“ಅಣ್ಣ ತಂಗಿಯರ ಸಂಬಂಧ”…..

ಅಣ್ಣ ತಂಗಿಯರ ಈ ಬಂಧ
ಎಂದೆಂದಿಗೂ ಮುಗಿಯದ ಸಂಬಂಧ
ಎಂತಹ ಪ್ರೀತಿಯ ಅನುಬಂಧ
ಅಣ್ಣ ತಂಗಿಯರ ಈ ರಕ್ತ ಸಂಬಂಧ
ರಾಖಿಯೊಳಗಿನ ನೂಲು ಎಳೆ ಎಳೆಯಾಗಿ
ಕೂಡಿಯಾಗಿರುವುದು
ಸಹೋದರಿ ರಕ್ಷಣೆಗೆ ಸದಾ ಸಿದ್ದವಾಗಿರುವುದು
ಸುಖ ದುಃಖದಲ್ಲಿ ಒಂದಾಗಿರುವುದು
ಎಂದೂ ಮುಗಿಯದ ಈ ಜೀವ ಸಂಬಂಧ
ಒಗ್ಗಟ್ಟಿನಿಂದ ಕೂಡಿ ಬೆಸೆದ ಬಂಧ
ಪ್ರೀತಿ ವಿಶ್ವಾಸ ನಂಬಿಕೆಯ ಸಂಬಂಧ
ಯಾವಾಗಲೂ ಅಮರ ಅಣ್ಣ ತಂಗಿಯರ
ಸಂಬಂಧ
ಗಟ್ಟಿಯಾದ ಜೀವನ ಸಂಬಂಧ.
*****
ಶ್ರೀ ನಾಗಲಿಂಗೇಶ ಬೆಣ್ಣೂರ
ಉಪನ್ಯಾಸಕರು
ಶ್ರೀ ಪಿ.ಎಸ್.ಎಸ್ ಕಲಾ
ಮಹಾವಿದ್ಯಾಲಯ ಬೇವೂರ