ಬಲಕುಂದಿಯಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಅದ್ದೂರಿಯಾಗಿ ಜರುಗಿತು.

ಬಲಕುಂದಿ ಫೆಬ್ರುವರಿ.23

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿಯ ಅದ್ಯಕ್ಷರಾಗಿ ಶ್ರೀ ಮಹಾಂತೇಶ ಕುಷ್ಟಗಿ ವಹಿಸಿದ್ದರು.ಮುಖ್ಯ ಅತಿಥಿಯಾಗಿ ರೈತ ಸಂಘದ ಮುಖಂಡರಾದ ಮಲ್ಲಣ್ಣ ತುಂಬದ ಮಾತನಾಡಿದರು ಗ್ರಾಮ ಪಂಚಾಯಿತಿಯ ಸರ್ವಸದಸ್ಯರು , ಅಂಗನವಾಡಿ , ಆಶಾ ಕಾರ್ಯಕರ್ತೆಯರು ಜೈ ಭೀಮ್ ಹಾಗೂ ಮಹಿಳಾ ಸಂಘದವರು ಭಾಗವಹಿಸಿದ್ದರು. ಶಿಕ್ಷಕಿಯರಾದ ಶ್ರೀಮತಿ ಇಂದುಮತಿ ಪುರಾಣಿಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲೆಯ ಪ್ರಭಾರಿ‌ ಮುಖ್ಯ ಗುರುಗಳಾದ ಶ್ರೀ ಶರಣಪ್ಪ ಆವಾರಿಯವರು ಸ್ವಾಗತಿಸಿದರು. ಬಲಕುಂದಿಯ P.D.O ಶ್ರೀ H.Y.ಆವಿನ ಅವರು ವಂದಿಸಿದರು.ಶಿಕ್ಷಕಿಯರಾದ ಶ್ರೀಮತಿ:M.i.ಪಿಟಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಲಕುಂದಿ ಹಾಗೂ ಬಲಕುಂದಿ L.T.ಯ ಶಿಕ್ಷಕ ವೃಂದ ಹಾಗೂ ಮಕ್ಕಳು, ವಡ್ಡರ ಹೊಸೂರು ತಾಂಡಾದ ಶಿಕ್ಷಕ ವೃಂದ ಮಕ್ಕಳು ಹಾಗೂ ಪ್ರೌಢ ಶಾಲೆಯ ಗುರುವೃಂದ ಹಾಗೂ ಮಕ್ಕಳು ಗ್ರಾಮದ ಎಲ್ಲಾ ಗಣ್ಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button