ಆಧ್ಯಾತ್ಮಿಕ ಸಾಧನೆಗಳಿಗೆ ಅಧಿಕ ಮಾಸ ಪ್ರಶಸ್ತ ಕಾಲ – ಶ್ರೀಮತಿ ಪ್ರೇಮಲೀಲಾ.ರಾಮಣ್ಣ.

ಚಳ್ಳಕೆರೆ ಮೇ.21

ಅಧಿಕ ಮಾಸವು ಶ್ರೀಕೃಷ್ಣನಿಗೆ ಪ್ರಿಯವಾದ ಮಾಸವಾಗಿದ್ದು ಇದು 33 ದಿನಗಳ ಕಾಲ ಇದ್ದು ಈ ಮಾಸದಲ್ಲಿ ಮಾಡುವ ಆಧ್ಯಾತ್ಮಿಕ ಕಾರ್ಯಗಳಿಗೆ ಮತ್ತು ಸಾಧನೆಗಳಿಗೆ ಅಧಿಕ ಫಲ ಸಿಗುತ್ತದೆ ಎಂದು ಚಳ್ಳಕೆರೆಯ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ ತಿಳಿಸಿದರು.

ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅವರಿಂದ ಶ್ರೀಕೃಷ್ಣನ ಭಜನೆ

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಅಧಿಕ ಮಾಸದ ವಿಶೇಷತೆಗಳ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಅಧಿಕ ಮಾಸದಲ್ಲಿ ಮಾಡುವ ಸತ್ಸಂಗ,ಭಜನೆ, ಜಪ, ಧ್ಯಾನ, ಭಗವದ್ಗೀತೆ, ಭಾಗವತ, ಶ್ರೀವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಅಧಿಕವಾದ ಫಲ ಸಿಗುತ್ತದೆ. ಈ ಸಂದರ್ಭದಲ್ಲಿ 33 ಭಜನೆಗಳ ಗಾಯನ, ವಿವಿಧ ರೀತಿಯ ದಾನಗಳಿಂದ ಮಾನವ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.

ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅವರಿಂದ ಅಧಿಕ ಮಾಸದ ವಿಶೇಷತೆಗಳ ಉಪನ್ಯಾಸ..

ಸತ್ಸಂಗದಲ್ಲಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್, ನಾಗರತ್ನಮ್ಮ, ಪ್ರಮೀಳಾ, ಮಾಕಂಸ್ ಲಕ್ಷ್ಮೀ, ನೇತ್ರಾ, ಯತೀಶ್ ಎಂ ಸಿದ್ದಾಪುರ, ಸುನೀತಾ,ಪ್ರೇಮಾ, ಅನುಸೂಯ, ರಾಘವೇಂದ್ರ, ಸರಸ್ವತಿ, ಸೌಮ್ಯ,ಶೋಭಾ, ಗೀತಾ ಪ್ರಕಾಶ್ ಉಪಸ್ಥಿತರಿದ್ದರು.

ವರದಿ:ಯತೀಶ್.ಎಂ.ಸಿದ್ದಾಪುರ,ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button