ನಿವೃತ್ತ ವೀರ ಯೋಧನಿಗೆ ಅದ್ದೂರಿ ಸ್ವಾಗತ…..
ಚೋರಗಿ (ಮೇ 2) :
ನಿವ್ರತ್ತ ವೀರ ಯೋಧನಿಗೆ ಅದ್ದೂರಿ ಸ್ವಾಗತ.ಇಂಡಿ ತಾಲ್ಲೂಕಿನ ಚೋರಗಿ ಗ್ರಾಮದ ನಿವಾಸಿ ಯಶ್ವಂತ್ ಶ್ರೀಶೈಲ. ಮೇಡೆದಾರ್. ಅವರ ಸೇವಾ ನಿವೃತ್ತಿ ಪ್ರಯುಕ್ತ ಚೋರಗಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಮಾಡಲಾಯಿತು.

ಕಳೆದ 22 ವರ್ಷದಿಂದ ಸೇನೆಯಲ್ಲಿ ಕೆಲಸ ಮಾಡಿ ತಮ್ಮ ಸ್ವಗ್ರಾಮಕ್ಕೆ ಬಂದಾಗ ವೀರ ಯೋಧನಿಗೆ ಗ್ರಾಮಸ್ಥರು ಹಾರ ಹಾಕಿ, ಸನ್ಮಾನಿಸಿ, ಜೈಕಾರ ಕೂಗುವ ಮೂಲಕ ಸ್ಥಳೀಯರು ಅದ್ಧೂರಿಯಾಗಿ ಸ್ವಾಗತ ಕೋರಿ ವೀರ ಯೋಧನನ್ನ ಬರಮಾಡಿಕೊಂಡರುಪಟ್ಟಣದ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಚೋರಗಿ ಗ್ರಾಮಕ್ಕೆ ತಲುಪಿತು. ಸಾಯಂಕಾಲ 4:೦೦ ರಿಂದ ಆರಂಭವಾದ ಮೋಟರ್ ಸೈಕಲ್ ರಾಲಿ ಮುಖಾಂತರ ತೆರೆದ ಜೀಪಿನ ಮೆರವಣಿಗೆಯಲ್ಲಿ ಚೋರಗಿ ನಿವೃತ್ತ ಯೋಧ ಯಶ್ವಂತ್ ಶ್ರೀಶೈಲ ಮೇಡೆದಾರ್. ಈರಣಗೌಡ್ ಪಾಟೀಲ. ಬಸಣ್ಣ ಮೇಡೆದಾರ್. ಶ್ರೀಶೈಲ ಮೇಡೆದಾರ್. ಗ್ರಾಮದ ಹಿರಿಯರು ಉಪಸ್ಥಿತರಿದ್ದರು.