ಮಳೆಯಿಂದ ಸಮಸ್ಯೆಗೊಳಗಾದ ಸಂತ್ರಸ್ತರು ಪುರಸಭೆಯ ಸಹಾಯವಾಣಿಯನ್ನು ಸಂಪರ್ಕಿಸಿ.
ಹುನಗುಂದ ಜುಲೈ.29

ಪಟ್ಟಣದಲ್ಲಿ ಸತತ ೧೦ ರಿಂದ ೧೨ ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆ ಪುರಸಭೆ ವ್ಯಾಪ್ತಿಯ ಸಾರ್ವಜನಿಕರು ಮಳೆ ಅಥವಾ ಪ್ರವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಿಲುಕಿದರೆ ಅಂತವರ ರಕ್ಷಣೆಗೆ ಪುರಸಭೆ ಅಧಿಕಾರಿಗಳು ತಯಾರಾಗಿದ್ದು. ಸಂತ್ರಸ್ತರಿಗೆ ದಿನದ ೨೪ ಗಂಟೆಗಳ ನಿರಂತರ ಸೇವೆಯನ್ನು ಒದಗಿಸಲು ಪುರಸಭೆ ಕಾರ್ಯಾಲಯದ ಸಹಾಯವಾಣಿ ಸಂಖ್ಯೆ: ೯೮೮೦೦೮೪೮೬೪,೬೩೬೧೩೯೩೧೪೯ ಸಂಪರ್ಕಿಸುವಂತೆ ಪುರಸಭೆ ಮುಖ್ಯಾಧಿಕಾರಿ ಸತೀಶ ಚೌಡಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ