ತರೀಕೆರೆ ಕಾಂಗ್ರೆಸ್ ಗೆಲುವು ಬೃಹತ್ ಮೆರವಣಿಗೆ.
ತರೀಕೆರೆ ಮೇ.13
ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ 14 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಚ್. ಶ್ರೀನಿವಾಸ್ 38780 ಮತಗಳನ್ನು ಪಡೆದು, ಸಮೀಪದ ಬಿಜೆಪಿ ಅಭ್ಯರ್ಥಿಗಿಂತ 8,406 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಿ ಎಸ್ ಸುರೇಶ್ ರವರಿಗಿಂತ ಹೆಚ್ಚಿನ ಮತಗಳಿಸಿ ಜಯಭೇರಿ ಬಾರಿಸಿದ್ದಾರೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಜಿ. ಎಚ್. ಶ್ರೀನಿವಾಸ್ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗಾಳಿ ಹಳ್ಳಿ ಕ್ರಾಸ್ ನಿಂದ ಬೃಹತ್ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದರು.
ಜಿಲ್ಲಾ ವರದಿಗಾರರು : ಎನ್.ವೆಂಕಟೇಶ್.ತರೀಕೆರೆ