ಕೃಷಿಕರನ್ನು ಆರ್ಥಿಕವಾಗಿ ಸಬಲರನ್ನಾಗಿ ಸುವಂತಹ ಕೆಲಸ ಮಾಡುವಲ್ಲಿ ನಮ್ಮ ಸಹಕಾರ ಸಂಘ ಮೆಲ್ಪಂತಿ ಯಾಗಿದೆ – ನಂದಿ ವಿರೂಪಾಕ್ಷಪ್ಪ.
ಹಿರೇ ಹೆಗ್ಡಾಳ್ ಸ.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದಲ್ಲಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ವರ್ಷದ ವಾರ್ಷಿಕ ಮಹಾಜನ ಸಭೆ ಸಂಘದ ಕಾರ್ಯದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ನಂದಿ ವಿರೂಪಾಕ್ಷಪ್ಪ ಸಹಕಾರಿ ತತ್ವದಲ್ಲಿ ನಂಬಿಕೆ ಆಚರಣೆಯಲ್ಲಿ ಬದ್ಧತೆ ಎನ್ನುವಂತೆ ಸಹಬಾಳ್ವೆ ಸಮಾನತೆ ತತ್ವದಡಿ ಸಂಘದ ಸದಸ್ಯರ ಹಿತ ಬಯಸಿ ನಿಸ್ವಾರ್ಥವಾಗಿ ಸೇವಾ ಮನೋಭಾವ ದೊಂದಿಗೆ ಕೃಷಿಕರನ್ನ ಅರ್ಥಿಕವಾಗಿ ಸಬಲರನ್ನಾಗಿ ಸುವಂತಹ ಕೆಲಸ ಮಾಡುವಲ್ಲಿ ನಮ್ಮ ಸಹಕಾರ ಸಂಘ ಮೇಲ್ಪಂಕ್ತಿ ಯಾಗಿದೆ. ಕೇಂದ್ರ ಸರಕಾರ ಸಹಕಾರ ಸಚಿವಾಲಯ ಸ್ಥಾಪಿಸಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚೆಚ್ಚು ಸಹಕಾರ ಸಂಘಗಳನ್ನು ತೆರೆದು ಕಟ್ಟಕಡೆಯ ಕೃಷಿಕರು ಸಹಕಾರ ಆಂದೋಲನದಲ್ಲಿ ಭಾಗಿಯಾಗಿ ಸಂಘದ ನೆರವನ್ನು ಪಡೆಯುವ ಮೂಲಕ ಅರ್ಥಿಕವಾಗಿ ಸದೃಢರಾಗಲು ಅದರಲ್ಲೂ ಸಹಕಾರ ಸಂಘಗಳನ್ನು ಗಣಿಕೀಕರಣ (ಡಿಜಿಟಲಿಕರಣ) ಜೊತೆಗೆ ಸಂಘದ ವ್ಯವಹಾರವನ್ನು ಅಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಕೆ ಮಾಡುವ ಮುಖಾಂತರ ಗ್ರಾಹಕ ಸ್ನೇಹಿಯಾಗಿ ಪಾರದರ್ಶಕ ತೆಯಿಂದ ನಂಬಿಕೆ ವಿಶ್ವಾಸಾರ್ಹತೆ ಯೊಂದಿಗೆ ಕಾರ್ಯನಿರ್ವಹಿಸಿದರೆ ದೇಶದ ಸಾಮಾಜಿಕ ಅರ್ಥಿಕ ಅಭಿವೃದ್ಧಿಗೆ ಸಹಕಾರಿ ಯಾಗಬಲ್ಲದು. ಈ ಮಹಜನ್ ಸಭೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಸ್.ಎಸ್ ಕೊಟ್ರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಬಾರಿಕರ ದೊಡ್ಡ ಹನುಮಂತಪ್ಪ ಸಂಘದ ಮಾಜಿ ಅಧ್ಯಕ್ಷ ಜಿ.ಆರ್ ಚನ್ನಬಸಪ್ಪ ಮಾಜಿ ಉಪಾಧ್ಯಕ್ಷರುಗಳಾದ ತಿಂದಪ್ಪ ಎ ಬಸವರಾಜ ನಿರ್ದೇಶಕರುಗಳಾದ ಎಂ ಗುರುಬಸವರಾಜ ಕರೂರು ಚಂದ್ರಯ್ಯ ಚಲುವಾದಿ ಚನ್ನಬಸಮ್ಮ ಸಂಘದ ಮುಖ್ಯ ಕಾರ್ಯ ನಿರ್ವಹಕ ಬಿ ಕೊಟ್ರೇಶ್ ಸಂಘ ವಾರ್ಷಿಕ ಲೆಕ್ಕಾಪತ್ರ ಮಂಡಿಸಿದರು ಸಂಘದ ಬಿ.ಸಿ.ಎಂ ಹಾಸ್ಟೇಲ್ ನಿಲಯ ಪಾಲಕ ಮಂಜುನಾಥ್ ಪ್ರಾರ್ಥಿಸಿದರು ಸಿಬ್ಬಂದಿ ಗಳಾದ ಯು.ಜಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ ವಾಮದೇವಯ್ಯ ದಲಿತ ಮುಖಂಡ ಕೆ ಮಹೇಶ್ ಪಕ್ಕೀರಪ್ಪ ಚಿದನಂದಪ್ಪ ಅಮರಶೆಟ್ಟಿ ಕೊಟ್ರಪ್ಪ ಬೆಣ್ಣೆ ಶೆಟ್ಟಿ ನೀಲಪ್ಪ ಮೇಘರಾಜ್ ಕೆ ಎಂ ಶಿವಪ್ರಕಾಶ್ ಪಿ ನಾಗರಜ್ ಕೆ ಮಹದೇವ ಶಿವಣ್ಣ ಕರಿಬಸವರಾಜ್ ಸಿಬ್ಬಂದಿ ಸಿ.ನಾಗಪ್ಪ ಇನ್ನಿತರರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ .