ರಕ್ತಹೀನತೆಯನ್ನು ತಡೆಗಟ್ಟುಲು ಸೇವಿಸಬೇಕಾದ ಆಹಾರಗಳು ಇವು.!

ರಕ್ತದಲ್ಲಿ ಹಿಮೋಗ್ಲೋಬಿನ್ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾದಾಗ ಉಂಟಾಗುವ ರೋಗವು ರಕ್ತಹೀನತೆಯಾಗಿದೆ. ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ ಈ ಸ್ಥಿತಿ ಉಂಟಾಗುತ್ತದೆ. ಪರಿಣಾಮವಾಗಿ, ಉಸಿರಾಟದ ತೊಂದರೆಗಳು, ಜೊತೆಗೆ ಆಯಾಸ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ಕೆಲವು ರೀತಿಯ ಆಹಾರಗಳನ್ನು ಸೇವಿಸುವ ಮೂಲಕ ಸಮಸ್ಯೆಯನ್ನು ನಿವಾರಿಸಬಹುದು ಎಂದು ತಜ್ಞರು ಹೇಳುತ್ತಾರೆ

**ಬೀಟ್ರೂಟ್ **

ರಕ್ತಹೀನತೆಯನ್ನು ನಿವಾರಿಸಲು ಬೀಟ್ರೂಟ್ ಸಹಾಯಕ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಏಕೆಂದರೆ ಇದರಲ್ಲಿ ಕಬ್ಬಿಣ, ತಾಮ್ರ, ರಂಜಕ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 1, ಬಿ 2, ಬಿ 6, ಬಿ 12 ಮತ್ತು ಸಿ ಸಮೃದ್ಧವಾಗಿದೆ

ನುಗ್ಗೆ ಎಲೆಗಳು :

ನುಗ್ಗೆ ಎಲೆಗಳಲ್ಲಿ ವಿಟಮಿನ್ ಎ, ಸಿ, ಮೆಗ್ನೀಸಿಯಮ್ ಮತ್ತು ಕಬ್ಬಿಣ ಸಮೃದ್ಧವಾಗಿದೆ. ಇದು ರಕ್ತಹೀನತೆಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.
ಎಲೆಗಳು ದೇಹಕ್ಕೆ ತಕ್ಷಣದ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ನೀವು ಆಯಾಸದಿಂದ ದೂರವಿರಬಹುದು.
ಡ್ರೈ ಪ್ರೂಟ್ಸ್‌ :

ಗೋಡಂಬಿ, ಬಾದಾಮಿಯಂತಹ ಪ್ರೂಟ್ಸ್‌ ಕಬ್ಬಿಣದ ಉತ್ತಮ ಮೂಲಗಳಾಗಿವೆ. ಅವುಗಳಲ್ಲಿರುವ ಕಬ್ಬಿಣ ಸೇರಿದಂತೆ ಅನೇಕ ಪೋಷಕಾಂಶಗಳು ರಕ್ತಹೀನತೆಯನ್ನು ತಡೆಯುತ್ತವೆ.
ಇದಲ್ಲದೆ, ಕ್ಯಾನ್ಸರ್, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಹೆಚ್ಚಿನ ತೂಕವನ್ನು ತಡೆಯುತ್ತವೆ

*ಎಳ್ಳಿನ ಬೀಜಗಳು **

ರಕ್ತಹೀನತೆಯನ್ನು ನಿವಾರಿಸಲು ಎಳ್ಳಿನ ಬೀಜಗಳು ಸಹ ಸಹಾಯ ಮಾಡುತ್ತವೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
ಕಬ್ಬಿಣ, ತಾಮ್ರ, ಸತು, ಸೆಲೆನಿಯಂ, ವಿಟಮಿನ್ ಬಿ 6, ಇ ಮತ್ತು ಫೋಲೇಟ್ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button