ಕೂಲಿ ಕಾರ್ಮಿಕರಿಗೆ ಖಾಲಿ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ಮುಂಭಾಗ ಪ್ರತಿಭಟನೆ ಕೈಗೊಂಡು ಮನವಿ ಅರ್ಪಿಸಿದರು.
ಮಲಪಗುಡಿ ಜೂನ್.8

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮ ಪಂಚಾಯತಿ ಮುಂಭಾಗ ಪ್ರತಿಭಟನೆ ಕೈಗೊಂಡು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ನೇತೃತ್ವದಲ್ಲಿ ಕೂಲಿ ಕಾರ್ಮಿಕರಿಗೆ ಖಾಲಿ ಜಾಗ ಮಂಜೂರು ಮಾಡುವ ಕುರಿತು ಪಿಡಿಓರವರಿಗೆ ಮನವಿ ಸಲ್ಲಿಸಿದರು. ಮಲಪನಗುಡಿ, ಪಂಚಾಯಿತಿಯವರು, ಸರ್ಕಾರಿ ಜಾಗವನ್ನು ಗುರುತಿಸಿ ಹೊಸಪೇಟೆ ತಾಲ್ಲೂಕು ಹೊಸ ಮಲಪನಗುಡಿ ಮತ್ತು ಗಾಳಮ್ಮನ ಗುಡಿ ವ್ಯಾಪ್ತಿಯಲ್ಲಿ ಬರುವ ಖಾಲಿ ಜಾಗೆಗೆ ಕಳೆದ ಎರಡು ವರ್ಷದಿಂದ ಹಳೆ ಮಲಪನಗುಡಿ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ ಹಂಚಲು ಯಾವುದೇ ಕ್ರಮ ತೆಗೆದುಕೊಳ್ಳತ್ತಿಲ್ಲ.

ಕೂಲಿ ಕಾರ್ಮಿಕರು ಮನೆಗೆ ಬಾಡಿಗೆ ಕಟ್ಟಲು ಪರದಾಡುತ್ತಿದ್ದು, ಆದಕಾರಣ ತಾವುಗಳು ಈ ಸಮಸ್ಯೆಗಳನ್ನು ಕೂಲಂಕುಷವಾಗಿ ವಿಚಾರ ಮಾಡಿ, ಆದಷ್ಟು ಬೇಗ ಈ ಸಮಸ್ಯೆಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಸಂಘಟನೆಯ ಮುಖಂಡರು ಕಾರ್ಯದರ್ಶಿಗಳು ಸದಸ್ಯರು ಹಲವಾರು ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.
ತಾಲೂಕು ವರದಿಗಾರ ಮಾಲತೇಶ್.ಶೆಟ್ಟರ್. ಹೊಸಪೇಟೆ.