99 ಸಾವಿರ ಸಸಿಗಳು ಇಂದಿನಿಂದ ವಿತರಣೆ ಪ್ರಾರಂಭ.ಪ್ರಭುಲಿಂಗ ಭೂಯ್ಯಾರ.
ಇಂಡಿ ಜೂನ್.2

ಪ್ರಾದೇಶಿಕ ಅರಣ್ಯ ವಲಯ ಇಲಾಖೆ ವ್ಯಾಪ್ತಿಯ ಜೇವೂರ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾದ 99 ಸಾವಿರ ನಾನಾ ತಳಿಯ ಸಸಿಗಳು ವಿತರಣೆ ಪ್ರಾರಂಭಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಪ್ರಭುಲಿಂಗ ಬ್ಯೂಯ್ಯಾರ ತಿಳಿಸಿದ್ದಾರೆ. ಬೇಸಿಗೆ ಕಳೆದು ಮುಂಗಾರಿನ ಆರಂಭದಲ್ಲಿಯೇ ಸಸಿಗಳನ್ನು ವಿತರಣೆ ಮಾಡಬೇಕು ಎನ್ನುವ ಉದ್ದೇಶದಿಂದ ಸಸ್ಯ ಕ್ಷೇತ್ರದಲ್ಲಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಹೆಚ್ಚಿನ ಕಾಳಜಿ ವಹಿಸಿ 6*9, 8*12, 10*16 ಅಳತೆಯ ಚೀಲಗಳಲ್ಲಿ ಸಸಿಗಳನ್ನು ರಸ್ತೆ ಬದಿ, ಶಾಲೆ, ಕಾಲೇಜು, ಆಸ್ಪತ್ರೆ ಇತರೆ ಸರಕಾರಿ ಜಮೀನಿನಲ್ಲಿ ಇಲಾಖೆ ವತಿಯಿಂದ ನಿರ್ವಹಣೆ ಹಾಗೂ ರಿಯಾಯತಿ ದರದಲ್ಲಿ ರೈತರಿಗೆ ಇಂದು ವಿತರಣೆ ಪ್ರಾರಂಭಿಸಲಾಗಿದೆ ಎಂದರು. 6*9 ಕ್ಕೆ 6 ರೂ, 10*16 ಗೆ 72 ರೂ, 8*12 ಕ್ಕೆ ರೂ,23, ರಿಯಾಯತಿ ದರದಲ್ಲಿ ವಿತರಣೆ ಮಾಡಲು ಇಲಾಖೆ ಆದೇಶಿಸಿದೆ.ಶ್ರೀಗಂಧ,ಮಹಾಗನಿ, ಪೇರು, ನಿಂಬೆ, ಅಶೋಕ, ಮಾವು, ಬಿದಿರು, ಕರಿಬೇವು, ನುಗ್ಗೆ, ಸೀತಾಫಲ, ಬೇವು, ಹೆಬ್ಬೇವು, ಬಿದಿರು ಸೇರಿ 99 ಸಾವಿರ ಸಸಿಗಳಿವೆ.ಸಸಿಗಳನ್ನು ವೈಜ್ಞಾನಿಕವಾಗಿ ಬೆಳೆಸಲಾಗಿದ್ದು ಮಾರಾಟ ಮಾಡುವದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.ಪ್ರತಿವರ್ಷದಂತೆ ಈ ಬಾರಿಯೂ ಇಲಾಖೆಯಿಂದ ನಿಗದಿತ ಗುರಿಯಂತೆ ಸಸಿಗಳನ್ನು ಬೆಳೆಸಲಾಗಿದೆ. ರೈತರಿಗೆ ಐವತ್ತು ಸಾವಿರ, ಶಾಲೆ ಹಾಗೂ ಇನ್ನಿತರ ಸರಕಾರಿ ಇಲಾಖೆಗಳಿಗೆ ಐದು ಸಾವಿರ,ಕಳೆದ ಬಾರಿ ಹಚ್ಚಿದ ಸಸಿಗಳಲ್ಲಿ ಕೆಲವೊಂದು ಹಾನಿ ಯಾಗಿದ್ದು ಅದಕ್ಕೆ ಹದಿನೈದು ಸಾವಿರ ಹೀಗೆ 99 ಸಾವಿರ ಸಸಿ ವಿತರಿಸಲು ಪ್ರಾರಂಭಿಸಲಾಗಿದೆ ಎಂದು ಇಲಾಖೆಯ ಸುನೀಲ ಪವಾರ,ರಶೀದ ಮಾಶ್ಯಾಳ, ಎನ್.ಆರ್.ಶೇಖ, ಗೌಡಪ್ಪ ಸನಕನಹಳ್ಳಿ ತಿಳಿಸಿದ್ದಾರೆ. ಕೋಟ್—ರೈತರಿಗೆ ಕಡಿಮೆ ದರದಲ್ಲಿ ಸಸಿ ಸಿಗುವಂತೆ ಜೇವೂರ ಸಸ್ಯಾಲಯದಲ್ಲಿ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ.ಜೂ.2 ಇಂದಿನಿಂದ ವಿತರಣೆ ಕಾರ್ಯ ಆರಂಭಿಸಲಾಗಿದೆ. ರೈತರು ಸಸಿಗಳನ್ನು ಪಡೆದು ನೆಟ್ಟು ಅವುಗಳನ್ನು ಪೋಷಿಸಬೇಕು. ಪರಿಸರವನ್ನು ಇನ್ನಷ್ಟು ಸಮೃದ್ಧಗೊಳಿಸಲು ಇಲಾಖೆಯೊಂದಿಗೆ ಕೈ ಜೋಡಿಸಬೇಕು.ಪ್ರಭುಲಿಂಗ ಭ್ಯೂಯ್ಯಾರ ಆರ್.ಎಫ್.ಓ ಇಂಡಿ ಹೇಳಿದರು.