ಅನಧಿಕೃತ ಶಾಲೆ ತೆರುವಿಗೆ ಹಾಗೂ ದೇವಸ್ಥಾನದ ಕಾಂಪೌಂಡ್ – ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ.

ತರೀಕೆರೆ ಮೇ.21

ತಾಲೂಕಿನ ಅಮೃತಪುರ ಹೋಬಳಿ ನೇರಲಕೆರೆ ಗ್ರಾಮದ ಸರ್ವೆ ನಂಬರ್ 272 ರ ಸರ್ಕಾರಿ ಜಾಗದಲ್ಲಿ ನವೋದಯ ಪಬ್ಲಿಕ್ ಶಾಲೆ ನಡೆಸುತ್ತಿದ್ದು ಮುಂದೆ ಮಕ್ಕಳ ಭವಿಷ್ಯ ದಿಂದ ಶಾಲೆಯನ್ನು ತೆರವು ಗೊಳಿಸಬೇಕು ಎಂದು ನೇರಲಕೆರೆ ಗ್ರಾಮಸ್ಥರು ಹಾಗೂ ಎನ್ ಎಂ ಪ್ರಶಾಂತ್ ರವರು ಇಂದು ತರೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಉಪ ವಿಭಾಗ ಅಧಿಕಾರಿಗಳು ದಿನಾಂಕ 05-05-2026 ರ ಪತ್ರದಂತೆ ಶಾಲೆಯನ್ನು ತೆರೆವು ಗೊಳಿಸಲು ತಿಳಿಸಿರುತ್ತಾರೆಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಚಿಕ್ಕಮಗಳೂರು ರವರು ದಿನಾಂಕ:-15-05-2026 ಪತ್ರದಲ್ಲಿ ಕರ್ನಾಟಕ ಶಿಕ್ಷಣ ಕಾಯಿದೆ 1983 ರ ಸೆಕ್ಷನ್ 39, 53, 57 ಮತ್ತು 60 ರಡಿ ಶಾಲಾ ಆಡಳಿತ ಮಂಡಳಿಗೆ ನೋಟಿಸು ನೀಡಿದ್ದು ಏಳು ದಿನಗಳೊಳಗೆ ಸೂಕ್ತ ದಾಖಲೆಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕಚೇರಿಗೆ ವಿವರಣೆ ಸಲ್ಲಿಸಲು ತಿಳಿಸಿದೆ ತಪ್ಪಿದಲ್ಲಿ ಕರ್ನಾಟಕ ಶಿಕ್ಷಣ ಕಾಯಿದೆ 1983 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.

ಆದರೂ ಶಾಲೆಯ ಆಡಳಿತ ಮಂಡಳಿ ಶಾಲಾ ದಾಖಲಾತಿ ಪ್ರಾರಂಭಿಸಿದೆ ಅನಧಿಕೃತ ಶಾಲೆ ತೆರುವು ಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಶ್ರೀ ಮಲ್ಲೇಶ್ವರ ಸ್ವಾಮಿ ಹಾಗೂ ರಂಗನಾಥ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರಾದ ಪರಮೇಶ್ವರಪ್ಪ ಮಾತನಾಡಿ ರಾಜ್ಯದಲ್ಲಿ ಸುಮಾರು 3800 ಸಿ ಕೆಟಗರಿ ದೇವಸ್ಥಾನಗಳು ಮುಜುರಾಯಿ ಇಲಾಖೆಯಲ್ಲಿ ನೋಂದಾಣಿ ಯಾಗಿದೆ ಎಲ್ಲಾ ದೇವಸ್ಥಾನಗಳು ಗ್ರಾಮ ಠಾಣಾ ಜಾಗದಲ್ಲಿ ಇರುತ್ತವೆ.

ಸುಮಾರು 300 ವರ್ಷಗಳ ಹಳೆಯ ದೇವಸ್ಥಾನ ನೇರಳೆಕೆರೆ ಗ್ರಾಮದ ಯೋಗ ನರಸಿಂಹ ಸ್ವಾಮಿ ದೇವಸ್ಥಾನವಾಗಿದೆ, ಈ ದೇವಸ್ಥಾನವನ್ನು ಗ್ರಾಮಸ್ಥರು ಸುಮಾರು 2.5 ಕೋಟಿ ರೂಗಳ ದೇನಿಗೆಯನ್ನು ಸಂಗ್ರಹಿಸಿ ಜೀರ್ಣೋದ್ಧಾರ ಮಾಡಲಾಗಿದೆ.

ಆದರೆ ನಾಲ್ಕು ಮನೆಯವರು ದೇವಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ತೊಂದರೆ ಕೊಡುತ್ತಿದ್ದಾರೆ 1940 ರಲ್ಲಿ ದೇವಸ್ಥಾನದ ಚೆಕ್ಕುಬಂದಿಯನ್ನು ಸಹ ನಮೂದಿಸಲಾಗಿದ್ದು 1993ರಲ್ಲಿ ರಂಗನಾಥ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು,ಈ ದೇವಸ್ಥಾನದ ವಿಸ್ತೀರ್ಣ 100’×80′ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಕಂದಾಯ ಇಲಾಖೆ, ಜನಪ್ರತಿನಿಧಿಗಳು ತಾಲೂಕು ಆಡಳಿತ ದೇವಸ್ಥಾನದ ಕಾಂಪೌಂಡ್ ನಿರ್ಮಾಣ ಮಾಡಲು ಬೆಂಬಲಿಸಬೇಕು ಎಂದು ವಿ ಎಸ್ ಎಸ್ ಎನ್ ಉಪಾಧ್ಯಕ್ಷರಾದ ಮಹೇಶ್ ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ಯತೀಶ್ ಕುಮಾರ್ ತಿಳಿಸಿರುತ್ತಾರೆ.

ಪತ್ರಿಕಾ ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆಂಚಪ್ಪ, ಚೇತನ್, ಕಿರಣ್,ಪ್ರದೀಪ್, ತಿಪ್ಪೇಶ್,ಗಿರೀಶ್,ರಮೇಶ್, ಎಂಪಿ ಕುಮಾರಣ್ಣ, ಮಂಜಪ್ಪ,ಮುಂತಾದವರು ಉಪಸಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button