ಅಭಿಮಾನಿ ಗಳೊಂದಿಗೆ ಚಲನ ಚಿತ್ರ ವೀಕ್ಷಿಸಿದ ಡಾ, ಕೆ. ಎಮ್. ಸಂದೇಶ.
ರೋಣ ಸ.16

ನಗರದ ರೇಣುಕಾ ಚಲನ ಚಿತ್ರ ಮಂದಿರಕ್ಕೆ ಆಗಮಿಸಿದ “ದ ರೂಲರ್ಸ್” ಚಲನ ಚಿತ್ರದ ನಟ ಸಂಭಾಷಣಕಾರ ಡಾಕ್ಟರ್, ಕೆ. ಎಮ್. ಸಂದೇಶ್ ಅವರು ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ “ದ ರೂಲರ್ಸ್” ಚಲನ ಚಿತ್ರ ವೀಕ್ಷಣೆ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಡಾಕ್ಟರ್, ಕೆ. ಎಂ. ಸಂದೇಶ್ ಅವರು “ದ ರೂಲರ್ಸ್” ಚಲನ ಚಿತ್ರವು ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ಆಗುವುದ ರೊಂದಿಗೆ ಪ್ರೇಕ್ಷಕರನ್ನು ಅಪಾರ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿರುವುದನ್ನು ನೋಡಿದರೆ ಸಂತಸ ಆಗುತ್ತದೆ. 2017 ರಲ್ಲಿ ಕೋಲಾರ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಆಧಾರಿತ ಚಲನ ಚಿತ್ರ ಇದಾಗಿದ್ದು. ನೋಡುಗರ ಮನ ಗೆದ್ದಿದೆ. ಪ್ರತಿಯೊಂದು ಚಲನ ಚಿತ್ರ ಮಂದಿರದಲ್ಲಿ ನೂರು ದಿನ ಪ್ರದರ್ಶನ ಗೊಳ್ಳುವ ವಿಶ್ವಾಸ ನನಗೆ ಇದೆ. ಈ ಆತ್ಮ ವಿಶ್ವಾಸವನ್ನು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಮೂಡಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸೋಮು ನಾಗರಾಜ್. ವೀರಪ್ಪ ತಗ್ಗಿನಮನಿ. ಮಾದೇವಪ್ಪ ತಗ್ಗಿನಮನಿ. ಅಭಿಷೇಕ್ ಕೊಪ್ಪದ್. ಪ್ರಕಾಶ್ ಜಗಳೂರು. ದುರ್ಗಪ್ಪ ಮಾದರ. ಬಾಳಪ್ಪ ಬುರುಡಿ. ಅನೇಕರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ