸುಧಾರಣೆಯ ಜಗಜ್ಯೋತಿ
ಲಂಡನ್ ಥೇಮ್ಸ್ ನದಿಯ ದಡದಿ ನಿಂತಿತು ಮೂರ್ತಿ
ಸಲ್ಲಿತು ಅನುಭವ ಮಂಟಪ ಸ್ಥಾಪಿಸಿದ ಕೀರ್ತಿ
ಇಡೀ ವಿಶ್ವವೇ ಬೆಳಗುತಿದೆ ನಿಮಗೆ ಪೂಜ್ಯನಿಯ ಆರ್ತಿ.
ಗಂಗಾಂಬಿಕೆಯನ್ನು ವಿವಾಹದ ಭಕ್ತಿ ಭಂಡಾರಿ
ಜಾತಿ ಮತಗಳ ಒಲಸು ಕಿತ್ತೊಗೆದ ರೂವಾರಿ
ಲಿಂಗ ಸಮಾನತೆ ಸಮುದಾಯ ಬಾಂಧವ್ಯದ ಕಾರ್ಯವೈಕರಿ
ಇವೆಲ್ಲದರ ಸಾಧನೆಗೆ ಮನುಕುಲವೇ ನಿಮಗೆ ಅಭಾರಿ.
ಕಲಾಂ ಸ್ಥಾಪಿಸಿದರು ಸಂಸತ್ತಿನಲ್ಲಿ ನಿಮ್ಮ ಪ್ರತಿಮೆ
ಬಸವಧರ್ಮ ಪೀಠದಿಂದ 108 ಅಡಿ ಎತ್ತರದ ಪ್ರತಿಮೆ
ಮಹಾಮಾನವತಾದಿಯಾಗಿ ವಿಶ್ವಕ್ಕೆ ಗುರುವಾಗಿದ್ದು ಹಿರಿಮೆ
ಕ್ರಾಂತಿಯೋಗಿಯಾಗಿ ವಿಶ್ವಕ್ಕೆ ಬೆಳಕಾಗಿದ್ದು ಗರಿಮೆ.
ರಚನೆ:ಮುತ್ತು.ಯ.ವಡ್ಡರ (ಶಿಕ್ಷಕರು )
ಬಾಗಲಕೋಟ