ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸಮಸ್ಯೆಗಳಿಗೆ ವ್ಯವಸ್ಥೆಯ ಸೌಲಭ್ಯಗಳು ಸಿಗುವಂತೆ ಶಾಸಕರಿಗೆ ಕೂಡ್ಲಿಗಿ ಮುಖಂಡರುಗಳು ಮಂಜು ಮಯೂರ, ಹೆಚ್.ವೀರಣ್ಣ ಮನವಿ…….
ಕೂಡ್ಲಿಗಿ (ಜೂನ್.7) :
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾll ಎನ್. ಟಿ. ಶ್ರೀನಿವಾಸ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು, ಇದೇ ಸಂದರ್ಭದಲ್ಲಿ ಜಿಲ್ಲಾ ವೈದ್ಯಧಿಕಾರಿ ಸಲೀಂ ರವರು ಆಸ್ಪತ್ರೆಗೆ ಆಗಮಿಸಿದ್ದರು.ಆಸ್ಪತ್ರೆಯ ಒಳಗೂ ಹಾಗೂ ಹೊರಗೆ ಆಸ್ಪತ್ರೆಯ ಆವರಣದಲ್ಲಿ ನೃೆರ್ಮಲ್ಯತೆ ಮರೆಯಾಗಿದ್ದಕ್ಕೆ, ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದರು. ವೈದ್ಯರು ಹಾಗೂ ಬಹುತೇಕ ಸಿಬ್ಬಂದಿಯವರು ನಿಗದಿತ ಸಮಯದಲ್ಲಿ, ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಆಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆಯಾಗಿವೆ.

ಈ ಬಾರಿ ನೂತನ ಸರ್ಕಾರದಲ್ಲಾದರೂ ನೂತನ ಶಾಸಕರು ವೃತ್ತಿಯಲ್ಲಿ ಡಾಕ್ಟರ್ ಆಗಿರುವುದರಿಂದ ಇಲ್ಲಿನ ಜನರಿಗೆ ಸಿಗುವಂತಹ ಆರೋಗ್ಯದ ವ್ಯವಸ್ಥೆಯ ಸೌಲಭ್ಯಗಳು ಸಿಗುವಂತಾಗಬೇಕು ಶೀಘ್ರದಲ್ಲಿಯೇ ಸರ್ಕಾರಕದ ಗಮನ ಸೆಳೆದು ಸಮಸ್ಯೆಗಳ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಬೇಕೆಂಬುದು ಕೆಲವೊಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ. ನಮಗೆ ವಿಶ್ವಾಸವಿದೆ ನಮ್ಮ ಜಿಲ್ಲೆಗೆ ಸಂಬಂಧಪಟ್ಟಂತಹ ಡಿ. ಎಚ್ .ಓ .ಸಲೀಂ ರವರು ಸಹ ಆಸ್ಪತ್ರೆಯನ್ನು ವೀಕ್ಷಿಸಿರುತ್ತಾರೆ, ಜನರ ಇಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಆಸ್ಪತ್ರೆಗೆ ಬೇಕಾದಂತಹ ಉಪಸಲಕರಣೆಗಳು ಹಾಗೂ ಆಸ್ಪತ್ರೆಯ ಮಿಷನರಿಗಳು ಹಾಗೂ ಸಿಬ್ಬಂದಿ ವರ್ಗದವರು ಕೂಡ್ಲಿಗಿ ತಾಲೂಕಿನ ಜನತೆಗೆ ಎಲ್ಲಾ ರೀತಿಯ ಅನಾರೋಗ್ಯದಿಂದ ಬರುವಂತಹ ರೋಗಿಗಳಿಗೆ ಉತ್ತಮವಾದಂತಹ ಚಿಕಿತ್ಸೆ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗಬೇಕು ಎನ್ನುವ ಸಾಕಷ್ಟು ಹೋರಾಟಗಳು ಮಾಡಿದರು.

ಆಸ್ಪತ್ರೆಗೆ ಸಂಬಂಧಪಟ್ಟಂತಹ ಅಧಿಕಾರಿಗಳ ವರ್ಗದವರು ನಿರ್ಲಕ್ಷ ತೋರಿರುವುದಕ್ಕೆ ಇಷ್ಟೊಂದು ಸಮಸ್ಯೆಗಳಿಗೆ ಕಾರಣ ಎಂದು ಕೆಲವು ಹೋರಾಟಗಾರರು ಆರೋಪ ವ್ಯಕ್ತಪಡಿಸಿದ್ದಾರೆ .ಆದ್ದರಿಂದ ಸರ್ಕಾರಿ ಆಸ್ಪತ್ರೆ ಆಡಳಿತ ಅಧಿಕಾರಿ ತಮ್ಮ ವ್ಯಾಪ್ತಿಯ ಎಲ್ಲಾ ಸಿಬ್ಬಂದಿ ವರ್ಗದವರನ್ನು ಕಟ್ಟು ನಿಟ್ಟಿನ ಆದೇಶ ಹೊರಡಿಸಿದರೆ ಸೂಕ್ತ ಎಂದು ತಿಳಿಸಿದರು. ಮುಖಂಡರು ತಿಳಿಸುವಾಗೆ ಸಮಯಕ್ಕೆ ಸರಿಯಾಗಿ ಸಿಬ್ಬಂದಿ ವರ್ಗದವರು ಆಸ್ಪತ್ರೆಯಲ್ಲಿರಬೇಕು, ಹಾಗೂ ಆಸ್ಪತ್ರೆಯ ಒಳಗಡೆ ಹಾಗೂ ಹೊರಗಡೆ ಪ್ರತಿದಿನ ಸ್ವಚ್ಛತೆಯಿಂದ ಕೂಡಿರಬೇಕು, ಹಾಗೂ ಕೂಡ್ಲಿಗಿಯ ಹೈವೇ ಪಕ್ಕದಲ್ಲಿ ಇರುವುದರಿಂದ ಯಾವ ಕ್ಷಣದಲ್ಲಿ ಬೇಕಾದರೂ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ದಿನದ ಇಪ್ಪತ್ನಾಲ್ಕು ಗಂಟೆಯೂ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲು ಯಾರಾದರೂ ಡಾಕ್ಟರ್ಸ್ ಹಾಗೂ ಸಿಬ್ಬಂದಿ ವರ್ಗದವರು ಇರಬೇಕು ಎಂದು ಗಂಭೀರ ಆರೋಪವನ್ನು ಹೋರಾಟಗಾರ ಹೆಚ್.ವೀರಣ್ಣ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಮಂಜು ಮಯೂರ ಹಾಗೂ ಎ ಐ ಟಿ ಯು ಸಿ ಮುಖಂಡರಾದ ಹೆಚ್ ವೀರಣ್ಣ ಹಾಗೂ ತಾಲೂಕು ಆಡಳಿತ ಅಧಿಕಾರಿಯದಂತಹ ಡಾಕ್ಟರ್ ಎಸ್. ಪಿ. ಪ್ರದೀಪ್ ಕುಮಾರ್ ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಧರ್ಮನ ಗೌಡ, ಮುಖಂಡರಾದ ಎನ್ ಟಿ ತಮ್ಮಣ್ಣ ,ಮರಳು ಸಿದ್ದಪ್ಪ ,ದಿನಕರ, ನರಸಿಂಗಿರಿ ಸಿ. ಮಾರಪ್ಪ ,ಮಣಿಕಂಠ, ಇನ್ನೂ ಅನೇಕರು ಉಪಸ್ಥಿತಿಯಲ್ಲಿದ್ದರು.
www.Sknewskannada.in
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ