ದಲಿತ ಮುಖಂಡರುಗಳಾದ ಗಂಗಣ್ಣ. ದುರ್ಗೇಶ್. ಹಾಗೂ ಬಿ. ಟಿ.ಗುದ್ದಿ. ಇವರ ನೇತೃತ್ವದಲ್ಲಿ ನಡೆಸಿದಂತಹ ಸಭೆಯಲ್ಲಿ ನೂತನ ಶಾಸಕರಾದ ಡಾll ಎನ್.ಟಿ.ಶ್ರೀನಿವಾಸ್ ರವರಿಗೆ ಆರೋಗ್ಯ ಸಚಿವ ಸ್ಥಾನವನ್ನು ನೀಡುವಂತೆ ಒತ್ತಾಯಿಸಿ.
ಖಾನಹೊಸಹಳ್ಳಿ ಮೇ.19
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನಹೊಸಳ್ಳಿಯ ಡಾ. ಬಿಆರ್ ಅಂಬೇಡ್ಕರ್ ರವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವೃತ್ತದಲ್ಲಿ ದಲಿತ ಮುಖಂಡರುಳು 2023 ನೇ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಾಕ್ಟರ್ ಎನ್. ಟಿ. ಶ್ರೀನಿವಾಸ್ ಇವರನ್ನು 54,350 ಮತಗಳಿಂದ ಗೆಲುವು ಸಾಧಿಸಿದ್ದು ಈ ಗೆಲುವಿಗೆ ಕೂಡ್ಲಿಗಿ ತಾಲೂಕಿನ ದಲಿತ ಮುಖಂಡರು ಹಾಗೂ ಕರ್ನಾಟಕ ಮಾದಿಗ ದಂಡೋರ ಸಂಘಟನೆಯ ಮುಖಂಡರುಗಳು ಸ್ಥಳೀಯ ಅಭ್ಯರ್ಥಿಯಾದ ಅಂತಹ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಇವರನ್ನು ಗೆಲುವು ಸಾಧಿಸಲಿಕ್ಕೆ ಶ್ರಮಿಸಿದ ದಲಿತ ಮುಖಂಡರ ನಿಸ್ವಾರ್ಥತೆಯಿಂದ ನೂರಾರು ಹಳ್ಳಿಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಪ್ರಚಾರ ಮಾಡಿ ಗೆಲುವಿಗೆ ಸಾರ್ಥಕತೆ ಕಂಡು ಇಂದು ಹತ್ತಾರು ಮುಖಂಡರುಗಳು ಖಾನಹೊಸಳ್ಳಿ ಭಾಗದಿಂದ ಸಂತಸ ವ್ಯಕ್ತಪಡಿಸುವುದರ ಜೊತೆಗೆ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಇವರನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬಹುಮತದಿಂದ ಗೆಲುವು ಸಾಧಿಸಿರುವ ಇವರನ್ನು ಆರೋಗ್ಯ ಮಂತ್ರಿಯನ್ನಾಗಿ ಮಾಡುವಂತೆ ಕಾಂಗ್ರೆಸ್ ಇಂದು ಧುರೀಣರಿಗೆ ಒತ್ತಾಯದ ಮೂಲಕ ಘೋಷಣೆಗಳನ್ನು ಕೂಗಿದರು .

ಈ ಸಂದರ್ಭದಲ್ಲಿ ಗಂಗಣ್ಣ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷರು ಹಾಗೂ ಬಿ.ಟಿ. ಗುದ್ದಿ ದುರ್ಗೇಶ್ ಜಿಲ್ಲಾ ಸಂಘಟನಾ ಸಂಚಾಲಕರು ಮತ್ತು ಹೆಗ್ಡಾಳ್. ಮಹೇಶ್. ಕರ್ನಾಟಕ ಮಾದಿಗ ದಂಡೋರ ತಾಲೂಕ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಕಾವಲಿ. ಶಿವಪ್ಪ ನಾಯಕ ,ಶಾಸಕರ ಆಪ್ತ ಸಹಾಯಕರಾದ ಮರಳು ಸಿದ್ದಪ್ಪ ,ಸತೀಶ್. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಕರಿಬಸಪ್ಪ, ಚೌಡೇಶ್ ಬಣವಿಕಲ್, ಹನುಮಂತಪ್ಪ, ತರಕಾರಿ ದುರ್ಗಪ್ಪ ,ಕಲ್ಲಳ್ಳಿ ಶಿವಣ್ಣ ,ಕಲ್ಲಳ್ಳಿ ಸಿದ್ದೇಶ, ಕಲ್ಲಳ್ಳಿ ಬಸವರಾಜ, ದುರ್ಗಪ್ಪ ಲೋಕಿ ಕೇರೆ, ದುರ್ಗಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು, ಖಾನಹೊಸಳ್ಳಿ ನಾಗೇಶ್, ಕಾಂಗ್ರೆಸ್ ಮುಖಂಡ ನಾಗೇಶ್ ರೆಡ್ಡಿ, ಹಾಗೂ ಸಿಬಿ ನಾಗೇಶ್, ಶ್ರೀನಿವಾಸ್ ರೆಡ್ಡಿ ಸೇರಿದಂತೆ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ