ಶ್ರೀ ಟಿ.ಟಿ ಹರೀಶ್ ರವರಿಗೆ ರಾಜ್ಯ ಮಟ್ಟದ ಉತ್ತಮ ಸಮಾಜ ಸೇವಾರತ್ನ ಪ್ರಶಸ್ತಿ ಪ್ರಧಾನ.
ಚಳ್ಳಕೆರೆ ಸ.18

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ತಿಮ್ಮಪ್ಪಯ್ಯನಹಳ್ಳಿಯ ಯುವ ಬರಹಗಾರರು ಹಾಗೂ ಪತ್ರಿಕಾ ವರದಿಗಾರರು ಆದ ಶ್ರೀಯುತ ಟಿ. ಟಿ ಹರೀಶ್ ರವರು ಸಲ್ಲಿಸಿದ ನಮ್ಮ ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿ ಸಾಮಾಜಿಕ ಹಾಗೂ ಪತ್ರಿಕೋದ್ಯಮ ಸೇವೆಗಾಗಿ ಹಾಗೂ ಇವರ ನಿಸ್ವಾರ್ಥ ಸೇವೆ ಬಹುಮುಖ ಪ್ರತಿಭೆಯನ್ನು ಗುರುತಿಸಿ ಮಕ್ಕಳ ಸಾಹಿತ್ಯ ಪರಿಷತ್, ಬೆಂಗಳೂರು ಹಾಗೂ ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕ ಘಟಕವು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಶ್ರೀ ಟಿ.ಟಿ ಹರೀಶ್ ರವರಿಗೆ ” ರಾಜ್ಯ ಮಟ್ಟದ ಉತ್ತಮ ಸಮಾಜ ಸೇವಾ ರತ್ನ ಪ್ರಶಸ್ತಿ ” ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್, ಬೆಂಗಳೂರು ರಾಜ್ಯಾಧ್ಯಕ್ಷರು ಆದ ಶ್ರೀ ಸಿ.ಎನ್.ಅಶೋಕ್, ಶ್ರೀ ವೆಂಕಟೇಶ ಬಡಿಗೇರ್, ಹಗರಿ ಬೊಮ್ಮನಹಳ್ಳಿ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀ ಡಾ.ನಾಗರಾಜ್ ತಂಬ್ರಹಳ್ಳಿ, ಕಾರ್ಯದರ್ಶಿಗಳಾದ ಶ್ರೀ ಅಂಜಿನಪ್ಪ ತಂಬ್ರಹಳ್ಳಿ ಹಾಗೂ ಎಲ್ಲ ಗಣ್ಯ ಮಾನ್ಯರು ಮತ್ತು ಎಲ್ಲ ಸಾಹಿತಿಗಳು, ಕವಿಗಳು, ಉಪಸ್ಥಿತರಿದ್ದರು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ