‘ದೇವರ ಆಟ’ ಕಿರು ಚಿತ್ರ – ಶೀಘ್ರ ಬಿಡುಗಡೆ.

ಮೈಸೂರು ಜೂ.07

ಸಾಮಾಜಿಕ ಪ್ರಪಂಚದಲ್ಲಿ ನಡೆಯುವ ತಂದೆ-ಮಗನ ಸಂಬಂಧದ ಬಗ್ಗೆ , ಬಾಂಧವ್ಯವನ್ನು ಹಾಗೂ ಈಗಿನ ಕಾಲಘಟ್ಟಕ್ಕೆ ತಂದೆ-ಮಕ್ಕಳು ಯಾವ ರೀತಿ ಇರಬೇಕೆಂದು ‘ದೇವರ ಆಟ’ ಕಿರು ಚಿತ್ರದ ಮೂಲಕ ಮನ ಮುಟ್ಟುವ ರೀತಿಯಲ್ಲಿ ಮೈಸೂರು ಸೋಮು ಹೇಳ ಹೊರಟಿದ್ದಾರೆ.

ನಲವತ್ತು ನಿಮಿಷಗಳ ಕಿರು ಚಿತ್ರವನ್ನು ಮನೆ ಮಂದಿಯೆಲ್ಲಾ ವೀಕ್ಷಿಸಬಹುದು. ಚಿತ್ರವನ್ನು ಕೆಲವು ಸ್ಪರ್ಧೆಗಳಿಗೆ ಕಳಿಸಲಾಗುತ್ತಿದೆ. ಹೀಗಾಗಿ ಚಿತ್ರವನ್ನು ಸಾಧ್ಯವಿದ್ದಷ್ಟು ಯಾವುದೇ ಕೊರತೆ ಯಾಗದಂತೆ ಎಲ್ಲ ರೀತಿಯಲ್ಲಿ ರಿಚ್ ಬರುವಂತೆ ಮಾಡುತ್ತಿದ್ದೇವೆ.

ಚಿತ್ರವನ್ನು ನೋಡಿದ ಪ್ರೇಕ್ಷಕರು ಸಣ್ಣ ಬದಲಾವಣೆಯನ್ನಂತೂ ತಮ್ಮ ಮನೆಗಳಲ್ಲಿ-ಮನಗಳಲ್ಲಿ ತಂದು ಕೊಳ್ಳುವರು. ಚಿತ್ರದ ಎಲ್ಲಾ ತಾಂತ್ರಿಕ ಕೆಲಸ ಮುಗಿದಿದ್ದು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.

ನಾನು ಛಾಯಾಗ್ರಾಹಕನಾಗಿ ಇನ್ನೂ ಬೆಳೆಯ ಬೇಕಾಗಿದೆ ಅದಕ್ಕೆ ಚಿತ್ರರಂಗದವರ ಜೊತೆಗೆ ಮಾಧ್ಯಮದವರ ಪ್ರೋತ್ಸಾಹ ಕೂಡ ಬೇಕು ಎಂದು ಸುಮಾರು ಇಪ್ಪತ್ತೈದು ಕಿರು ಚಿತ್ರಗಳಿಗೆ ಛಾಯಾಗ್ರಹಣ, ಎಂಟು ಸಿನಿಮಾಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿ ಅನುಭವವಿರುವ ನಿರ್ದೇಶಕ ಮೈಸೂರು ಸೋಮು ಹೇಳಿದ್ದಾರೆ.

ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾರ್ತಿಕ್ ಜಯರಾಜ್ ಅಭಿನಯಿಸಿದ್ದು ಉಳಿದಂತೆ ಮಂಡ್ಯ ಸತ್ಯ, ಆನಂದ ಬಾಬು, ಅಜಯ್ ಆರ್ ಎಸ್, ಲೋಕೇಶ್, ಗಿರೀಶ್ ಮಳವಳ್ಳಿ, ವಿಶ್ವ ಮಳವಳ್ಳಿ ಹಾಗೂ ಹಳ್ಳಿಯ ಗ್ರಾಮೀಣ ಕಲಾವಿದರು ಅಭಿನಯಿಸಿದ್ದಾರೆ.

ಸಾಹಿತ್ಯ-ಸಂಭಾಷಣೆ ಜೊತೆಗೆ ಛಾಯಗ್ರಹಣ ಸೋಮು ಅವರದಿದ್ದು, ಪತ್ರಿಕಾಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರದಿದೆ. ಕಾರ್ತಿಕ್ ಜಯರಾಜ್ ಮತ್ತು ಮೈಸೂರ್ ಸೋಮು ನಿರ್ಮಾಪಕರಾಗಿದ್ದಾರೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button