ಮೊಳಕಾಲ್ಮೂರು ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಹರಿಸುವೆ ಭರವಸೆ ಕೊಟ್ಟ ಶಾಸಕರು.
ಮೊಳಕಾಲ್ಮೂರು ಜೂನ್.2

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಾಗಿ ಪೈಪುಗಳಲ್ಲಿ ಕಲುಷಿತ ಮಿಶ್ರಣ ನೀರು ಬರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ ಆದಕಾರಣ ಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಪಟ್ಟಣ ಪಂಚಾಯತಿ ಅಧಿಕಾರಿಗಳನ್ನು ಮತ್ತು ಸಿಬ್ಬಂದಿ ವರ್ಗದ ನೀರ ಗಂಟೆ ಇವರುಗಳನ್ನು ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ರೂಪ ಮೇಡಂ ಇವರ ಸಭೆಯಲ್ಲಿ ಮತ್ತು ಪಟ್ಟಣ ಪಂಚಾಯತಿ ಸದಸ್ಯರುಗಳು ಅಧ್ಯಕ್ಷರು ಉಪಾಧ್ಯಕ್ಷರು ಸಭೆ ನಡೆಸಿ ರಂಗನದುರ್ಗ ಜಲಾಶಯದಿಂದ ಬರುವ ನೀರನ್ನು ಸರಿಯಾದ ರೀತಿಯಿಂದ ಸಾರ್ವಜನಿಕರಿಗೆ ಹರಿಸಬೇಕೆಂದು ಮಾನ್ಯ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಿಂದೆ ಎನ್. ವೈ. ಗೋಪಾಲಕೃಷ್ಣ ಶಾಸಕರಾದಾಗ ರಂಗಯ್ಯನದುರ್ಗ ಜಲಾಶಯದಿಂದ ಮೊಳಕಾಲ್ಮುರು ಪಟ್ಟಣಕ್ಕೆ ಕುಡಿಯಲಿಕ್ಕೆ ನೀರು ಹರಿಸಿದಂತ ಪುಣ್ಯಾತ್ಮರು ಇವತ್ತು ಅದೇ ನೀರು ನೆನಪಿಗೆ ಬಂದಂತಾಗಿದೆ ಆದರೆ ಯಾವುದೇ ಮೂಲಭೂತ ಸೌಕರ್ಯಗಳಾಗಲಿ ಬಡವರಿಗೆ ದೀನದಲಿತರಿಗೆ ಎಲ್ಲಾ ನಾಗರಿಕರಿಗೆ ಸರಿಯಾದ ರೀತಿಯಿಂದ ದೊರಕಿಸಿಕೊಡಬೇಕೆಂದು ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಸಭೆಯಲ್ಲಿ ಮಾತನಾಡಿದರು ಎಂದು ವರದಿಯಾಗಿದೆ. ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು