ವಾಲ್ಮೀಕಿ ಜಯಂತೋತ್ಸವದ ಪ್ರಯುಕ್ತ ಅಂತಾರಾಷ್ಟ್ರೀಯ ಮಟ್ಟದ – ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ.
ಕೂಡ್ಲಿಗಿ ಸ.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಶ್ರೀ ವಾಲ್ಮೀಕಿ ಮಹಾ ಸಭಾದ ಕೂಡ್ಲಿಗಿ ತಾಲೂಕ ಅಧ್ಯಕ್ಷರಾದ ಎಸ್. ಸುರೇಶ ಹಾಗೂ ಸಂಘದ ಪದಾಧಿಕಾರಿಗಳು ತಿಳಿಸುವಾಗೆ ನಾಡ ದೊರೆ ರಾಜ ವೀರ ಮದಕರಿ ನಾಯಕ ಯುವ ಬ್ರಿಗ್ರೇಡ್ ಬೆಂಗಳೂರು ಇವರ ವತಿಯಿಂದ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತವಾಗಿ ಅಕ್ಟೋಬರ್ 5 ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸ್ಪರ್ಧೆಯ “ಮದಕರಿ ಕಪ್” ಎಂಬ ಪ್ರಮುಖ ಪ್ರಶಸ್ತಿಯ ಕಪ್ ನೊಂದಿಗೆ ಕರ್ನಾಟಕ ರಾಜ್ಯಾದ್ಯಂತ ಅವೇರ್ನೆಸ್ ಮೂಡಿಸಲು ಹಾಗೂ ಕಾರ್ಯಕ್ರಮದ ಬಿತ್ತಿ ಪತ್ರದ ಪ್ರತಿಯನ್ನು ಅಂಟಿಸುವ ಮೂಲಕ ಜಿಲ್ಲೆ ತಾಲೂಕು ಹಾಗೂ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯದ ಮುಖಂಡರುಗಳು ಪ್ರಪ್ರಥಮ ಬಾರಿಗೆ ಕಬ್ಬಡ್ಡಿಯ ಪಂದ್ಯಾವಳಿಗಳನ್ನು ಆಯೋಜಿಸಿದೆ.

ಕೂಡ್ಲಿಗಿ ತಾಲೂಕಿನ ವಾಲ್ಮೀಕಿ ಮಹಾಸಭಾ ಅಧ್ಯಕ್ಷರು ಹಾಗೂ ವಿವಿಧ ಸಮುದಾಯದ ಪ್ರಮುಖ ಮುಖಂಡರು ಯುವಕರುಗಳು ಕಬ್ಬಡ್ಡಿ ಪಂದ್ಯವಾಳಿ ಯಶಶ್ವಿಯಾಗಲಿ ಎಂದು ಹಾರೈಸುತ್ತ ಧನ್ಯವಾದಗಳು ತಿಳಿಸಿದರು. ಬಿಜೆಪಿ ಮುಖಂಡರು ಭೀಮೇಶ್, ಹಾಗೆ ಬಿಜೆಪಿ ಮುಖಂಡರು ಗುಳುಗಿ ವೀರೇಂದ್ರ, ಹಾಗೂ ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತ ಸಂಘದ ಹಾಗೂ ಆಟೋ ಯೂನಿಯನ್ ಸಂಘದ ಅಧ್ಯಕ್ಷ ಮಯೂರ ಮಂಜುನಾಥ್,ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಡಿ.ಎಸ್.ಎಸ್ ಮುಖಂಡ ಎಸ್, ದುರುಗೇಶ್. ಬಿಜೆಪಿ ಮುಖಂಡ ಮಂಜುನಾಥ, ಬಿ.ಜೆ ಪಿ ತಾಲೂಕ ಯುವ ಮೋರ್ಚಾದ ಅಧ್ಯಕ್ಷರು ಅಜಯ್, ಬಿಜೆಪಿ ತಾಲೂಕು ಎಸ್ ಟಿ ಮೋರ್ಚಾದ ಉಪಾಧ್ಯಕ್ಷ ಗುರಿಕಾರ ರಾಘವೇಂದ್ರ, ಹಾಗೂ ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಕೆ ಕೆ ಹಟ್ಟಿ ಹನುಮಂತಪ್ಪ, ಇನ್ನೂ ಇತರರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ