ಶೇ 100 ರಷ್ಟು ಫಲಿತಾಂಶ ಗಳಿಸಿದ ಸಾಯಿ ಪಬ್ಲಿಕ್ ಶಾಲೆ.
ಇಂಡಿ ಮೇ.12
2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರೀ ಸಾಯಿ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಕಳೆದ ಮೂರು ವರ್ಷಗಳಂತೆ ಈ ವರ್ಷವೂ ಶೇ 100 ರಷ್ಟು ಫಲಿತಾಂಶ ಪಡೆದಿದೆ.

ಕುಮಾರಿ ಪ್ರಿಯಾ. ಎಸ್. ಸನಗೊಂಡ 623 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ರ‍್ಯಾಂಕ ಪಡೆದಿರುತ್ತಾಳೆ. ಕುಮಾರಿ ಸೃಷ್ಠಿ. ಆರ್. ಬಿರಾದಾರ, ನಿಹಾರಿಕಾ ಎನ್ ಕುಡಲೂರ 620 ಅಂಕ, ನೀಲಗಂಗಾ. ಜಿ. ಝಂಪಾ ಶೇ 98.24. ಕುಮಾರಿ ಸಿಂಧು. ಎಸ್. ಝಂಪಾ, ದೀಪಕ. ಎಸ್. ರೂಗಿ ಶೇ 98.08 ಅಂಕ ಪಡೆದಿದ್ದಾರೆ. ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 27 ವಿದ್ಯಾಥಿಗಳು ಶೇ 95 ಕ್ಕಿಂತ ಹೆಚ್ಚು, 19 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಮತ್ತು ಇನ್ನುಳಿದ ಎಲ್ಲಾ 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸಂಗಪ್ಪ. ಬಿ. ಕಲಘಟಗಿ , ಕಾರ್ಯದರ್ಶಿ ಸಂಜೀವ. ಎಸ್. ಧನಪಾಲ , ಎಲ್ಲ ನಿರ್ದೇಶಕರುಗಳು, ಆಡಳಿತಾಧಿಕಾರಿ ಡಾ|| ಎಸ್. ಎಸ್. ಕಲಘಟಗಿ, ಪ್ರಾಚಾರ್ಯ ವಿವೇಕಾನಂದ. ಬಿ. ಎಚ್. ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದಿಸಿದ್ದಾರೆ.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್. ವಿಜಯಪುರ