ತಾಲೂಕ ಮಟ್ಟದ ದಸರಾ ಕ್ರೀಡಾಕೂಟ ಆಯ್ಕೆ 2024/25 ಕಾರ್ಯಕ್ರಮ.
ರಾಯಬಾಗ ಸ.23

ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕು. ಮತ್ತು ಕ್ರೀಡಾಸಕ್ತಿಯನ್ನು ಬೆಳೆಸಿ ಕೊಂಡಲ್ಲಿ ಸದೃಡವಾದ ಶರೀರವನ್ನು ಹೊಂದಲು ಸಾಧ್ಯವಾಗುವುದು ಎಂದು ರಾಯಬಾಗ ಪಟ್ಟಣ ಪಂಚಾಯತಿ ಅಧ್ಯಕ್ಷ ಅಶೋಕ ಅಂಗಡಿ ಅವರು ಹೇಳಿದರು.ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ, ಪಟ್ಟಣ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ರಾಯಬಾಗ ಇವರ ಸಂಯುಕ್ತ ಆಶ್ರಯಗಳಲ್ಲಿ ರಾಯಬಾಗ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಡ ಆಯ್ಕೆ 2024-25 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಲೂಕಾ ಕ್ರೀಡಾಗಂಣವನ್ನು ಅಭಿವೃದ್ದಿ ಪಡಿಸಲು ಸಹಾಯ ಸಹಕಾರ ನೀಡಲಾಗುವುದು ಎಂದರು.ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಯಬಾಗ ತಾಲೂಕಿನಲ್ಲಿ ಇರುವುದರಿಂದ ಅವರಿಗೆ ಹೆಚ್ಚಿನ ಪ್ರೋತ್ಸಾಹವನ್ನು ಎಲ್ಲರೂ ನೀಡುವುದರ ಮೂಲಕ ತಾಲೂಕಿನ ಪ್ರತಿಭೆಗಳನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸು ವಂತಾಗಬೇಕು. ಕ್ರೀಡಾಂಗಣಗಳು ಅಭಿವೃದ್ದಿ ಹೊಂದಿ ಕ್ರೀಡಾಪಟುಗಳಿಗೆ ಪೂರಕ ವಾಗಬೇಕೆಂದು ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಜೀವ ನಾಯಿಕ ಅವರು ಹೇಳಿದರು.ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವಿಕ್ಷಕ ಎಂ.ಪಿ. ಜಿರಗಾಳ, ಎಸ್.ಎಲ್. ಜಮಾದಾರ, ಎಲ್.ಬಿ.ಬಂಡಗಾರ, ಆರ್.ಟಿ. ಅಲಬಾಳ, ಡಿ.ಸಿ. ಸಮಾಜೆ, ಆನಂದ ಸನದಿ, ಸುನೀಲ ಸಾನೆ, ಮುತ್ತಪ್ಪ ಕಾಂಬಳೆ, ಎಂ.ಡಿ.ಹುಲ್ಲೆನ್ನವರ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ವರದಿ: ಬಸವರಾಜ.ಮಡಿವಾಳ.ರಾಯಬಾಗ.