ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕೆ ಗೋಷ್ಠಿಗೆ ಪ್ರವೇಶ ನಿರಾಕರಣೆ ಹಿನ್ನೆಲೆ ಸತ್ಯಾಗ್ರಹ ಮಾಡುತ್ತಿರುವ ಕರ್ನಾಟಕ ಪತ್ರಕರ್ತರ ಸಂಘಕ್ಕೆ ನ್ಯಾಯ ಒದಗಿಸಬೇಕೆಂದು ಮನವಿ.
ಕೂಡ್ಲಿಗಿ ಸ.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ತಾಲೂಕ ಆಡಳಿತ ಕಛೇರಿಯಲಿ ಶುಕ್ರವಾರ ರಂದು ಮಾನ್ಯ ತಹಸೀಲ್ದಾರ್ರಾದ ಅಂಬರೀಶ್ ಅವರಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪತ್ರಕರ್ತರಿಗಾಗಿಯೇ ನಿರ್ಮಾಣ ಗೊಂಡಿರುವ ಪತ್ರಿಕಾ ಭವನ ಕೆಲವೇ ಪಟ್ಟ ಭದ್ರ ಹಿತಾಸಕ್ತಿಗಳ ಹಿಡಿತದಲ್ಲಿದ್ದು. ಇತರ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿದ ಪತ್ರಕರ್ತರ ಸಂಘ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು. ನಾಳೆ ನ್ಯಾಯ ಸಮ್ಮತವಾಗಿ ಇತರೆ ಪತ್ರಕರ್ತರಿಗೆ ಪತ್ರಿಕೆ ಭವನಕ್ಕೆ ಪ್ರವೇಶ ನೀಡುವಂತೆ ಕೂಡ್ಲಿಗಿ ತಾಲೂಕ ಘಟಕ ಕರ್ನಾಟಕ ಪತ್ರಕರ್ತರ ಸಂಘದ ಎಲ್ಲಾ ಪತ್ರಕರ್ತರು ಹಾಗೂ ಕೆಬಿ ಹಿರೇಮಠ ಪತ್ರಕರ್ತರು ಸುಮಾರು ಒಂದು ವರ್ಷ ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದರು.

ನ್ಯಾಯ ಸಿಗದ ಹಿನ್ನೆಲೆಯಲ್ಲಿ ಈ ಸತ್ಯಗ್ರಹ ಮಾಡುತ್ತಿರುವ ಕೆ.ಬಿ ಹಿರೇಮಠ್ ಮತ್ತು ಸಂಘದ ಎಲ್ಲಾ ಸದಸ್ಯರಿಗೆ ಮಾನ್ಯ ಜಿಲ್ಲಾಧಿಕಾರಿಗಳಿಂದ ನ್ಯಾಯ ಸಿಗಬೇಕಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ನಮ್ಮ ಕೆ.ಬಿ ಹಿರೇಮಠ್ ಮತ್ತು ಸಂಘದ ಎಲ್ಲಾ ಸದಸ್ಯರಿಗೆ ನ್ಯಾಯವನ್ನು ದೊರಕಿಸಿ ಕೊಡಬೇಕೆಂದು ಈ ಮೂಲಕ ಕೂಡ್ಲಿಗಿ ತಾಲೂಕ ಪತ್ರಕರ್ತ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸಾಲುಮನೆ ಇವರ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಮುಖಾಂತರ ಮನವಿ ಪತ್ರ ಕೊಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪತ್ರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ಗುನ್ನಳ್ಳಿ ಶ್ರೀಧರ್ ಹಾಗೂ ಗೌರವಾಧ್ಯಕ್ಷರಾದ ಹೊಂಬಾಳೆ ತಿಪ್ಪೇಸ್ವಾಮಿ, ಮಹಿಳಾ ವಿಭಾಗ ದ ಕರ್ನಾಟಕ ಪತ್ರಕರ್ತ ಸಂಘದ ಅಧ್ಯಕ್ಷರಾದ ಭಾಗ್ಯಮ್ಮ, ಮಹದೇವ, ಹಾಗೂ ಇನ್ನು ಇತರ ಮುಖಂಡರು ಗಳಾದ ಉಪ್ಪಾರ್ ರಾಘವೇಂದ್ರ, ಬಾಲಾಜಿ ಇತರರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ