ದೂರು ಕೊಟ್ಟಿದ್ದು ಆಯಿತು, ಪರಿಶೀಲನೆ ಮಾಡಿದ್ದು ಆಯಿತು, ಇನ್ನೇನಿದ್ದರೂ ಸಾರ್ವಜನಿಕರಿಗೆ (ಆಮ್ ಆದ್ಮಿ ಪಕ್ಷದ ಸಿಂಬಲ್ ಕೈಗೆತ್ತಿ ಕೊಳ್ಳುವುದು) ಬಿಟ್ಟಿದ್ದು.
ಬಳ್ಳಾರಿ ಸ.13

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕದ ಪರಿವೀಕ್ಷಣೆ ನಡೆಸಿದ ಜಿ.ಪಂ ಸಿ.ಇ.ಓ ಹೊಸಪೇಟೆ (ವಿಜಯನಗರ) ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಶಾ ಅವರು ಸೆಪ್ಟೆಂಬರ್ 12 ರಂದು ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹತ್ತಿರದ ಪಾವಗಡ ಕುಡಿಯುವ ನೀರಿನ ಯೋಜನೆ ಘಟಕಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ನೀರಿನ ಶುದ್ಧೀಕರಣ ಘಟಕಗಳಲ್ಲಿ ಕ್ಯಾಸ್ಕೇಡ್ ಏರೇಟರ್, ಸ್ಟಿಲ್ಲಿಂಗ್ ಬೇಸಿನ್, ಫ್ಲಾಶ್ ಮಿಕ್ಸರ್ಸ್, ಕೆಮಿಕಲ್ ಹೌಸ್, ಕ್ಲೋರೀನ್ ಹೌಸ್, ಫಿಲ್ಟರ್ ಹೌಸ್ ಸೇರಿದಂತೆ ವಿವಿಧ ಉಪ ಘಟಕಗಳನ್ನು ಖುದ್ದಾಗಿ ವೀಕ್ಷಿಸಿ ತಾಂತ್ರಿಕ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಘಟಕಗಳ ವೀಕ್ಷಣೆಯ ನಂತರ ಘಟಕದ ತಾಂತ್ರಿಕ ಸಿಬ್ಬಂದಿಯೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಇದೆ ವೇಳೆ ಸಿ.ಇ.ಓ ಅವರು ಮಾತನಾಡಿ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ 215, ಹೊಸಪೇಟೆ ತಾಲೂಕಿನ 15 ಹಾಗು ಚಿತ್ರದುರ್ಗ ಜಿಲ್ಲೆಯ 908 ಸೇರಿ ಒಟ್ಟು 1138 ಜನ ವಸತಿ ಪ್ರದೇಶಗಳಿಗೆ ನೀರು ಶುದ್ಧೀಕರಿಸಿ ಪೂರೈಸುವ ಯೋಜನೆ ಇದಾಗಿದೆ. ಅಧಿಕಾರಿಗಳು ಘಟಕದ ಮಹತ್ವ ಅರಿತು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ ಟ್ರಯಲ್ ರನ್ ಪ್ರಾರಂಭಿಸಿದ್ದು, ಕೆಲ ಭಾಗಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಿ ಸಾಧ್ಯವಾದಷ್ಟು ಬೇಗನೆ ಪೂರ್ಣ ಗೊಳಿಸುವುದಾಗಿ ಯೋಜನೆಯ ನಿರ್ಮಾಣ ಕಂಪನಿಯ ಘಟಕದ ವ್ಯವಸ್ಥಾಪಕರಾದ ಕೋಟೇಶ್ವರರಾವ್ ಅವರು ವಿವರಿಸಿದರು. ಕಾಮಗಾರಿ ವೀಕ್ಷಣೆ- ಬಹುಗ್ರಾಮ ಕುಡಿಯುವ ನೀರಿನ ಘಟಕದ ಪರಿಶೀಲನೆಯ ನಂತರ ಕೊಟ್ಟೂರು ತಾಲೂಕಿನ ಜಾಗಟಗೆರೆ ಗ್ರಾಮದಲ್ಲಿ ಈಗಾಗಲೇ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಲಭ್ಯವಾಗುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಯ ವೀಕ್ಷಣೆ ಮಾಡಿದರು. ಇದೆ ವೇಳೆ ನೀರು ಸರಬರಾಜಿನ ಬಗ್ಗೆ ಸ್ವತಃ ಪರಿಶೀಲಿಸಿದರು. ನಂತರ ಹೊಸಪೇಟೆ ತಾಲೂಕಿನ ನಾಗಪ್ಪ ಕ್ಯಾಂಪ್‌ನಲ್ಲಿ ಸಹ ಜೆ.ಜೆ.ಎಂ ಕಾಮಗಾರಿ ವೀಕ್ಷಿಸಿದರು. ಕೇತ್ರ ಭೇಟಿಯ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ದೀಪಾ, ಕಿರಿಯ ಅಭಿಯಂತರಾದ ನರೇಶ್ ಮತ್ತು ಶ್ರೀನಿವಾಸ ರಂಗ ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಎಚ್.ಎಂ. ರಾಜಕುಮಾರ್.ಕಂಪ್ಲಿ.ಬಳ್ಳಾರಿ.