ಹುನಗುಂದ ಸಾರ್ವಜನಿಕ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ – ಶಾಸಕ ಕಾಶಪ್ಪನವರ.
ಹುನಗುಂದ ಸ.24

ಬಡವರಿಗೆ, ರೈತರಿಗೆ, ಸಾರ್ವಜನಿಕರಿಗೆ ಆರೋಗ್ಯದ ಅನುಕೂಲವಾಗುವಂತೆ ಆಸ್ಪತ್ರೆಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ,ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಮಂಗಳವಾರ ಪಟ್ಟಣದ ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಹಮ್ಮಿ ಕೊಳ್ಳಲಾಗಿದ್ದ ೮೫ ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಉನ್ನತಿಕರಣದ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಕೆಲವು ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎನ್ನುವ ಮಾತು ಕೇಳಿ ಬರುತ್ತಿದ್ದು. ಒಂದು ಆಸ್ಪತ್ರೆಯಲ್ಲಿ ಶೌಚಾಲಯ, ಹಾಸಿಗೆ ವ್ಯವಸ್ಥೆ ಬ್ಲಡ್ ಬ್ಯಾಂಕ್ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳು ಒದಗಿಸುವ ಮೂಲಕ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಹೋಗದಂತೆ ಸಾರ್ವಜನಿಕ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ ಹುನಗುಂದಕ್ಕೆ ೫೦ ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಮಂಜುರಾಗಿದ್ದು ಈಗಾಗಲೇ ಜಾಗವನ್ನು ಗುರುತಿಸಿಲಾಗಿದೆ. ಶ್ರೀಘ್ರದಲ್ಲಿಯೇ ಅದರ ಕಾಮಗಾರಿಯನ್ನು ಆರಂಭವಾಗುವುದು. ಅದರ ಜೊತೆಗೆ ೫೦ ಲಕ್ಷ ವೆಚ್ಚದಲ್ಲಿ ಹೈಟೆಕ್ ಲ್ಯಾಬಟರಿ ಕೂಡ ಮಂಜೂರುರಾಗಿದೆ.ಒಂದು ತಿಂಗಳಿಗೆ ೨೦೦ ಹೆರಿಗೆ ಆಗಿವೆ. ಇದು ಜಿಲ್ಲೆಯಲ್ಲಿ ಅತ್ಯುತ್ತಮ ಆಸ್ಪತ್ರೆಯಾಗಿದ್ದು. ಯಾವುದೇ ಖಾಸಗಿ ಆಸ್ಪತ್ರೆಗಿಂತ ಸರ್ಕಾರಿ ಆಸ್ಪತ್ರೆ ಕಡಿಮೆ ಇಲ್ಲ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿ ಕಾರ್ಯ ಕೈ ಕೊಳ್ಳಲಾಗುವುದು. ಜಿಲ್ಲೆಯಲ್ಲಿ ಹುನಗುಂದ-ಇಲಕಲ್ಲ ಅವಳಿ ತಾಲೂಕಿಗೆ ತಲಾ ಒಂದರಂತೆ ಎರಡು ಅಂಬುಲೆನ್ಸ್ ನೀಡಲಾಗಿದೆ ಎಂದರು.ಮುಖ್ಯ ವೈಧ್ಯಾಧಿಕಾರಿ ಡಾ, ಮಂಜುನಾಥ ಅಂಕೋಲಕರ ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿನ ಶೌಚಾಲಯ, ಸ್ನಾನ ಗೃಹ, ಹಾಗೂ ನಾಲ್ಕು ವರ್ಷದಿಂದ ಮೇಲಿನ ವಾರ್ಡಗಳು ಸೋರುತ್ತೇವೆ. ಆದ್ದರಿಂದ ಈ ಅನುದಾನದಿಂದ ರಿಪೇರಿ ಮಾಡಲಾಗುವುದು. ಆಸ್ಪತ್ರೆಯ ಕಂಪೌಂಡ್ ಮತ್ತು ಮೂಲಭೂತ ಸೌಕರ್ಯಗಳು ಶಾಸಕ ವಿಜಯಾನಂದ ಕಾಶಪ್ಪನವರ ವಿಶೇಷ ಕಾಳಜಿಯಿಂದ ಅನುದಾನ ಬಂದಿದ್ದು. ಆ ಅನುದಾನದಲ್ಲಿ ಆಸ್ಪತ್ರೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದರು.ವೇ.ಮೂ.ಮಹಾಂತಯ್ಯ ಗಚ್ಚಿನಮಠ,ಉಪಾಧ್ಯಕ್ಷ ಶಿವಾನಂದ ಕಂಠಿ, ಸಮಿತಿ ಸದಸ್ಯ ಸಂಜೀವ ಜೋಷಿ, ಮಹಾಂತೇಶ ಅವಾರಿ,ಬಸವರಾಜ ಗದ್ದಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಶಿವನಗೌಡ ಜಡಿಯಪ್ಪನವರ,ಶೇಖರಪ್ಪ ಬಾದವಾಡಗಿ,ಶಿವಪ್ಪ ನಾಗೂರ,ರವಿ ಹುಚನೂರ, ಶಕುಂತಲಾ ಗಂಜೀಹಾಳ, ಸುರೇಶ ಹಳಪೇಟಿ,ಗಂಗಣ್ಣ ಇಲಕಲ್ಲ,ಮಹಾಲಿಂಗಯ್ಯ ಹಿರೇಮಠ, ಟಿ.ಎಚ್.ಓ ಡಾ, ಎಸ್.ಎಚ್.ಅಂಗಡಿ, ಸಿಪಿಐ ಸುನೀಲ ಸವದಿ, ಪಿಎಸ್ಐ ಪ್ರಕಾಶ ಡಿ. ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ