ಸಂಘದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದು ಕೊಳ್ಳಲು – ಎನ್. ಹೇಮಗಿರಿ ಗೌಡ್ರು ಕರೆ.
ಕೋಗಳಿ ಸ.20

ವಿಜಯನಗರ ಜಿಲ್ಲಾ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 3 ನೇ. ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆಯನ್ನು ಇಂದು ಸಂಘದ ಕಛೇರಿಯಲ್ಲಿ ಹಮ್ಮಿ ಕೊಳ್ಳಲಾಗಿತ್ತು.ಸಂಘದ ಅಧ್ಯಕ್ಷರಾದ ಶ್ರೀ ಎನ್ ಹೇಮಗಿರಿ ಗೌಡ್ರು ಇವರು ಮಾತನಾಡಿ ಸಂಘವು 3 ವರ್ಷಗಳಲ್ಲಿ 499 ಜನ ಸದಸ್ಯರನ್ನು ಒಳಗೊಂಡು, 6.33 ಲಕ್ಷ್ಯ ರೂಗಳ ಷೇರು ಹೊಂದಿದೆ, ಸಂಘವು 3 ವರ್ಷದಲ್ಲಿ 47.84 ಲಕ್ಷ್ಯ ರೂ ಗಳ ಕೆ.ಸಿ.ಸಿ. ಸಾಲ ವಿತರಿಸಿದೆ, 43.08 ಲಕ್ಷ್ಯ ರೂ ಗಳ ಪಿಗ್ಮಿ ಸಂಗ್ರಹಣೆ ಮಾಡಿ, 39.15 ಲಕ್ಷ್ಯ ರೂ.ಗಳ ಎನ್.ಎ.ಬಿ.ಡಿ.ಪಿ. ಸಾಲ ವಿತರಿಸಲಾಗಿದೆ, ಒಟ್ಟಾರೆಯಾಗಿ 86.99 ಲಕ್ಷ್ಯ ರೂ ಗಳ ಸಾಲ ವಿತರಿಸಿದೆ. ಸಂಘದ ಷೇರುದಾರ ರೈತ ಸದಸ್ಯರ ಅನುಕೂಲಕ್ಕಾಗಿ ಸುಮಾರು 9.19 ಲಕ್ಷ್ಯ ರೂ ಗಳ ರಸ ಗೋಬ್ಬರ ಖರೀದಿಸಿ, ಮಾರಾಟ ಮಾಡಲಾಗಿದೆ. ಎಂದು ತಿಳಿಸಿದ್ದರು.

ಹಾಗೂ ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯಲ್ಲಿ 141 ಕುಟುಂಬಗಳು ಸೌಲಭ್ಯಗಳನ್ನು ಸದುಪಯೋಗ ಪಡೆದು ಕೊಂಡಿವೆ ಎಂದು ತಿಳಿಸಿದರು. ಮುಖ್ಯ ಕಾರ್ಯ ನಿರ್ವಾಹಕರಾದ ಶ್ರೀ ವಿ. ರವಿ ಯವರು ಸಂಘದ 2023-24ನೇ ಸಾಲಿನ ಲೆಕ್ಕ ಪರಿಶೋಧನೆ ಕೈಗೊಳ್ಳಲಾಗಿದ್ದು, ಸಂಘವು 97,459 ರೂ ಗಳ ನಿವ್ವಳ ಲಾಭ ಗಳಿಸಿದೆ, ಲೆಕ್ಕ ಪರಿಶೋಧನೆಯಲ್ಲಿ ಬಿ ಶ್ರೇಣಿ ಪಡೆದಿದೆ ಎಂದು ಲೆಕ್ಕಪಾರಿಶೋಧನಾ ವರದಿ ಮಂಡಿಸಿದರು, ಸಂಘದ ಪ್ರಸಕ್ತ ವರ್ಷದ ಮುಂಗಡ ವಾರ್ಷಿಕ ಆಯಾ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದು ಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಂ.ವೀರಣ್ಣ, ಬಿ.ಮಾರುತಿ, ಹೆಚ್.ಎಂ.ವೀರಭದ್ರಯ್ಯ, ನಂದಿಬಂಡಿ ಕೊಟ್ರೇಶ್, ಎಂ.ಬಸವರಾಜ, ಎನ್.ಮಂಜುನಾಥ, ಬಿ.ಪ್ರೇಮಕ್ಕ ಉಪಸ್ಥಿತರಿದ್ದರು,ಕೋಗಳಿ, ಕೆ.ಕೋಡಿಹಳ್ಳಿ, ಹಾಗೂ ಕೆ ಕೆ ತಾಂಡ, ಗ್ರಾಮದ ಎಲ್ಲಾ ಷೇರುದಾರ ಸದಸ್ಯರುಗಳು 3ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆಗೆ ಆಗಮಿಸಿ, ಸಭೆಯನ್ನು ಯಶಸ್ವಿ ಗೊಳಿಸಿದರು. ಕು. ಬಿ ಎಂ ನಂದಿನಿ ಪ್ರಾಥನೆ ಹಾಡಿದರು.ಸಂಫದ ಸಿಬ್ಬಂದಿಗಳಾದ ಕೆ.ಉಮೇಶ, ಬಿ ಕೋಟೆಪ್ಪ, ಸಿ ಗೋಣ್ಣೆಪ್ಪ ಪಿಗ್ಮಿ ಸಂಗ್ರಹಕ ಟಿ ಎಂ ಮಹೇಶ್ ಹಾಗೂ ಇತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು