ಸದ್ದರ್ಮ ಹಿರಿಯ ನಾಗರಿಕ ರಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ.
ಉಜ್ಜಿನಿ ಸ.15

ಕೊಟ್ಟೂರು ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಸುತ್ತ ಮುತ್ತಲ ಗ್ರಾಮದ ಶಾಲೆಗಳಿಂದ ಉತ್ತಮ ಶಿಕ್ಷಕರನ್ನ ಆಯ್ಕೆ ಮಾಡಿ ಕೊಂಡು ಪ್ರಶಸ್ತಿ ಕೊಡುತ್ತಾ ಬಂದಿದ್ದು ಈ ವರ್ಷವೂ ಕೂಡ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದ್ಧರ್ಮ ಹಿರಿಯ ನಾಗರಿಕ ಸಂಘದ ಗೌರವಾಧ್ಯಕ್ಷರು ಎಂ.ಎಂ ಚೆನ್ನವೀರಸ್ವಾಮಿ ವಹಿಸಿದ್ದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಭೋಜಪ್ಪ ಇವರು ಮಾತನಾಡಿ ಶಿಕ್ಷಕ ವೃತ್ತಿ ಹೇಗೆ ಶ್ರೇಷ್ಠವಾದದ್ದು ಎಂಬುದನ್ನು ತಿಳಿಸುತ್ತಾ ನಮ್ಮ ದೇಶದ ಪ್ರಥಮ ಪ್ರಜೆಯನ್ನು ನಿರ್ಮಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅವರು ಶಿಕ್ಷಕರು ಎಂಬುದನ್ನು ನಾವ್ಯಾರೂ ಮರೆಯಬಾರದು ಎಂದು ಮಾರ್ವಿಕವಾಗಿ ತಿಳಿಸುತ್ತಿದ್ದರು. ಈ ಇಳಿಯ ವಯಸ್ಸಿನಲ್ಲಿಯೂ ಹಿರಿಯ ನಾಗರಿಕ ಸಂಘದವರು ಇಂತಹ ಕಾರ್ಯಕ್ರಮದ ಮೂಲಕ ಶಿಕ್ಷಕರ ವರ್ಗಕ್ಕೆ ಮಾರ್ಗ ದರ್ಶಕರಾಗಿದ್ದಾರೆ ಎಂದು ತಿಳಿಸಿದರು. ಇನ್ನೊಬ್ಬ ಉಪನ್ಯಾಸಕರಾದ ಟಿ.ಐ, ಕೆ. ಶ್ರೀಧರ್ ಶೆಟ್ರು, ಮಾತನಾಡಿ ಶ್ರೀ ರಾಧಾಕೃಷ್ಣನ್ ರವರು ತಮ್ಮ ಜೀವನದಲ್ಲಿ ಹೇಗೆ ಶಿಕ್ಷಕರ ವೃತ್ತಿಯಿಂದ ಭಾರತದ ರಾಷ್ಟ್ರಪತಿಯಾದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಜ್ಜಿನಿ ಗ್ರಾಮದ ಎಸ್ ಮಲ್ಲಿಕಾರ್ಜುನ್ ಮಾಜಿ ಪ್ರಧಾನರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಶಿಕ್ಷಕರ ವೃತ್ತಿಯ ಶ್ರೇಷ್ಠತೆಯನ್ನು ತಿಳಿಸುತ್ತಾ ಇಂತಹ ಒಂದು ಉತ್ತಮ ಕಾರ್ಯಕ್ಕೆ ನಾನು ಮುಂದಿನ ವರ್ಷದಿಂದ ಪ್ರತಿ ವರ್ಷ ಹತ್ತು ಸಾವಿರ ರೂ.ಗಳ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಶಿಕ್ಷಕರ ಜೊತೆಯಲ್ಲಿ ಶ್ರೀ ಮರಳು ಸಿದ್ದೇಶ್ವರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಕೆ ಕೊಟ್ರೇಶ್ ಶ್ರೀಕಂಠಪ್ಪ ಅವರನ್ನು ಕೂಡ ಸನ್ಮಾನಿಸಿದ್ದು ವಿಶೇಷವಾಗಿತ್ತು. ರೈತರು ಮತ್ತು ಶಿಕ್ಷಕರು ಬಾಂಧವ್ಯ ಹೇಗಿರಬೇಕು ಎಂಬ ಸಂದೇಶವನ್ನು ರವಾನಿಸಿದರು.ಕಾರ್ಯಕ್ರಮದ ನಿರೂಪಣೆ ಎನ್.ಎಂ ಕೊಟ್ರಯ್ಯ ಸ್ವಾಗತ ಶ್ರೀಯುತ ಜಂಬಣ್ಣ ಉಜ್ಜನಿ ಗ್ರಾಮದ ಹಿರಿಯರು ಶ್ರೀ ಮರಳಿಸಿದ್ದೇಶ್ವರ ರೈತ ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಎಸ್.ವೀರಣ್ಣ ನಿ.ಪೊಲೀಸ್ ನೆರವೇರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು