ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸದಸ್ಯರುಗಳು ……
ಕೂಡ್ಲಿಗಿ (ಜೂನ್.7) :
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ನೂತನ ಸ್ಥಳೀಯ ಜನಪ್ರಿಯ ಶಾಸಕ ಡಾ.ಶ್ರೀನಿವಾಸ್ ಎನ್. ಟಿ ರವರು ಕೂಡ್ಲಿಗಿ ಪಟ್ಟಣ ಪಂಚಾಯತಿಯ ಕಚೇರಿಗೆ ಭೇಟಿ ನೀಡಿದ ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರುಗಳು ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಧಿಕಾರಿಶ್ರೀ. ಫಿರೋಜ್ ಖಾನ್ ಹಾಗೂ ಸಿಬ್ಬಂದಿಗಳಜೊತೆಗೆ ಸಭೆ ಮಾಡಿ ಸಭೆಯಲ್ಲಿ ಕೂಡ್ಲಿಗಿ ಪಟ್ಟಣದ ಎ.ಪಿ.ಎಂ.ಸಿ ಬಗ್ಗೆ ಚರ್ಚಿಸಿ ಹಾಗೂ ಪಟ್ಟಣದ ಸ್ವಚ್ಛತೆಯ ಚರಂಡಿಗಳ ಸ್ವಚ್ಛತೆ, ಮಾಹಿತಿ ತೆಗೆದುಕೊಂಡರು ಹಾಗೂ ಟೌನ್ ಪ್ಲಾನ್ ಬಿಟ್ಟು NA ಆಗಿದ್ದು ಡೋರ್ ನಂಬರ್ ಆಗಿರುವಂತಹವುಗಳ ಬಗ್ಗೆ ಯು ಚರ್ಚಿಸಲಾಗಿಯಿತು.

ಪಟ್ಟಣದಲ್ಲಿ ಈಗಾಗಲೇ ಹಳೆಯ ಕಾಂಪ್ಲೆಕ್ಸ್ ಬಿಲ್ಡಿಂಗ್ಗಳಿದ್ದು ಅವುಗಳನ್ನು ಹೊಡೆದು ಪುನಃ ಅದೇ ಸ್ಥಳಗಳಲ್ಲಿ ಹೊಸ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದರೆ ಅಭಿವೃದ್ಧಿಯ ವಿಷಯದಲ್ಲಿ ತುಂಬಾ ಉಪಯುಕ್ತವಾಗುತ್ತದೆ ಎಂದು ಮಾನ್ಯ ಶಾಸಕರಿಗೆ ಸದಸ್ಯರುಗಳು ತಮ್ಮ ತಮ್ಮ ಸಲಹೆಗಳನ್ನು ತಿಳಿಸಿದರು. ತ್ಯಾಜ್ಯ ವಸ್ತುಗಳ ವಿಲೇವಾರಿ, ಪಟ್ಟಣದಲ್ಲಿ ಬಹು ಮುಖ್ಯವಾದದ್ದು ಕುಡಿಯುವ ನೀರಿನ ಪೂರೈಕೆ ಬಗ್ಗೆ ಚರ್ಚಿಸಲಾಯಿತು.ಹಾಗೂ ಪಟ್ಟಣದ ಶಾಲೆ ಪ್ರಾರಂಭದ ಸಮಯದಲ್ಲಿ ಹಾಗೂ ಶಾಲಾ ಬಿಡುವ ಸಮಯದಲ್ಲಿ ಅತಿ ಹೆಚ್ಚಾಗಿ ವಿದ್ಯಾರ್ಥಿಗಳು ಓಡಾಡುತ್ತಿದ್ದು ಕೂಡ್ಲಿಗಿ ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರ ನಿಯಮವನ್ನು ಪಟ್ಟಣದ ಒಳಗಡೆ ಬರದೆ ಬೇರೆ ಮಾರ್ಗವಾಗಿ ಭಾರಿ ವಾಹನಗಳ ಸಂಚಾರವನ್ನು ಮಾಡಬೇಕು ಎಂದು ಮಾನ್ಯ ಶಾಸಕರ ಗಮನಕ್ಕೆ ತರ ಬಯಿಸಿದರು ಕಾರಣ ಈ ಬಾರಿ ವಾಹನಗಳ ಸಂಚಾರದಿಂದ ಲಾರಿಗಳು ಲೋಡ್ ತುಂಬಾ ಕಲ್ಲು ಮಣ್ಣು ಇನ್ನಿತರ ಸಾಮಗ್ರಿಗಳನ್ನು ಹೊತ್ತು ತರುವ ಬಾರಿ ವಾಹನಗಳ ರಭಸಕ್ಕೆ ಅಥವಾ ಓಡಾಟಕ್ಕೆ ವಿಪರೀತ ಧೂಳು ಹಾಗೂ ಪಾದಾಚಾರಿಗಳಿಗೆ ಟು ವಿಲ್ಲರ್ ವಾಹನ ಸವಾರರಿಗೆ ಓಡಾಡುವ ಸಂದರ್ಭದಲ್ಲಿ ತುಂಬಾ ಅಪಾಯ ಆಗುವ ಸಾಧ್ಯತೆ ಹೆಚ್ಚು ಎಂದು ಸದಸ್ಯರುಗಳು ತಿಳಿಸಿದರು ಹಾಗೂ ಅತೀ ಶಿಘ್ರದಲ್ಲೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಸಂಬಂಧಪಟ್ಟಂತಹ ಅಧಿಕಾರಿ ವರ್ಗದವರಿಗೆ ತಿಳಿಸುವುದಾಗಿ ಹೇಳಿದರು ಹಾಗೆ ಸಭೆಯಲ್ಲಿ ಇದ್ದಂತಹ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಬಸ್ ಸ್ಟಾಪ್, ಪಟ್ಟಣದ ಅಂಗಡಿ ಮುಗ್ಗಟ್ಟು ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ವಿಚಾರವಾಗಿ ಉತ್ತಮ ರೀತಿಯ ಕ್ರಮವಹಿಸಲಿ ಎಂದು ತಿಳಿಸಿದರು,ಇನ್ನೂ ಇಲಾಖೆಯ ಕೆಲಸ-ಕಾರ್ಯಗಳು ಸಾರ್ವಜನಿಕರಿಗೆ ತೊಂದರೆ ಆಗದಂತೆ ಸುಗಮವಾಗಿ ಮುಂದುವರಿಸಿಕೊಂಡು ಹೋಗಬೇಕೆಂದು ಸಿಬ್ಬಂದಿಗಳಿಗೆ ತಿಳಿಸಿದರು .

ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ ,ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಗುರುಸಿದ್ದನಗೌಡ್ರು ,ಬಿಜೆಪಿ ಮುಖಂಡರಾದ ಭೀಮೇಶ್, ಹಾಗೂ ಕಾಂಗ್ರೆಸ್ ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಕಾವಲಿ ಶಿವಪ್ಪ ನಾಯಕ ,ಜಯಮ್ಮನವರ ರಾಘವೇಂದ್ರ ಸಿರಿಬಿ ಮಂಜುನಾಥ್ ಪಟ್ಟಣ ಪಂಚಾಯತಿ ಸದಸ್ಯರು ಕೆ. ಈಶಪ್ಪ ಪಟ್ಟಣ ಪಂಚಾಯ್ತಿ ಸದಸ್ಯರು ರಾಘವೇಂದ್ರ, ಕೆಇಬಿ ಬಸುರಾಜ್ ಹಾಗೂ ಪಟ್ಟಣ ಪಂಚಾಯತಿಯ ಸಂಬಂಧಿಗಳಾದ ಆರೋಗ್ಯಧಿಕಾರಿಗಳಾದ ಗೀತಾ ರಾಘವೇಂದ್ರ ,ಓಬಳೇಶ್, ಲಿಂಗಯ್ಯ. ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Sknewskannada.in
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ