ವಿಶ್ವ ಕರ್ಮನೆಂದರೆ ಕೇವಲ ನಾಮ, ರೂಪಗಳಲ್ಲ! ಸಕರ್ಮಕ ತತ್ವ – ವೀರೇಶ್ ಕಣೇಕಲ್ ಮಠ.
ಕೂಡ್ಲಿಗಿ ಸ.17
ಸೃಷ್ಟಿ, ಸ್ಥಿತಿ, ಸಂಹಾರ, ತಿರೋಧಾನ ಮತ್ತು ಅನುಗ್ರಹ ಎಂಬ ಐದು ಹೊಣೆಗಾರಿಕೆ ಯುಳ್ಳವನೇ, ವಿಶ್ವಕರ್ಮನೆಂದು ಕರ್ನಾಟಕ ಜಾನಪದ ಪರಿಷತ್ತು, ತಾಲೂಕ ಅಧ್ಯಕ್ಷ ಕೆ.ಯಂ. ವೀರೇಶ್ ನುಡಿದರು. ಪಟ್ಟಣದ ತಾಲೂಕ ಕಚೇರಿಯಲ್ಲಿ ತಾಲೂಕ ಆಡಳಿತ ಹಾಗೂ ತಾಲೂಕ ವಿಶ್ವಕರ್ಮ ಸಮಾಜ ದಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಉಪನ್ಯಾಸ ನೀಡಿದರು. ಯಜುರ್ವೇದದ ಪ್ರಕಾರ ವಿಶ್ವಕರ್ಮನು ತನ್ನ ಸಂಕಲ್ಪ ಮಾತ್ರದಿಂದಲೇ ಈ ಸೃಷ್ಟಿಯನ್ನು ಮಾಡಿದವರು ವಿಶ್ವಕರ್ಮರಾಗಿದ್ದಾರೆ. ಶ್ರುತ, ಧಾರಣ, ಪ್ರಜ್ಞಾಶಕ್ತಿಗಳ ಮೂಲಕ ಜಗತ್ತಿನ ಚೇತನ ಮತ್ತು ಅಚೇತನ ರೂಪಗಳಲ್ಲಿ ಅಸಾಧಾರಣ ಚೈತನ್ಯಶಕ್ತಿ ತುಂಬಿದವರು, ಸೃಷ್ಟಿಯಲ್ಲಿರುವ ಚರಾಚರವಾಗಲೀ, ಮೂರ್ತ ಅಮೂರ್ತವಾಗಲೀ, ಯಾವುವೂ ನಿಷ್ಕರ್ಮ ವಾಗಿರುವುದು ಸಾಧ್ಯವಿಲ್ಲ. ಎಲ್ಲ ಕರ್ಮಗಳಿಗೆ ವಿಶ್ವಕರ್ಮನೇ ಅಧಿಷ್ಠಾನ ಕರ್ತೃವಾಗಿದ್ದಾನೆ. ಆದ್ದರಿಂದ ವಿಶ್ವಕರ್ಮನೆಂದರೆ, ಸಕಲ ಶಕ್ತಿವಂತ ಹಾಗೂ ಸರ್ವಸ್ಯ ಕರ್ತಾರ ಎಂದು ವೇದಗಳಲ್ಲಿ ಉಲ್ಲೇಖವಿದೆ ಎಂದು ಕೆ.ಯಂ.ವೀರೇಶ್ ಹೇಳಿದರು. ಇತನಿಗೆ ನಾಮ, ರೂಪಗಳಲ್ಲ, ಅದೊಂದು ಸಕರ್ಮಕ ತತ್ವ, ಮೌನೇಶ್ವರರು. ಮೂವತ್ತು ಮೂರು ಕೋಟಿ ದೇವತೆಗಳಿಗೆ ನಾಮ, ರೂಪಗಳನ್ನು ಕೊಟ್ಟು, ಅವರಿಗೆ ಕರ್ತೃತ್ವ ಮತ್ತು ಕರ್ತವ್ಯಗಳನ್ನು ನಿಯಮಿಸಿದ ವಿಶ್ವಕರ್ಮನಿಗೆ ನಾಮ, ರೂಪಗಳಿಲ್ಲ ಎಂದರು. ರುದ್ರತ್ವ, ವಿಷ್ಣುತ್ವ, ಬ್ರಹ್ಮತ್ವ, ನಾರಾಯಣತ್ವ, ಇಂದ್ರತ್ವ, ಅಗ್ನಿತ್ವ ಮುಂತಾದ ಎಲ್ಲಾ ರೂಪ ಮತ್ತು ಕರ್ಮಗಳು ಗುಣಾತ್ಮಕವಾಗಿ ವಿಶ್ವಕರ್ಮರಲ್ಲಿ ಅಡಕವಾಗಿವೆ.

ಶಿವ, ವಿಷ್ಣು, ಇಂದ್ರ ಮತ್ತಿತರ ದೇವರುಗಳಿಗೆ ಅಸ್ತ ಹಾಗೂ ರಥಗಳನ್ನು ಮಾಡಿಕೊಟ್ಟು, ದುಷ್ಟ ರಕ್ಕಸರ ವಧೆಗೆ ತ್ರಿಶೂಲ, ಸುದರ್ಶನ ಚಕ್ರ, ಇನ್ನಿತರ ಅಯುಧಗಳನ್ನು ನಿರ್ಮಿಸಿದ್ದಾರೆ. ಮಣ್ಣು, ಮರ, ಕಲ್ಲು, ಲೋಹಗಳನ್ನು ಬಳಸಿ ಸಾಧನ, ಸಲಕರಣೆ ಸಿದ್ದಪಡಿಸುವ ಕರ ಕೌಶಲ್ಯ ವುಳ್ಳವರಾಗಿದ್ದು, ಇವರ ಕೈಯಲ್ಲಿ ಮರದ ಕೊರಡು ಕಲೆಯಾಗುತ್ತದೆ. ಕಲ್ಲು ಶಿಲ್ಪವಾಗಿ ಅರಳುತ್ತದೆ. ದೇವಾನು ದೇವತೆಗಳು ಸಂಚರಿಸಲು ಪುಷ್ಪಕ ವಿಮಾನ ಇವರ ಕೊಡುಗೆಯಾಗಿದೆ. ಜಾತಿ, ಧರ್ಮದ ತಾರತಮ್ಯವಿಲ್ಲದೆ ಎಲ್ಲಾ ಜನಾಂಗದವರನ್ನು ಸಮಾನವಾಗಿ ಕಂಡವರು ಎಂದರು. ಮಹಾಭಾರತ ದಿಂದ ಪ್ರಸ್ತುತ ಜಗತ್ತಿನಲ್ಲಿಯೂ ಭಗವಾನ್ಜ ವಿಶ್ವಕರ್ಮ ಜನಾಂಗದವರು ತಮ್ಮದೇ ಶೈಲಿಯಲ್ಲಿ ಮಾನವರಿಗೆ ಕೊಡುಗೆಗಳನ್ನು ನೀಡಿದ್ದಾರೆ. ಭಾರತ ದೇಶವು ಕೃಷಿಗೆ ಪೂರಕವಾಗಿದೆ, ಕೃಷಿ ಚಟುವಟಿಕೆಗಳನ್ನು ನಡೆಸಲು ಕುಂಟೆ, ರಂಟೆ, ಕುಡುಗೋಲು ಸೇರಿದ ಮತೆ ಅನೇಕ ಪರಿಕರಗಳನ್ನು ತಯಾರಿಸುವಲ್ಲಿ ಸಿದ್ಧ ಹಸ್ತರು. ಮನೆಗಳಿಗೆ ಬಾಗಿಲು, ಚೌಕಟ್ಟು ಹಾಗೂ ಆಭರಣ ತಯಾರಿಕೆಯಲ್ಲಿ ನಿಪುಣರು. ಬದಲಾದ ಸನ್ನಿವೇಶದಲ್ಲಿ ಕುಲ ಕಸುಬುಗಳು ಕಣ್ಮರೆಯಾಗುತ್ತಿವೆ. ತಾಂತ್ರಿಕತೆಯ ಈ ಯುಗದಿಂದ ಈ ಜನಾಂಗ ಆರ್ಥಿಕವಾಗಿ ದುರ್ಬಲ ಗೊಂಡಿದ್ದಾರೆ. ಶೈಕ್ಷಣಿಕವಾಗಿ ಹಾಗೂ ರಾಜಕೀಯ ವಾಗಿಯೂ ಸಹ ತೀರ ಹಿಂದುಳಿದಿದ್ದಾರೆ ಎಂದರು. ಸರ್ಕಾರ ಇವರ ಕುಲ ಕಸುಬುಗಳನ್ನು ಆಧರಿಸಿ ಇವರಿಗೆ ಸ್ವ ಉದ್ಯೋಗ ಕಲ್ಪಿಸಲು ಯೋಜನೆಗಳನ್ನು ರೂಪಿಸ ಬೇಕಾಗಿದೆ. ಸಣ್ಣ ಕೈಗಾರಿಕೆ ಅಡಿಯಲ್ಲಿ ಆರ್ಥಿಕ ಸಹಾಯ ಸೇರಿದಂತೆ ತರಬೇತಿಗಳನ್ನು ಹೆಚ್ಚಾಗಿ ನೀಡಿ ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದು ಕಳಕಳಿ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ.ಕೂಡ್ಲಿಗಿ.ವಿಜಯನಗರ