🚨ಬ್ರೇಕಿಂಗ್ ನ್ಯೂಸ್ 🚨 ಬ್ರೇಕಿಂಗ್ ನ್ಯೂಸ್ 🚨ಧರ್ಮ ಪ್ರಾಂತ್ಯದ ನೂತನ ಬಿಷಪ್ ಅತೀ ವಂ| ಡಾ, ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರಿಗೆ ಬ್ಲಾಕ್ ಕಾಂಗ್ರೆಸ್ ನಿಂದ – ಭಾವುಕ ಅಭಿನಂದನೆ..!
ಉಡುಪಿ ಮೇ.21

ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅತ್ಯಂತ ಯಶಸ್ವಿಯಾಗಿ ಅಧಿಕಾರ ಸ್ವೀಕರಿಸಿರುವ ಅತೀ ವಂದನೀಯ ಡಾ, ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಆತ್ಮೀಯವಾಗಿ ಭೇಟಿಯಾಗಿ, ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.
ಮೇ 20 ರ ಬುಧವಾರ ದಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ “ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ನಾಯಕರ ನಿಯೋಗವು ಧರ್ಮಾಧ್ಯಕ್ಷರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ನೂತನ ಬಿಷಪ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ಸಮಾಜದ ಪರವಾಗಿ ಆದರದ ಶುಭ ಹಾರೈಕೆಗಳನ್ನು ಸಲ್ಲಿಸಲಾಯಿತು.
🌟 ಬಿಷಪ್‌ರವರ ಸೇವಾ ಜೀವನ ಸಮಾಜಕ್ಕೆ ಬೆಳಕಾಗಲಿ..!
ನೂತನ ಬಿಷಪ್ ರವರ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಜೀವನವು ಇಡೀ ಸಮಾಜಕ್ಕೆ ದಾರಿ ದೀಪವಾಗಲಿ ಮತ್ತು ಪ್ರತಿಯೊಬ್ಬರಿಗೂ ಪ್ರೇರಣೆ ಯಾಗಲಿ ಎಂದು ಬ್ಲಾಕ್ ಕಾಂಗ್ರೆಸ್ ನಿಯೋಗವು ಈ ಸಂದರ್ಭದಲ್ಲಿ ಆಶಿಸಿತು.

💬 ಮಾನವೀಯ ಮೌಲ್ಯಗಳನ್ನು ಬೆಳಗಿಸೋಣ:-
ಬಿಷಪ್ ಕರೆ ಕಾಂಗ್ರೆಸ್ ನಾಯಕರ ಪ್ರೀತಿ ಹಾಗೂ ಗೌರವದ ಅಭಿನಂದನೆಯನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸಿ ಮಾತನಾಡಿದ ನೂತನ ಧರ್ಮಾಧ್ಯಕ್ಷರಾದ ಡಾ, ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರು “ನನ್ನ ಮೇಲೆ ತೋರಿರುವ ಈ ಪ್ರೀತಿ ಮತ್ತು ಗೌರವಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ. ಎಲ್ಲರ ಮೇಲೂ ದೇವರ ಆಶೀರ್ವಾದ ಸದಾ ಇರಲಿ. ಈ ಜಗತ್ತಿನಲ್ಲಿ ಮಾನವೀಯ ಧರ್ಮ ಎನ್ನುವುದು ಎಲ್ಲಕ್ಕಿಂತಲೂ ಶ್ರೇಷ್ಠವಾದುದು. ನಾವೆಲ್ಲರೂ ಜಾತಿ-ಮತ ಬೇಧ ಮರೆತು ಪರಸ್ಪರ ಶಾಂತಿ, ಸೌಹಾರ್ದತೆ ಮತ್ತು ಸಹ ಬಾಳ್ವೆಯಿಂದ ಬದುಕ ಬೇಕು. ಸಮಾಜದಲ್ಲಿರುವ ಶೋಷಿತರಿಗೆ ಹಾಗೂ ಅಶಕ್ತರಿಗೆ ಕೈಲಾದ ಸಹಾಯ ಮಾಡುವ ಮೂಲಕ ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ಜಗತ್ತಿನಲ್ಲಿ ಬೆಳಗಿಸಬೇಕಾಗಿದೆ,” ಎಂದು ಮಾರ್ಮಿಕವಾಗಿ ನುಡಿದರು.

👥 ಗಣ್ಯರ ಉಪಸ್ಥಿತಿ:-
ಈ ಅಭಿನಂದನಾ ಸಂದರ್ಭದಲ್ಲಿ ಉಡುಪಿಯ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಮುಖಂಡರ ದಂಡೇ ಉಪಸ್ಥಿತರಿದ್ದರು.

ನಗರ ಸಭಾ ಸದಸ್ಯರು/ಮಾಜಿ ಸದಸ್ಯರು:-
ವಿಜಯ್ ಪೂಜಾರಿ, ಪ್ರಕಾಶ್ ಅಂದ್ರಾದೆ, ಸಂಧ್ಯಾ ತಿಲಕ್‌ರಾಜ್.

ಪ್ರಮುಖ ನಾಯಕರು:-
ಮ್ಯಾಕ್ಸಿಮ್ ಡಿ’ಸೋಜಾ, ಶಶಿರಾಜ್ ಕುಂದರ್, ಸುಕೇಶ್ ಕುಂದರ್, ಹೇಮಲತಾ ಹಿಲಾರಿ ಜತ್ತನ್ನ, ಗಣೇಶ್ ನೆರ್ಗಿ, ಲತಾ ಆನಂದ್ ಶೇರಿಗಾರ್.

ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಮುಖಂಡರು:-
ಚಂದ್ರಮೋಹನ್, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಜಯವೀರ್ ಫೆಡ್ರಿಕ್ಸ್, ಶರತ್ ಶೆಟ್ಟಿ, ಮನೋಜ್ ಕರ್ಕೇರ, ವಿಲ್ಸನ್ ಸಿಕ್ವೇರಾ, ವನಿತಾ ಫೆರ್ನಾಂಡಿಸ್, ರಮೇಶ್ ಪಾಲ್, ಪ್ರೇಮಲತಾ ಸೋನ್ಸ್, ಜೋಸೆಫ್ ಪಿಂಟೋ, ಅನಿಲ್ ಗೊನ್ಸಾಲ್ವಿಸ್, ಲ್ಯಾನ್ಸಿ ಡಿ’ಸೋಜಾ, ದಯಾನಂದ್ ಡಿ ಕಿದಿಯೂರು, ವಿವಾನ್ ಫೆರ್ನಾಂಡಿಸ್, ಐರಿನ್ ಮೆನೆಜಸ್, ರಿಚಾರ್ಡ್ ಡಿ’ಸಿಲ್ವಾ, ರೋಸ್ಟನ್ ಡಿ’ಸಿಲ್ವಾ, ಪ್ರವೀಣ್ ಮಸ್ಕರೇನಸ್, ಜೇಮ್ಸ್ ಡೇನಿಸ್ ಡಿ’ಸೋಜಾ, ಸಾಯಿರಾಜ್ ಕಿದಿಯೂರು, ಸುಧಾಕರ್ ಪೂಜಾರಿ, ಅರುಣ್ ಡಿ’ಸೋಜಾ, ಸಂಜಯ್ ಆಚಾರ್ಯ, ಸುದೇಶ್ ಭಂಡಾರಿ, ಕಿರಣ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
🎤 ವರದಿ:ಆರತಿ.ಗಿಳಿಯಾರು.ಉಡುಪಿ

