ಹೊರ ರಾಜ್ಯದಿಂದ ಬಂದಿರುವ ವಲಸೆ ಕಾರ್ಮಿಕರ ಮಾಹಿತಿಯನ್ನು ಕ್ರೋಢೀಕರಿಸುವರೇ! ಪೊಲೀಸ್ ಇಲಾಖೆ.
ಕೊಟ್ಟೂರು ಮೇ.27

ಕರ್ನಾಟಕದಲ್ಲಿ ಇದೀಗ ಬಿಟ್ಟಿ ಭಾಗ್ಯಗಳು ಹೆಚ್ಚಾಗಿರುವುದರಿಂದ ವರ ರಾಜ್ಯದಿಂದ ವಲಸೆ ಬಂದಿರುವ ಕಾರ್ಮಿಕರನ್ನು ಯಾವುದೇ ಸಂಬಂಧ ಪಟ್ಟ ಇಲಾಖೆಗಳು ಪರಿಶೀಲಿಸಿಲ್ಲ ಎಂದು ಆರ್ ಟಿ ಐ ಕಾರ್ಯಕರ್ತರು ಆರೋಪಿಸಿದ್ದಾರೆ.ಕರ್ನಾಟಕ ರಾಜ್ಯವು ಶಾಂತಿ ಸೌಹಾರ್ಧತೆಗೆ ತನ್ನದೇ ರೀತಿಯಲ್ಲಿ ಹೆಸರುವಾಸಿಯಾಗಿರುವ ರಾಜ್ಯ. ಇಲ್ಲಿ ಹೊರ ರಾಜ್ಯಗಳಿಂದ ವಿವಿಧ ಕೆಲಸಗಳನ್ನು ಆಶ್ರಯಿಸಿ ಅತೀ ಹೆಚ್ಚಾಗಿ ವಲಸೆ ಬಂದು ನೆಲೆ ನಿಂತಿರುತ್ತಾರೆ. ಇವರುಗಳ ಸಂಪೂರ್ಣ ಮಾಹಿತಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹಾಗೂ ಆಯಾ ಜಿಲ್ಲೆಯ ತಾಲೂಕುಗಳಲ್ಲಿ ನೆಲೆಸಿರುವ ಹೋರ ರಾಜ್ಯದ ಕಾರ್ಮಿಕರ ಹೆಸರಿನಲ್ಲಿ ಬಂದಿರುವ ವಲೆಸಿಗರನ್ನು ಸಂಪೂರ್ಣ ಮಾಹಿತಿ ಪಡೆದು ಇವರುಗಳು ಆಯಾ ರಾಜ್ಯದಿಂದ ಇವರ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ವರದಿಯನ್ನು ಕ್ರೋಢೀಕರಿಸುವರೇ ಪೊಲೀಸ್ ಇಲಾಖೆ ಎಂದು ಸಾರ್ವಜನಿಕರು ಹಾಗೂ ಆರ್.ಟಿ.ಐ, ಕಾರ್ಯಕರ್ತರ ಪ್ರಶ್ನೆ?. ರಾಜ್ಯದ ಗುಪ್ತಚರ ಇಲಾಖೆಯೂ ಸಹ ರಾಜ್ಯಕ್ಕೆ ವಲಸೆ ಬಂದಿರುವ ಕಾರ್ಮಿಕರನ್ನು ಸಂಪೂರ್ಣವಾಗಿ ಕ್ರೋಢೀಕರಿಸುವಲ್ಲಿ ವಿಫಲವಾಗಿದಿಯೇ ಎಂದು ಪ್ರೆಶ್ನೆ ಮೂಡುತ್ತದೆ. ಹಾಗೂಕೊಟ್ಟೂರಿನಲ್ಲಿ ಸಹ ಸರಿ ಸುಮಾರು 50 ವರ್ಷಗಳಿಂದ ನೆಲೆಸಿರುವ ವ್ಯಕ್ತಿ ಮೇಲೆ ಅನುಮಾನಾಸ್ಪದ ಕೇಸು ದಾಖಲು ಮಾಡುವ ಪೋಲಿಸ್ ಇಲಾಖೆಯು ಹೊರ ರಾಜ್ಯದಿಂದ ಬರುವ ವಲಸೆ ಕಾರ್ಮಿಕರನ್ನು ಯಾಕೆ ಪರಿಶೀಲನೆ ಮಾಡಿಲ್ಲ! ಅವರ ಮೇಲೆ ಯಾಕೆ ಅನುಮಾನಾಸ್ಪದ ಬಂದಿಲ್ಲ! ಇಲ್ಲಿ ನಡೆಯುವ ಕಳ್ಳತನ ಇನ್ನೂ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದೆಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಹೊರ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದಿರುವ ಕಾರ್ಮಿಕರನ್ನು ತಡೆಗಟ್ಟುವಂತೆ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಿ ಎಂದು ಸರ್ಕಾರಕ್ಕೆ ಇಲ್ಲಿರುವ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಕೆ ಕೊಟ್ರೇಶ್ ಆರ್ ಟಿ ಐ ಕಾರ್ಯಕರ್ತರು ಹಾಗೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರು ಸಂಬಂಧಪಟ್ಟ ಇಲಾಖೆಗಳು ವಲಸೆ ಬಂದು ರಾಜ್ಯ, ಜಿಲ್ಲೆ ಹಾಗೂ ವಿವಿಧ ತಾಲೂಕುಗಳಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಹೊರ ರಾಜ್ಯದ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಯಾವ ಇಲಾಖೆ ಯಾವ ರೀತಿ ಕ್ರಮ ವಹಿಸುತ್ತದೆ ಎಂದು ಕಾದು ನೋಡಬೇಕು.
ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ. ಕೊಟ್ಟೂರು