ಪರಿಸರ ಕಾಳಜಿಗಾಗಿ ಸೈಕಲ್ ಜಾಥಾ.
ಇಂಡಿ ಜೂನ್.8

ಇಂಡಿ ಇಲ್ಲಿಯ ಸ್ಥಳೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮತ್ತು ಶ್ರೀ ಶಾಂತೇಶ್ವರ ಪ್ರೌಢಶಾಲೆಯ 1989-90 ರ 10 ನೇ ವರ್ಗದ ಗೆಳೆಯರ ಬಳಗ ಇಂಡಿ ಅವರ ಸಹಯೋಗದಲ್ಲಿ ಇದೇ ರವಿವಾರ, ದಿ.11 ರಂದು,ಬೆಳಿಗ್ಗೆ 7 ಗಂಟೆಗೆ “ವಿಶ್ವ ಪರಿಸರ ದಿನಾಚರಣೆ” ಸಪ್ತಾಹದ ಪ್ರಯುಕ್ತ, ಇಂಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಲಚ್ಯಾಣ ಮಾರ್ಗವಾಗಿ ಪಡನೂರ ಗ್ರಾಮದವರೆಗೆ ಪರಿಸರ ಸ್ನೇಹಿ ಸೈಕಲ್ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.ಜೊತೆಗೆ ಪಡನೂರಿನ ಸರ್ಕಾರಿ ಕನ್ನಡ ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ.ಕೋಟೆಣ್ಣವರ ಮತ್ತು ಕಾರ್ಯದರ್ಶಿ ಷಹಾಜಿ ಪಾಟೀಲ,ರಮೇಶ.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು 6360128107 ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಲಾಗಿದೆ.