ನಿಪ್ಪೊನ್ ಪೇಂಟ್ ಎನ್ ಸ್ಪೈರ್ ಮಳಿಗೆ ಶುಭಾರಂಭ, ಉದ್ಘಾಟನೆ ಮಾಡಿದ ಪಂ.ಪ ಅಧ್ಯಕ್ಷರು – ಕಾವಲಿ ಶಿವಪ್ಪ ನಾಯಕ್.
ಕೂಡ್ಲಿಗಿ ಸ.16

ನಿಪ್ಪೊನ್ ಪೇಂಟ್ ಕಂಪೆನಿಯು 143 ವರ್ಷಗಳ ಇತಿಹಾಸ ವಿರುವ ಪೇಂಟ್ ಏಷ್ಯದಲ್ಲಿ ನಂಬರ್,1 ನಿಪ್ಪೋನ್ ಪೇಂಟ್ ಹೆಸರು ಹೊಂದಿದೆ. ಎಂದು ವಿನಯ್ ಪಡಸಲಾಗಿ ಸೇಲ್ಸ್ ಡೈರೆಕ್ಟರ್ ಕರ್ನಾಟಕ ರಾಜ್ಯ ಇವರು ತಿಳಿಸಿದ್ದಾರೆ. ನಿಪ್ಪೋನ್ ಪೇಂಟ್ ಎನ್ಪೈರ್ ಮಳಿಗೆಯು ಕೂಡ್ಲಿಯ ಬೆಂಗಳೂರು ರಸ್ತೆಯಲ್ಲಿ ನೂತನವಾಗಿ ಅಂಗಡಿ ಪ್ರಾರಂಭ ವಾಗಿದ್ದು. ಈ ಉದ್ಘಾಟನೆಯನ್ನು ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಕಾವಲ್ಲಿ ಶಿವಪ್ಪ ನಾಯಕ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಸೈಯದ್ ಶುಕೂರು, ವಿನಯ್ ಪಡಸಲಗಿ ಸೇಲ್ಸ್ ಡೈರೆಕ್ಟರ್ ಕರ್ನಾಟಕ ರಾಜ್ಯ, ಹಾಗೂ ವಿಜಯ್ ಮಾಂತೇಶ್ ಕ್ಲಸ್ಟರ್ ಇಂಚಾರ್ಜ್ ಬಳ್ಳಾರಿ, ಹಾಗೂ ಸಂತೋಷ್ ಕಳಸ ಡಿ.ಎಸ್.ಎಂ ದಾವಣಗೆರೆ ಡಿಪೋ, ಹಾಗೂ ರೆಹಮಾನ್ ಸಮಾಜ ಸೇವಕರು ಉದ್ಘಾಟನೆ ಮಾಡಿ ಈ ಸಂದರ್ಭದಲ್ಲಿ ಪೇಂಟ್ ಬಗ್ಗೆ ತಮ್ಮ ಅನಿಸಿಕೆಗಳನ್ನು ಕೂಡ್ಲಿಗಿ ತಾಲೂಕಿನ ಗ್ರಾಹಕರ ಪರವಾಗಿ ತಿಳಿಸಿದರು.

ಹಾಗೆ ಅಂಗಡಿ ಮಾಲೀಕನಾದ ಸುಲೇಮಾನ್ ರವರು ತಿಳಿಸುವ ಹಾಗೆ ಗ್ರಾಹಕರಿಗೆ ತಮ್ಮ ಮನೆಗೆ ಬೇಕಾಗುವ ಇಂಟೀರಿಯರ್, ಎಕ್ಸ್ ಟೆರಿಯರ್, ವಾಟರ್ ಫ್ರೂಪಿಂಗ್ ಇನ್ನಿತರ ಸೇವೆಗಳನ್ನು ಕೂಡ್ಲಿಗಿ ಪಟ್ಟಣದಲ್ಲಿರುವ ನಮ್ಮ ಅಂಗಡಿಗೆ ಒಂದು ಬಾರಿ ಭೇಟಿ ಕೊಟ್ಟು ಪಡೆಯಬಹುದು. ಕರ್ನಾಟಕದಾದ್ಯಂತ 40 ಕ್ಕೂ ಹೆಚ್ಚು ನಿಪ್ಪೋನ್ ಪೇಂಟ್ ಎನ್ಪೈರ್ ಮಳಿಗೆಗಳನ್ನು ಹೊಂದಿದೆ.

ವಿಶೇಷ ವೆಂದರೆ ಬಳ್ಳಾರಿ ಭಾಗದಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ಎರಡನೇ ನಿಪ್ಪೋನ್ ಎನ್ಸ್ಪಿಯರ್ ಮಳಿಗೆ ಪೇಂಟ್ ಹೊಂದಿರುವ ಸಂತೋಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರವೀಣ್ ಸೇಲ್ಸ್ ಆಫೀಸರ್, ಮಹಾಂತೇಶ್ ಮಾರ್ಕೆಟಿಂಗ್, ಫೆಫಿ ಉಲ್ಲಾ ಇಂಜಿನಿಯರ್ ಜಿಲಾನ್ ಇಂಜಿನಿಯರ್ ಪ್ರಶಾಂತ್, ನೂರಾರು ಪೇಂಟ್ ಕೆಲಸ ಮಾಡುವ ಕಾರ್ಮಿಕರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ