ಯುವಕರ ಉತ್ಸಾಹವೇ ಪ್ರೋತ್ಸಾಹ ….

ಮಾವಿನಹಳ್ಳಿ (ಮೇ.2) :

ಮತಕ್ಷೇತ್ರದಲ್ಲಿ ಜನತೆ ಬದಲಾವಣೆ ಬಯಸಿ ಬಿಜೆಪಿ ಪಕ್ಷಕ್ಕೆ ಎಲ್ಲಿಲ್ಲದ ಬೆಂಬಲ ಸೂಚಿಸುತ್ತಿದ್ದಾರೆ. ಯುವಕರ ಉತ್ಸಾಹ ಪಕ್ಷಕ್ಕೆ ಬಲ ಬಂದಂತಾಗಿದ್ದು ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಕಂಕಣಬದ್ಧರಾಗಬೇಕೆಂದು ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಹೇಳಿದರು.

ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲರು ಮಾತನಾಡಿ ವಿಶ್ವಕರ್ಮ,ಕುಂಬಾರ ಸೇರಿದಂತೆ ಅನೇಕ ಅಭಿವೃದ್ದಿ ನಿಗಮ ರಚಿಸಿ ಬಡವರನ್ನು ಮೇಲೆ ತರಲು ಪ್ರಯತ್ನಿಸಿರುವ ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ ಸರಕಾರ ಹಲವಾರು ಜನಪರ ಯೋಜನೆ ಜಾರಿಯಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದ್ದು ಇದರಿಂದಾಗಿ ರಾಜ್ಯ ಮತ್ತಷ್ಟು ಅಭಿವೃದ್ದಿಗೆ ಪೂರಕವಾಗಲಿದೆ ಎಂದರು. ಸಭೆಯಲ್ಲಿ ಹಣಮಂತರಾಯಗೌಡ ಪಾಟೀಲ,ಶೀಲವಂತ ಉಮರಾಣಿ,ರಾಜಶೇಖರ ಯರಗಲ್ಲ, ರಾಘವೇಂದ್ರ ಕಾಪಸೆ, ಸೋಮು ದೇವರ, ವೇಂಕಟೇಶ ಕುಲಕರ್ಣಿ ಮಾತನಾಡಿದರು.ಚೆನ್ನುಗೌಡ ಪಾಟೀಲ,ಶ್ರೀಮಂತ ಮೊಗಲಾಯಿ, ಆರ್.ಜಿ.ಪಾಟೀಲ, ಮಲ್ಲು ವಾಲಿಕಾರ, ರಮೇಶ ಧರೆಣ್ಣನವರ, ಗಿರಿಮಲ್ ಬಿರಾದಾರ, ಬತ್ತು ಸಾಹುಕಾರ, ಬಸು ಮದರಖಂಡಿ, ಮಂಜುನಾಥ ಪಾಟೀಲ, ಈರನಗೌಡ ಬಿರಾದಾರ, ಹನುಮಂತಗೌಡ ಬಿರಾದಾರ ಮಾವಿನಹಳ್ಳಿ, ವಿಠ್ಠಲ ಕಾಗರ, ಸುನೀಲಗೌಡ ಬಿರಾದಾರ, ದಶರಥ ಕೋಟಿ ಮತ್ತಿತರಿದ್ದರು.

ಜಿಲ್ಲಾ ವರದಿಗಾರರು: ಬೀ.ಎಸ್.ಹೊಸೂರ್.ವಿಜಯಪುರ ….

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button