ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ತರೀಕೆರೆ ತಾಲೂಕ ದಂಡಾಧಿಕಾರಿಗಳರವರ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ.
ತರೀಕೆರೆ ಮೇ.19

ಬಳ್ಳಾರಿ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಸಂತೋಷ. ಹೆಚ್. ಲಾಡ್. ಇವರು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂ ಕಬಳಿಕೆ ಮಾಡಿರುವುದಲ್ಲದೇ ತಮ್ಮ ಕ್ಷೇತ್ರದಲ್ಲಿ ಇನ್ನೂ ಹಲವಾರು ಭೂಮಿಗಳನ್ನು ಅಕ್ರಮವಾಗಿ ಬೇನಾಮಿ ಹೆಸರಲ್ಲಿ ಕಬಳಿಕೆ ಮಾಡಿರುವುದ್ದರಿಂದ ಇಂತಹ ಭ್ರಷ್ಟಾಚಾರವನ್ನು ಮಾಡುತ್ತಿರುವ ಶಾಸಕನಿಗೆ ಮಂತ್ರಿ ಪದವಿ ನೀಡಿದರೆ ಮುಂದಿನ ದಿನಗಳಲ್ಲಿ ಇದೇ ರಾಜಕೀಯ ಪ್ರಭಾವ ಬಳಸಿ ಕೊಂಡು ಇನ್ನೂ ಹೆಚ್ಚಿನ ಭ್ರಷ್ಟಾಚಾರ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಶಾಸಕ ಸಂತೋಷ. ಹೆಚ್. ಲಾಡ್. ಗೆ ಯಾವುದೆ ಮಂತ್ರಿ ಸ್ಥಾನವನ್ನು ನೀಡಬಾರದು ಹಾಗೂ ಇವರು ಈ ಮುಂಚೆ ಮಾಡಿರುವ ಭ್ರಷ್ಟಾಚಾರಗಳ ವಿರುದ್ದ ವಿಶೇಷ ತನಿಖೆಗೆ ಮಾಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ತರೀಕೆರೆ ತಾಲೂಕ ದಂಡಾಧಿಕಾರಿಗಳು ಶ್ರೀಮತಿ ಪೂರ್ಣಿಮಾ. ಸಿ.ಎಸ್.ರವರ ಮುಖಾಂತರ ರಾಜ್ಯಪಾಲರಿಗೆ ಮನವಿ ನೀಡಲಾಯಿತು.